ಅಪರಾಧಿಗಳ ಸಿಂಹ ಸ್ವಪ್ನವಾಗಿದ್ದ ದಾವಣಗೆರೆ ( davanagere ) ಪೊಲೀಸ್ ಇಲಾಖೆಯ ಶ್ವಾನ ತುಂಗಾ ( tunga )ಸಾವಿಗೀಡಾಗಿದೆ .
ತುಂಗಾ ಶ್ವಾನವು ತೀವ್ರ ಜ್ವರದಿಂದ ಶ್ವಾನ ಬಳಲುತ್ತಿತ್ತು . ಇಂದು ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಪಾಲಿ ಕ್ಲಿನಿಕ್ ನಲ್ಲಿ ಸಾವನ್ನಪ್ಪಿದೆ .
ಲೇಡಿ ಸಿಂಗಂ ಶ್ವಾನ ತುಂಗಾ ಆಗಸ್ಟ್ 15 ರ ಸ್ವಾತಂತ್ರ್ಯ ಅಮೃತ ಮಹೋತ್ಸವ ದಿನದಂದು ಜಿಲ್ಲಾ ಕ್ರೀಡಾಂಗಣದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದು , ಜನ ಮೆಚ್ಚುಗೆ ಗಳಿಸಿತ್ತು . ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದ ತುಂಗಾ , 70 ಕ್ಕೂ ಹೆಚ್ಚು ಕೊಲೆ , 35 ಕ್ಕೂ ಹೆಚ್ಚು ಕಳ್ಳತನ , ದರೋಡೆ ಪ್ರಕರಣಗಳನ್ನು ಭೇದಿಸಿತ್ತು.
ಅನಾರೋಗ್ಯದಿಂದ ನಿಧನಹೊಂದಿದ ತುಂಗಾಕ್ಕೆ ಪೊಲೀಸ್ ಇಲಾಖೆ ಸಿಬ್ಬಂದಿ , ಅಧಿಕಾರಿಗಳು ಹಾಗೂ ಎಸ್ಪಿಸಿಬಿ ರಿಷ್ಯಂತ್ ಸಂತಾಪ ಸೂಚಿಸಿದ್ದಾರೆ .
ಇದನ್ನೂ ಓದಿ : – ನಾನು ಸಿಎಂ ಆಗಿದ್ದಾಗ ಕಮಿಷನ್ ವ್ಯವಸ್ಥೆ ಇರಲಿಲ್ಲ – ಹೆಚ್.ಡಿ ಕುಮಾರಸ್ವಾಮಿ