ವಾಷಿಂಗ್ಟನ್: ಮಿಲಿಟರಿ ಮತ್ತು ಭದ್ರತೆ ವಲಯದಲ್ಲಿ ಅಮೆರಿಕ ಮತ್ತು ಭಾರತ ನಡುವಣ ಸಹಭಾಗಿತ್ವ ಮತ್ತಷ್ಟು ಬಲಗೊಳ್ಳಲಿದೆ ಎಂದು ಅಮೆರಿಕದ ಮಾಜಿ ರಕ್ಷಣಾ ಕಾರ್ಯದರ್ಶಿ ಆಶ್ ಕಾರ್ಟರ್ ಅಭಿಪ್ರಾಯಪಟ್ಟಿದ್ದಾರೆ.
ಅಮೆರಿಕ ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, `ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರಗಳಾಗಿರುವ ಅಮೆರಿಕ ಮತ್ತು ಭಾರತ ನಡುವೆ ಹಲವು ವಿಷಯಗಳಲ್ಲಿ ಸಾಮ್ಯತೆ ಇದೆ. ಜತೆಗೆ, ಉತ್ತಮ ಮೌಲ್ಯಗಳನ್ನು ಪರಸ್ಪರ ಹಂಚಿಕೊಂಡಿವೆ’ ಎಂದು ಹೇಳಿದ್ದಾರೆ.
ಆದರೆ, ಭಾರತದ ಹಿಂದಿನ ನೀತಿಗಳ ಬಗ್ಗೆ ಅಮೆರಿಕ ಎಚ್ಚರವಹಿಸಬೇಕು. ಅಲಿಪ್ತ ನೀತಿಯನ್ನು ಅನುಸರಿಸಿದ್ದ ಭಾರತ, ರಷ್ಯಾ ಜತೆ ಐತಿಹಾಸಿಕ ಮಿಲಿಟರಿ ಸಂಬಂಧ ಹೊಂದಿರುವುದನ್ನು ಮರೆಯಬಾರದು’ ಎಂದು ಹೇಳಿದ್ರು. ಭಾರತದ ಹಲವು ಸೇನಾ ಉಪಕರಣಗಳು ರಷ್ಯಾದಲ್ಲಿ ತಯಾರಿಸಲಾಗಿದೆ. ಹೀಗಾಗಿ, ಭಾರತ ರಷ್ಯಾ ಜತೆ ಸಂಬಂಧವನ್ನು ಮುಂದುವರಿಸಲಿದೆ ಎಂದಿದ್ದಾರೆ.