ಬೆಂಗಳೂರಿನ (BENGALURU ) ಬ್ರಿಗೇಡ್ ರಸ್ತೆಯ ( BRIGADE ROAD ) ‘5 ಅವೆನ್ಯೂ’ ಶಾಪಿಂಗ್ ಮಾಲ್‌ವೊಂದರ ಕಟ್ಟಡದಿಂದ ಯುವಕ-ಯುವತಿಯರಿಬ್ಬರು ಆಯತಪ್ಪಿ ಬಿದ್ದಿದ್ದಾರೆ. ಯುವತಿ ಸಾವನ್ನಪ್ಪಿ ಯುವಕ ಗಂಭೀರವಾಗಿ ಗಾಯಗೊಂಡಿದ್ದಾನೆ.
ಮೂಲಗಳ ಪ್ರಕಾರ ‘ಆಂಧ್ರಪ್ರದೇಶ ಮೂಲದ ಲಿಯಾ, ನಗರದ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದು, ಕಾಕ್ಸ್ ಟೌನ್ ನಲ್ಲಿ ನೆಲೆಸಿದ್ದರು. ಸ್ನೇಹಿತ ಕ್ರಿಸ್ ಪೀಟರ್ ಜೊತೆ ಶಾಪಿಂಗ್‌ಗೆ ಬ್ರಿಗೇಡ್ ರಸ್ತೆಯ ‘5 ಅವೆನ್ಯೂ’ ಶಾಪಿಂಗ್ ಮಾಲ್ ಗೆ ಬಂದಿದ್ದರು. ಆ ವೇಳೆ ಇಬ್ಬರೂ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ’. ಈ ಪೈಕಿ ಯುವತಿ ಲಿಯಾ ಸಾವನ್ನಪ್ಪಿದ್ದು, ಸ್ನೇಹಿತ ಕ್ರಿಸ್ ಪೀಟರ್ ಗಂಭೀರವಾಗಿ ಗಾಯಗೊಂಡಿದ್ದಾನೆ. ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ನೀಡಿರುವ ಮಾಹಿತಿಯಂತೆ, ‘ತೀವ್ರ ಗಾಯಗೊಂಡ ಯುವತಿಯನ್ನು ನಿಮ್ಹಾನ್ಸ್ ಕರೆದೊಯ್ಯಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಆಕೆ ಮೃತಪಟ್ಟಿದ್ದಾಳೆ. ಕ್ರಿಸ್ ಪೀಟರ್ ಕಾಲು ಮುರಿದಿದ್ದು, ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ : – ನಾಳೆ ಬೆಳ್ಳಗೆ ದಾವೋಸ್ ಗೆ ಸಿಎಂ ಬೊಮ್ಮಾಯಿ ಪ್ರಯಾಣ
‘ಲಿಯಾ ಹಾಗೂ ಪೀಟರ್ (liya and peter ) ಮಾಲ್‌ನ ಒಂದೇ ಕಡೆ ನಿಂತಿದ್ದರು. ಏಕಾಏಕಿ ಲಿಯಾ ಆಯತಪ್ಪಿ ಬಿದ್ದಿದ್ದರು. ಅವರನ್ನು ಹಿಡಿದುಕೊಳ್ಳಲು ಯತ್ನಿಸಿ ಪೀಟರ್ ಸಹ ಬಿದ್ದಿದ್ದ. ನೆಲಮಹಡಿಯಲ್ಲಿ ಯುವತಿ ಮೇಲೆಯೇ ಪೀಟರ್ ಬಿದ್ದಿದ್ದ. ಕಾಲು ಜಾರಿ ಯುವತಿ ಮೊದಲು ಬಿದ್ದಿದ್ದಾಳೆ. ಯುವತಿಯನ್ನ ಹಿಡಿದುಕೊಳ್ಳಲು ಹೋಗಿ ಯುವಕ ಕೂಡ ಬಿದ್ದಿದ್ದಾನೆ. ಯುವತಿಯ ಮೇಲೆ ಯುವಕ ಬಿದ್ದಿದ್ದರಿಂದ ಬದುಕಿದ್ದಾನೆ. ಯುವಕನ ಕಾಲು ಮುರಿದಿದ್ದು ಚಿಕಿತ್ಸೆ ಮುಂದುವರೆಸಲಾಗಿದೆ. ಯುವತಿಗೆ ಗಂಭೀರ ಗಾಯಗಳಾಗಿರೋದ್ರಿಂದ ಮೃತ ಪಟ್ಟಿದ್ದಾಳೆ. ಸೆಂಟ್ ಜೋಸೆಫ್ ಕಾಲೇಜ್ ನಲ್ಲಿ ಇಬ್ಬರೂ ದ್ವಿತೀಯ ವರ್ಷದ ಕಾಮರ್ಸ್ ವಿಭಾಗದ ವಿದ್ಯಾರ್ಥಿಗಳಾಗಿದ್ದಾರೆ. ಇದನ್ನೂ ಓದಿ : – JAMMU TUNNEL COLLAPSE – ಜಮ್ಮು ರಾಷ್ಟ್ರೀಯ ಹೆದ್ದಾರಿ ಸುರಂಗ ಕುಸಿತದಲ್ಲಿ ಐವರು ದುರ್ಮರಣ- ನಾಪತ್ತೆಯಾದವರಿಗಾಗಿ ಶೋಧ