ಬೆಂಗಳೂರಿ (Bengaluru) ನ ರಸ್ತೆಯಲ್ಲಿ ಯುವಕರ ಹುಚ್ಚಾಟ ನೋಡಿದ್ರೆ ನಿಜಕ್ಕೂ ಎದೆ ಝಲ್ ಅನ್ನುತ್ತೆ . ವ್ಹೀಲಿಂಗ್ ಮಾಡಿ ಪ್ರತಿದಿನ ಇನ್ಸ್ಟಾಗ್ರಾಮ್ (Instagram) ನಲ್ಲಿ ರೀಲ್ಸ್ ಅಪ್ ಲೋಡ್ ಮಾಡುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಪ್ರತಿದಿನ ವಿಡಿಯೋ ಅಪ್ ಲೋಡ್ ಅದ್ರೂ ಈತನನ್ನ ಪೊಲೀಸರು ಬಂಧಿಸಿಲ್ಲ .
ವ್ಹೀಲಿಂಗ್ (Wheeling) ನಿಂದ ಅಮಾಯಕರ ಪ್ರಾಣ ಹೋದ ಮೇಲೆ ಪೊಲೀಸರು ಎಚ್ಚೆತ್ತುಕೊಳ್ತಾರ ಎಂಬ ಪ್ರಶ್ನೆ ಎದುರಾಗಿದೆ. ಪೊಲೀಸರ ಗಮನಕ್ಕೆ ಬಂದ್ರೂ ಆತನನ್ನ ಪತ್ತೆ ಮಾಡದೆ ನಿರ್ಲಕ್ಷ್ಯ ವಹಿಸಿದ್ದಾರೆ. ವಾಹನದಟ್ಟಣೆ ಇರುವ ಪ್ರದೇಶದಲ್ಲೂ ವ್ಹೀಲಿಂಗ್ ಮಾಡಿ ಶೋ ಆಫ್ ಮಾಡ್ತಿದ್ದಾರೆ. ಈತನ ಇನ್ಸ್ಟಾಗ್ರಾಮ್ ಖಾತೆಯ ತುಂಬೆಲ್ಲಾ ಕೇವಲ ವ್ಹೀಲಿಂಗ್ ವೀಡಿಯೋಸ್ ಗಳಿವೆ. ವ್ಹೀಲಿಂಗ್ ಕ್ರೇಜ್ ಗಾಗಿ ಈತನ ಇನ್ಸ್ಟಾಗ್ರಾಮ್ ಖಾತೆಗೆ 22 ಸಾವಿರ ಜನ ಫಾಲೋವರ್ಸ್ ಇದ್ದಾರೆ .ಈ ರೀತಿಯ ಕ್ರೇಜ್ ಗಾಗಿ ಇನ್ನು ಸಾಕಷ್ಟು ಯುವಕರು ವ್ಹೀಲಿಂಗ್ ಹುಚ್ಚಾಟ ಮಾಡೋದು ಫಿಕ್ಸ್ ಆಗಿದೆ. ಇಂತವರಿಗೆ ಕಡಿವಾಣ ಹಾಕುವಲ್ಲಿ ಪೊಲೀಸರು ವಿಫಲರಾಗುತ್ತಿದ್ದಾರೆ. ಹೆಲ್ಮೆಟ್ ಧರಿಸೋಲ್ಲ, ಬೈಕ್ ಗೆ ನಂಬರ್ ಪ್ಲೇಟ್ ಕೂಡ ಇರೋದಿಲ್ಲ . ಸಾಮಾಜಿಕ ಜಾಲತಾಣದ ಮೇಲೆ ಕಣ್ಣಿಟ್ಟಿದ್ದೀವಿ ಎಂದ ಪೊಲೀಸರು ಏನ್ಮಾಡ್ತಿದ್ದಾರೆ. ಅಥವಾ ಅಮಾಯಕರ ಜೀವ ಬಲಿಯಾದ ಮೇಲೆ ಪೊಲೀಸರು ಎಚ್ಚೆತ್ತುಕೋಳ್ತಾರಾ ನೋಡಬೇಕಾಗಿದೆ.
ಇದನ್ನೂ ಓದಿ : – ಶಾಲಾ ಸಮಸ್ಯೆ ಬಗೆಹರಿಸೋದು ಬಿಟ್ಟು ಪೇಂಟ್ ಬಳಿತಾರಂತೆ – ಸಲೀಂ ಅಹಮ್ಮದ್