ದಿನೇಶ್ ಕಾರ್ತಿಕ್ ವೃತ್ತಿ ಜೀವನಕ್ಕೆ ರೋಚಕ ತಿರುವು – ಪತಿಯ ಸಾಧನೆಯ ಹಿಂದೆ ದೀಪಿಕಾ ಪಲ್ಲಿಕಲ್

ಒಂದು ಕಾಲದಲ್ಲಿ RCB ಅಂದ್ರೆ ಕೊಹ್ಲಿ(Kohli), ಎಬಿಡಿ(ABD) ಅನ್ನುವಂತಾಗಿತ್ತು. ಇದಿಗ RCBಯಲ್ಲಿ ಡಿಕೆ(DK) ಹೆಸರು ರಾರಾಜಿಸುತ್ತಿದೆ. ಮ್ಯಾಚ್ ವಿನ್ನರ್ , ಫಿನಿಶರ್(Finisher) ಆಗಿ ದಿನೇಶ್ ಕಾರ್ತಿಕ್ ರನ್ ಹೊಳೆ ಹರಿಸ್ತಿದ್ದಾರೆ. ಈ ಸೀಸನ್ ನಲ್ಲಿ ಡಿಕೆ ಘರ್ಜನೆ ಹೀಗೆ ಮುಂದುವರಿದರೆ ಈ ಸಲ ಆರ್ ಸಿಬಿ ಕಪ್ ಗೆಲ್ಲೋದು ಗ್ಯಾರಂಟಿ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಈ ಬಾರಿ ಎಬಿಡಿ ವಿಲಿಯರ್ಸ್ ಇಲ್ಲ ಅನ್ನೋ ನೋವು ಎಲ್ಲರನ್ನೂ ಕಾಡಿತ್ತು. ಮ್ಯಾಚ್ ಫಿನಿಶ್ ಮಾಡುವುದು ಯಾರು ಅಂತ ಆರ್ ಸಿಬಿ ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದರು. ಈ ಬಾರಿ ಡಿಕೆ ಆರ್ ಸಿಬಿ ಪರವಾಗಿ ದೇವರಾಗಿ ಬಂದಿದ್ದಾರೆ. ದಿನೇಶ್ ಕಾರ್ತಿಕ್ ಕೊನೆಯ ಬಾರಿಗೆ 2019ರ ಐಸಿಸಿ ವಿಶ್ವಕಪ್‌ ನಲ್ಲಿ ಭಾರತ ಪರ ಆಡಿದ್ದರು. 37 ವರ್ಷದ ದಿನೇಶ್ ಕಾರ್ತಿಕ್‌ ಆ ಬಳಿಕ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿಲ್ಲ.


ಡಿಕೆ ಈಗ ನೀಡುತ್ತಿರೋ ಪ್ರದರ್ಶನ ಟೀಂ ಇಂಡಿಯಾ ಪರ ಮತ್ತೆ ಕಾಣಿಸಿಕೊಳ್ಳುವ ಕಾರ್ತಿಕ್ ಕನಸಿಗೆ ಜೀವ ತುಂಬಿದೆ. “ನಾನು ದೊಡ್ಡ ಕನಸನ್ನು ಹೊಂದಿದ್ದೇನೆ. ಅದನ್ನು ಸಾಧಿಸುವ ಸಲುವಾಗಿ ಕಠಿಣ ಪರಿಶ್ರಮ ವಹಿಸುತ್ತಿದ್ದೇನೆ. ಟಿ20 ವಿಶ್ವಕಪ್ನಲ್ಲಿ ಸ್ಥಾನ ಪಡೆಯೋದು ನನ್ನ ದೊಡ್ಡ ಗುರಿ” ಎಂದು ಡಿಕೆ ಟಿ20 ವಿಶ್ವಕಪ್ ನಲ್ಲಿ ಸ್ಥಾನ ಪಡೆಯುವ ಬಗ್ಗೆ ಮಾತನಾಡಿದ್ದಾರೆ.


ದಿನೇಶ್ ಕಾರ್ತಿಕ್ ತಮ್ಮ ವೈಯಕ್ತಿಕ ಜೀವನದಲ್ಲಾದ ಆಘಾತದಿಂದ ಖಿನ್ನತೆಗೆ ತೆರಳಿದ್ದರು. ಫಾರ್ಮ್ ಕಳೆದುಕೊಂಡು ರಾಷ್ಟ್ರೀಯ ತಂಡದೊಂದ ಹೊರಬಿದ್ದು, ರಣಜಿ ಟ್ರೋಫಿಯಲ್ಲೂ ನೀರಸ ಆಟವಾಡಿದ ದಿನೇಶ್ ಕಾರ್ತಿಕ್ ನಾಯಕ ಸ್ಥಾನವನ್ನು ಮುರಳಿ ವಿಜಯ್ ಗೆ ಬಿಟ್ಟುಕೊಟ್ಟಿದ್ದರು. ಐಪಿಎಲ್ ನಲ್ಲೂ ಸಾಲು ಸಾಲು ಕೆಟ್ಟ ಪ್ರದರ್ಶನ, ರಣಜಿ ತಂಡದ ಸಹ ಆಟಗಾರರ ಕುಹಕದ ಮಾತುಗಳಿಂದ ಬೇಸತ್ತಿದ್ದ ದಿನೇಶ್ ಕಾರ್ತಿಕ್ ಆತ್ಮಹತ್ಯೆಗೂ ಪ್ರಯತ್ನ ಪಟ್ಟಿದ್ದರು. ಫಿಟ್ ನೆಸ್ ಕಾಪಾಡಿಕೊಳ್ಳುವ ಸಲುವಾಗಿ ಜಿಮ್ ಮಾಡುತ್ತಿದ್ದ ದಿನೇಶ್ ಕಾರ್ತಿಕ್ ಅವೆಲ್ಲವನ್ನು ಸಂಪೂರ್ಣವಾಗಿ ಬಿಟ್ಟುಬಿಟ್ಟಿದ್ದರು. ಇದನ್ನು ಓದಿ :- CSK ತಂಡಕ್ಕೆ ಮಹೇಂದ್ರ ಸಿಂಗ್ ಧೋನಿ ರಾಜೀನಾಮೆ – ರವೀಂದ್ರ ಜಡೇಜಾ ನೂತನ ನಾಯಕ

ಆಸರೆಯಾದ ದೀಪಿಕಾ ಪಲ್ಲಿಕಲ್
ಆತ್ಮೀಯ ಸ್ನೇಹಿತ, ರಾಷ್ಟ್ರೀಯ ತಂಡ ಹಾಗೂ ರಣಜಿ ತಂಡದ ಸಹಪಾಠಿಯಾಗಿದ್ದ ಮುರಳಿ ವಿಜಯ್ (Murali Vijay) ತನ್ನ ಪತ್ನಿಯೊಂದಿಗೆ ಅಫೇರ್ ಇರಿಸಿಕೊಂಡಿದ್ದು ದಿನೇಶ್ ಕಾರ್ತಿಕ್ ಗೆ ತಿಳಿದಿರಲಿಲ್ಲ. ಅಚ್ಚರಿಯ ವಿಚಾರವೆಂದರೆ, ಇಡೀ ರಣಜಿ ತಂಡಕ್ಕೆ ಈ ವಿಚಾರ ತಿಳಿದಿದ್ದರೂ ದಿನೇಶ್ ಕಾರ್ತಿಕ್ ಗೆ ಮಾತ್ರ ಒಂದು ಸಣ್ಣ ಸುಳಿವು ಕೂಡ ಇರಲಿಲ್ಲ. ಆದರೆ, ಒಂದು ದಿನ ದಿನೇಶ್ ಕಾರ್ತಿಕ್ ಬಳಿಗೆ ಬಂದ ಪತ್ನಿ ನಿಕಿತಾ (Nikita) ತಾವು ಗರ್ಭಿಣಿ ಎಂದು ಹೇಳಿದ್ದಲ್ಲದೆ ಮಗುವಿಗೆ ಮುರಳಿ ವಿಜಯ್ ತಂದೆ ಎಂದಿದ್ದರು. ಆ ಕಾರಣಕ್ಕಾಗಿ ನನಗೆ ವಿಚ್ಛೇದನ ಬೇಕು ಎಂದಿದ್ದರು. ದಿಗ್ಭ್ರಾಂತರಾಗಿದ್ದ ದಿನೇಶ್ ಕಾರ್ತಿಕ್ ವಿಚ್ಛೇದನ ಪಡೆದುಕೊಂಡು ಮುರಳಿ ವಿಜಯ್ ರನ್ನು ನಿಕಿತಾ ವಿವಾಹವಾದರು.


ಈ ಎಲ್ಲಾ ನೋವುಗಳಿಂದ ಹೊರಬರಲು ಜಿಮ್ ಒಂದೇ ದಾರಿ ಎಂದು ಕಾರ್ತಿಕರ್ ಜಿಮ್ ನಲ್ಲಿ ಅಭ್ಯಾಸ ಆರಂಭಿಸಿದ್ದರು. ಇಲ್ಲಿ ಸಿಕ್ಕವರೇ ಭಾರತದ ಅಗ್ರ ಸ್ಕ್ವಾಷ್ ಆಟಗಾರ್ತಿ ದೀಪಿಕಾ ಪಲ್ಲಿಕ್ಕಲ್ (Deepika Pallikal). ಕ್ರಿಕೆಟಿಗನಾಗಿದ್ದ ಕಾರಣಕ್ಕೆ ದಿನೇಶ್ ಕಾರ್ತಿಕ್ ರನ್ನು ಮೊದಲಿನಿಂದಲೂ ತಿಳಿದಿದ್ದ ದೀಪಿಕಾ ಪಲ್ಲಿಕಲ್, ದಿನೇಶ್ ಕಾರ್ತಿಕ್ ಇದ್ದ ರೀತಿ ಹಾಗೂ ಅವರ ಕಥೆಗಳನ್ನು ಕೇಳಿ ಸಮಾಧಾನ ಮಾಡಿದ್ದರು. ಇಬ್ಬರೂ ಜೊತೆಯಲ್ಲೇ ಜಿಮ್ ನಲ್ಲಿ ಅಭ್ಯಾಸ, ಕ್ರೀಡಾ ದಿನದ ಸಂಗತಿಗಳನ್ನು ಹಂಚಿಕೊಳ್ಳಲು ಶುರು ಮಾಡಿದರು.

ದೀಪಿಕಾ ಪಲ್ಲಿಕಲ್ ಅವರ ಸ್ಫೂರ್ತಿಯ ಮಾತುಗಳಿಂದ ಹೊಸ ಉತ್ಸಾಹ ಪಡೆದುಕೊಂಡಿದ್ದ ದಿನೇಶ್ ಕಾರ್ತಿಕ್ ದೇಶೀಯ ಕ್ರಿಕೆಟ್ ನಲ್ಲಿ ಅಬ್ಬರಿಸಲು ಆರಂಭಿಸಿದ್ದರು. ರಣಜಿ ಮಾತ್ರವಲ್ಲ, ಟೀಮ್ ಇಂಡಿಯಾ ಸೀಮಿತ ಓವರ್ ಗಳ ತಂಡಕ್ಕೂ ಆಯ್ಕೆಯಾದರು. ಐಪಿಎಲ್ ನಲ್ಲಿ ಕೆಕೆಆರ್ ತಂಡದ ನಾಯಕನಾಗುವ ಮಟ್ಟಕ್ಕೆ ಬೆಳೆದರು. ಇದೆಲ್ಲದರ ನಡುವೆ ಸೂತ್ರವೇ ಇರದ ಗಾಳಿಪಟದಂತಿದ್ದ ಬದುಕಿಗೆ ಆಧಾರವಾಗಿ ನಿಂತಿದ್ದ ಗೆಳತಿ ದೀಪಿಕಾ ಪಲ್ಲಿಕ್ಕಲ್ ಅವರನ್ನು ವಿವಾಹವಾದರು. ಇದೀಗ ಆರ್ ಸಿ ಬಿ ಪರ ಐಪಿಎಲ್ ನಲ್ಲಿ ಮಿಂಚುತ್ತಿರುವ ಡಿ ಕೆ ವಿಶ್ವಕಪ್ ಗೆ ಸೆಲೆಕ್ಟ್ ಆಗ್ತಾರಾ ಅನ್ನೋದನ್ನ ಕಾದು ನೋಡಬೇಕಿದೆ.

ಇದನ್ನು ಓದಿ :- IPL 2022 – ಇಂದಿನಿಂದ ಐಪಿಎಲ್ ಹಂಗಾಮ – ಚೆನ್ನೈ ಸೂಪರ್ ಕಿಂಗ್ಸ್ ಗೆ ಕೆಕೆಆರ್ ಸವಾಲು

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!