ನವದೆಹಲಿ : ಕೊರೊನಾ ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಕೋವಿಡ್-19 ಲಾಕ್ ಡೌನ್ ಅನ್ನು ಮತ್ತೊಂದು ವಾರ ವಿಸ್ತರಣೆ ಮಾಡಿ ಅರವಿಂದ್ ಕೇಜ್ರಿವಾಲ್ ಆದೇಶ ಹೊರಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೆಹಲಿಯಲ್ಲಿ ಕೊರೊನಾ ವೈರಸ್ ಪರಿಸ್ಥಿತಿ ಭೀಕರವಾಗಿರುವುದರಿಂದ ಲಾಕ್ ಡೌನ್ ಅನ್ನು ಮುಂದಿನ ಏಳು ದಿನಗಳ ಕಾಲ ಅಂದ್ರೆ ಮೇ 3ರವರೆಗೆ ಈ ಲಾಕ್ ಡೌನ್ ಮುಂದುವರೆಯಲಿದೆ ಎಂದು ತಿಳಿಸಿದ್ದಾರೆ.
ಶನಿವಾರ, ರಾಷ್ಟ್ರ ರಾಜಧಾನಿಯಲ್ಲಿ 24,103 ಹೊಸ ಕೋವಿಡ್-19 ಸೋಂಕುಗಳು ಮತ್ತು 357 ಸಾವುಗಳು ದಾಖಲಾಗಿವೆ, ಸಾಂಕ್ರಾಮಿಕ ರೋಗ ಕಾಣಿಸಿಕೊಂಡ ನಂತರ ಇದು ನಗರಕ್ಕೆ ಅತಿ ಹೆಚ್ಚು ಒಂದೇ ದಿನದ ಸಂಖ್ಯೆಯಾಗಿದೆ.
ದೆಹಲಿಯ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ ಒಂದು ಲಕ್ಷಕ್ಕೆ ಸಮೀಪಿಸಿದೆ. ನಗರದಲ್ಲಿ ಪ್ರಸ್ತುತ 93,080 ಸಕ್ರಿಯ ಸೋಂಕುಗಳಿವೆ. ದೆಹಲಿಯಲ್ಲಿ 13,898 ಕೊರೊನಾವೈರಸ್ ಸಂಬಂಧಿತ ಸಾವುಗಳು ಸಂಭವಿಸಿವೆ.