ಇಡೀ ರಾಜ್ಯ ದಸರಾ (Dussehra) ಹಬ್ಬದ ಖುಷಿಯಲ್ಲಿರುವಾಗ ದಲಿತರ ಮೇಲೆ ಉತ್ಸವ ವಿಚಾರಕ್ಕೆ ದೌರ್ಜನ್ಯ ನಡೆದಿದೆ. ಕೋಲಾರ (kolar) ಜಿಲ್ಲೆಯ ಮಾಲೂರು ತಾಲ್ಲೂಕಿನ ಉಲ್ಲೇರಹಳ್ಳಿಯಲ್ಲಿ ದಲಿತ ಕುಟುಂಬ (Dalit family)ಕ್ಕೆ ಬಹಿಷ್ಕಾರ ಪ್ರಕರಣ ಮಾಸುವ ಮುನ್ನವೆ ಮತ್ತೊಂದು ಪ್ರಕರಣ ನಡೆದಿದೆ.
ದಸರಾ ಹಬ್ಬದ ಪ್ರಯುಕ್ತ ಗಂಗಮ್ಮ ಮತ್ತು ಕಾಟೇರಮ್ಮ ದೇವಿಯ ಉತ್ಸವವನ್ನ ದಾನವಹಳ್ಳಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿತ್ತು. ಸವರ್ಣಿಯರಿಂದ ದಲಿತ ಮನೆಗಳ ಬಳಿ ಹಾಗು ದಲಿತ ಬೀದಿಗಳ ಕಡೆ ದೇವರ ಉತ್ಸವ ಬರುವುದಿಲ್ಲ ಎಂದು ದೌರ್ಜನ್ಯ ನಡೆಸಿದ್ದಾರೆ. ಗ್ರಾಮ ದೇವತೆಯನ್ನ ನಮ್ಮ ಬೀದಿ ಹಾಗೂ ಮನೆಗಳ ಬಳಿ ಬರಬೇಕೆಂದು ದಲಿತ ಸಮುದಾಯದವರು ಒತ್ತಾಯಿಸಿದ್ದಾರೆ. ಈ ವೇಳೆ ದಲಿತರ ಮೇಲೆ ಸವರ್ಣಿಯರಿಂದ ದೌರ್ಜನ್ಯ ನಡೆದಿದೆ. ಇದನ್ನೂ ಓದಿ :- ಸಂಘ ಅಥವಾ ಹಿಂದೂಗಳಿಂದ ಅಲ್ಪಸಂಖ್ಯಾತರಿಗೆ ಅಪಾಯ ಇಲ್ಲ- ಮೋಹನ್ ಭಾಗವತ್
ಘಟನೆ ಸಂಬಂಧ 8 ಮಂದಿ ವಿರುದ್ದ ದಲಿತ ದೌರ್ಜನ್ಯ ಹಾಗೂ ಜಾತಿ ನಿಂದನೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯಲ್ಲಿ ಲಂಕೇಶ್, ಶಿವಪ್ಪ, ವಿನೋದ್ ಕುಮಾರ್ ಮೇಲೆ ಇಟ್ಟಿಗೆ ಹಾಗೂ ದೊಣ್ಣೆಗಳಿಂದ ಹಲ್ಲೆ ಮಾಡಿದ್ದಾರೆ. ಘಟನಾ ಸ್ಥಳಕ್ಕೆ ವೇಮಗಲ್ ಪೊಲೀಸರು ಭೇಟಿ ನೀಡಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ :- ಉದ್ಯಮಿ ಮುಖೇಶ್ ಅಂಬಾನಿ ಕುಟುಂಬಸ್ಥರಿಗೆ ಜೀವ ಬೆದರಿಕೆ