ಜಮೀನು ವಿವಾದದ ದ್ವೇಷಕ್ಕೆ 84 ತೆಂಗಿನ ಸಸಿಗಳ ಮಾರಣ ಹೋಮ ನಡೆದಿರುವ ಘಟನೆ ತುಮಕೂರು (Tumakuru) ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಅಣೆಕಟ್ಟೆ ಗ್ರಾಮದಲ್ಲಿ ನಡೆದಿದೆ. ಎರೆಹಳ್ಳಿ ಸರ್ವೆ ನಂಬರ್ 21ರ ಸಾಗುವಳಿ ಜಮೀನಿನಲ್ಲಿದ್ದ 84 ತೆಂಗಿನ ಸಸಿಗಳನ್ನ ದುಷ್ಕರ್ಮಿಗಳು ನಾಶಪಡಿಸಿದ್ದಾರೆ.
ಅಣೆಕಟ್ಟೆ ಗ್ರಾಮದ ಶಿವಮ್ಮ (Shivamma) ಎಂಬ ವೃದ್ಧೆಗೆ ಸೇರಿದ ಜಮೀನಿನ ವಿವಾದ ಸದ್ಯ ಕೋರ್ಟ್ (Court) ಮೆಟ್ಟಿಲೇರಿತ್ತು. ಈ ದ್ವೇಷಕ್ಕೆ ಜಮೀನಿನಲ್ಲಿದ್ದ ತೆಂಗಿನ ಸಸಿಗಳನ್ನ ನಾಶ ಮಾಡಿ ದುಶ್ಕೃತ್ಯ ಎಸಗಿದ್ದಾರೆ. ಘಟನೆ ಸಂಬಂಧ ವಿಶ್ವನಾಥ ಮತ್ತು ಕುಮಾರ್ ಎನ್.ಎಸ್ ಎಂಬುವರ ಮೇಲೆ ಎಫ್ ಐಆರ್ (FIR) ದಾಖಲಾಗಿದ್ದು, ಪೊಲೀಸರು ಮಾತ್ರ ಆರೋಪಿಗಳನ್ನ ಬಂಧಿಸಿಲ್ಲವಂತೆ. ಕೃತ್ಯ ಮಾಡಿದ ಬಳಿಕ ಕಂಡವರ ಜಮೀನಿಗೆ ಹೋದ್ರೆ ಹೀಗೆ ಮಾಡ್ತೀವಿ ಮುಂದೆಯೂ ಹೀಗೆ ಮಾಡ್ತೀವಿ ಎಂದು ಕುಮಾರ್ ಎಂಬ ಆರೋಪಿ ತನ್ನ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾನೆ. ಆರೋಪಿ ಕುಮಾರ್ ಸಚಿವ ಮಾಧುಸ್ವಾಮಿ ಬೆಂಬಲಿಗ ಎನ್ನಲಾಗಿದೆ.
ಇದನ್ನು ಓದಿ :- ಟಿ. ನರಸೀಪುರ ತಾಲೂಕಿನಲ್ಲಿ ನಿಲ್ಲದ ಚಿರತೆ ಹಾವಳಿ – 11 ವರ್ಷದ ಬಾಲಕ ಸಾವು