ದಲಿತರ ಸಿಎಂ ಕೂಗು ಇವತ್ತಿಗೆ ಅಪ್ರಸುತ. ದಲಿತ ಸಿಎಂ ಕೂಗಿಗೆ ಅಭಿಮತ ಇಲ್ಲ ಎಂದು ಎಂದು ಮೈಸೂರಿ ( MYSURU ) ನಲ್ಲಿ ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ( DR.G PARAMESHWAR ) ತಿಳಿಸಿದ್ದಾರೆ. ನಾವು ಅಧಿಕಾರಕ್ಕೆ ಬರಬೇಕು. ಅದು ಬಿಟ್ಟು ದಲಿತ ಸಿಎಂ ಬಗ್ಗೆ ನಾವು ಮಾತನಾಡಲ್ಲ. ನಾವು ಎಸ್ ಸಿ, ಎಸ್ ಟಿ ಜನರಿಗೆ ಹೇಳುವುದು ನಮ್ಮ ಬೆಂಬಲಿಸಿ ಅಂತ ಎಂದು ಹೇಳಿದ್ದಾರೆ.
SC-ST ವಿದ್ಯಾರ್ಥಿಗಳಿಗೆ ಈಗಾಗಲೇ 14 ರಾಜ್ಯಗಳಲ್ಲಿ ವಿದ್ಯಾರ್ಥಿ ವೇತನವನ್ನು ಕೇಂದ್ರ ಸರ್ಕಾರ ನಿಲ್ಲಿಸಿದ್ದಾರೆ. ಜಾತೀಯತೆ ಹೆಚ್ಚಾಗುವ ಕಾರ್ಯಕ್ರಮಗಳನ್ನ ಬಿಜೆಪಿಯವರು ಮಾಡುತ್ತಿದ್ದಾರೆ. SC-ST ಜನಾಂಗದವರ ಭೂಮಿ ವಿಚಾರದಲ್ಲಿಯೂ ತೊಂದರೆಗಳಾಗಿವೆ. ಇದರ ಬಗ್ಗೆಯೂ ನಾವು ಹೋರಾಟ ಮಾಡಬೇಕು. ಈ ಬಾರಿಯ ಚುನಾವಣೆಯಲ್ಲಿ SC-ST ಸಮುದಾಯದವರು ಸಂಪೂರ್ಣವಾಗಿ ಕಾಂಗ್ರೆಸ್ ಪಕ್ಷವನ್ನ ಬೆಂಬಲಿಸಬೇಕು. ತಮ್ಮ ಕಚೇರಿಯಲ್ಲಿ ಅಂಬೇಡ್ಕರ್, ಜಗಜೀವನ್ ರಾವ್ ಫೋಟೋ ಇಡದವರು ದಲಿತರ ಮನೆಯಲ್ಲಿ ಊಟ ಮಾಡಿ ವಾಸ್ತವ್ಯ ಹೂಡುತ್ತಿದ್ದಾರೆ. ಇದೆಲ್ಲ ಚುನಾವಣೆಯ ಸಂದರ್ಭದ ನಾಟಕ. ಇದಕ್ಕೆ SC-ST ಸಮುದಾಯದವರು ಕರಗಬಾರದು ಎಂದು ಕಿವಿಮಾತು ಹೇಳಿದ್ರು. ಇದನ್ನು ಓದಿ : – ಕಾಂಗ್ರೆಸ್ ಪಕ್ಷಕ್ಕೆ ಈ ಭಾರಿ ಗೆಲ್ಲುವ ಅವಕಾಶ ಇದೆ- ದಿನೇಶ್ ಗುಂಡೂರಾವ್
ಬಿಜೆಪಿ ಯವರು ಮೀಸಲಾತಿಯನ್ನ ಹೆಚ್ಚು ಮಾಡಿದ್ದೇವೆ ಎಂದು ಹೇಳಿಕೊಂಡು ಹೋರಾಡುತ್ತಿದ್ದಾರೆ. SC ಗೆ 15 ರಿಂದ 17 ST ಗೆ 3 ರಿಂದ 7 ಪರ್ಸೆಂಟ್ ರಿಸರ್ವೇಶನ್ ಗೆ ಅಡಿಗಲ್ಲು ಹಾಕಿದ್ದು ಕಾಂಗ್ರೆಸ್ ( CONGRESS ) ಪಕ್ಷ. ಆದರೆ ಇದನ್ನು ನಾವು ಮಾಡಿದ್ದೆಂದು ಬಿಜೆಪಿಯವರು ಹೇಳುತ್ತಿದ್ದಾರೆ. ನಾವು SC-ST ಜನರಿಗೆ ಹೇಳುವುದು ನಮ್ಮ ಬೆಂಬಲಿಸಿ ಅಂತ ಮಾತ್ರ. ದಲಿತರು ಸಿಎಂ ಆಗೋದು ಕಾಂಗ್ರೆಸ್ ನಲ್ಲಿಯೇ. ಅದು ಬಿಟ್ಟು ಬೇರೆ ಯಾವುದೇ ಪಕ್ಷದಲ್ಲೂ ಸಾಧ್ಯವಿಲ್ಲ ಎಂದು ಹೇಳಿದ್ರು.
ಇದನ್ನು ಓದಿ : – BMTC ನೌಕರರಿಗೆ ಗುಡ್ ನ್ಯೂಸ್ – 5 ಲಕ್ಷ ರೂ. ಆರೋಗ್ಯ ವಿಮೆ ಘೋಷಿಸಿದ ಶ್ರೀರಾಮುಲು