ದಕ್ಷಿಣ ಕನ್ನಡ (Dakshina kannada) ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗುತ್ತಿದ್ದು, ತಗ್ಗು ಪ್ರದೇಶಗಳು ಜಲಾವೃತವಾಗಿವೆ. ಮಂಗಳೂರು (Mangaluru) ನಗರದಲ್ಲಿ ಬಹುತೇಕ ಕಡೆ ರಸ್ತೆಗಳಲ್ಲೆಲ್ಲಾ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು ನಗರದಾದ್ಯಂತ ಸಂಚಾರ ದಟ್ಟಣೆ ಉಂಟಾಗಿದೆ.
ಮಂಗಳೂರು ನಗರದ ಪಡೀಲು, ಪಂಪ್ ವೆಲ್, ಬೆಜೈ, ಅತ್ತಾವರ, ನೀರುಮಾರ್ಗಗಳಲ್ಲೆಲ್ಲಾ ಸಾಮಾನ್ಯ ಜನಜೀವನ ಅಸ್ತವ್ಯಸ್ತವಾಗಿದೆ. ಹೊರಗೆ ವ್ಯವಹಾರಕ್ಕೆ, ಕಚೇರಿಗೆಂದು ವಾಹನಗಳಲ್ಲಿ ಹೋದವರಿಗೆ ಅಲ್ಲಲ್ಲಿ ನೀರು ತುಂಬಿಕೊಂಡು ಚಲಿಸಲಾಗದೆ ಸಿಕ್ಕಿಹಾಕಿಕೊಂಡಿದ್ದಾರೆ.
ತಗ್ಗು ಪ್ರದೇಶದ ಮನೆಗಳು, ಕಟ್ಟಡಗಳಿಗೆ ನೀರು ನುಗ್ಗಿವೆ. ಕೊಟ್ಟಾರ ಚೌಕಿ ಬಳಿ ರಾಜಕಾಲುವೆ ತುಂಬಿ ಹರಿದಿದೆ.ಮಂಗಳೂರು ವಿಮಾನ ನಿಲ್ದಾಣಕ್ಕೆ ಸಂಪರ್ಕಿಸುವ ಮರವೂರು ಸೇತುವೆ ಹತ್ತಿರದ ರಸ್ತೆಗಳು ಧಾರಾಕಾರ ಮಳೆಗೆ ಹಾನಿಗೀಡಾಗಿದ್ದು ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ :- ಚಿತ್ರನಟಿ ಮೀನಾ ಪತಿಯ ಶ್ವಾಸಕೋಶ ಅಲರ್ಜಿಗೆ ಪಾರಿವಾಳಗಳ ಹಿಕ್ಕೆ ಕಾರಣವಾಗಿತ್ತಾ…?
ಭಾರೀ ಮಳೆಯ ಕಾರಣ ಮಂಗಳೂರು ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಶಾಲೆ-ಕಾಲೇಜುಗಳಿಗೆ ಹೋಗಲು ಕಷ್ಟವಾಗುವ ಕಡೆಗಳಲ್ಲೆಲ್ಲ ರಜೆ ನೀಡುವಂತೆ ಶಾಲೆ-ಕಾಲೇಜುಗಳಿಗೆ ಜಿಲ್ಲಾಧಿಕಾರಿ ಡಾ ರಾಜೇಂದ್ರ ಕೆ ವಿ ಸೂಚಿಸಿದ್ದಾರೆ.
ಇದನ್ನೂ ಓದಿ :- ಗೋವಾದಿಂದ ಮುಂಬೈಗೆ ರೆಬೆಲ್ ಶಾಸಕರು ವಾಪಸ್