ದೆಹಲಿ ( DELHI ) ಮಹಾನಗರ ಪಾಲಿಕೆಯ 250 ವಾರ್ಡ್ ಗಳಿಗೆ ಇಂದು ಮತದಾನ ನಡೆಯುತ್ತಿದೆ. ಬೆಳಗ್ಗೆ 8ರಿಂದ ಸಂಜೆ 5.30ರವರೆಗೆ ಮತದಾನ ನಡೆಯಲಿದ್ದು ಈಗಾಗಲೇ ಅನೇಕರು ತಮ್ಮ ಮತ ಚಲಾಯಿಸಲು ಸರತಿ ಸಾಲಿನಲ್ಲಿ ನಿಂತಿದ್ದಾರೆ. ಮತದಾನ ಸ್ಥಳದಲ್ಲಿ ಮುಂಜಾಗ್ರತಾ ಕ್ರಮವಾಗಿ ಹೆಚ್ಚುವರಿ ಪೊಲೀಸರ ನಿಯೋಜನೆ ಮಾಡಲಾಗಿದೆ. 40 ,000 ಪೊಲೀಸರು, 20,000ಹೋಮ್ ಗಾರ್ಡ್ಸ್, 108 ಕಂಪನಿಗಳ ಅರೆಸೇನಾಪಡೆ, ಸಶಸ್ತ್ರ ಮೀಸಲು ಪಡೆ ನಿಯೋಜನೆ ಮಾಡಲಾಗಿದೆ. ಹಾಗೂ ಸೂಕ್ಷ್ಮ & ಅತಿಸೂಕ್ಷ್ಮ ಪ್ರದೇಶಗಳಲ್ಲಿ ಡ್ರೋನ್ ಮೂಲಕ ಕಣ್ಗಾವಲು ಇರಿಸಲಾಗಿದೆ.
साफ़-स्वच्छ और सुंदर दिल्ली बनाने के लिए आज मतदान है, नगर निगम में एक भ्रष्टाचार मुक्त सरकार बनाने के लिए मतदान है।
सभी दिल्लीवासियों से मेरी अपील- दिल्ली नगर निगम में एक ईमानदार और काम करने वाली सरकार बनाने के लिए आज अपना वोट डालने ज़रूर जाएँ।
— Arvind Kejriwal (@ArvindKejriwal) December 4, 2022
ಎಂ.ಸಿ.ಡಿ ಚುನಾವಣೆಗೆ ಒಟ್ಟು 1,349 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಇಂದು ಮತದಾನಕ್ಕಾಗಿ 68 ಪಿಂಕ್ ಬೂತ್ ಸೇರಿದಂತೆ 13,655 ಬೂತ್ ಗಳ ಸ್ಥಾಪನೆ ಮಾಡಲಾಗಿದೆ. 1.46 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಚುನಾವಣಾ ಕರ್ತವ್ಯಕ್ಕಾಗಿ ಒಂದು ಲಕ್ಷ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಇನ್ನು ಮತದಾನದ ವೇಳೆ ಕೋಮು ಗಲಭೆ ನಡೆಯದಂತೆ ಎಚ್ಚರಿಕೆ ವಹಿಸುವುದು, ಅಭ್ಯರ್ಥಿಗಳು ಮತದಾರರಿಗೆ ಆಮಿಷವೊಡ್ಡದಂತೆ ತಡೆಯುವುದು ಪೊಲೀಸರು ಮುಖ್ಯ ಗುರಿಯಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಡಿ. 7ರಂದು ಮತಎಣಿಕೆ ನಡೆಯಲಿದೆ. ಇದನ್ನೂ ಓದಿ : – ಪಾರಿವಾಳ ಹಿಡಿಯಲು ಹೋಗಿ ಹೈಟೆನ್ಷನ್ ವಯರ್ ಸ್ಪರ್ಶಿಸಿದ್ದ ಬಾಲಕ ಚಿಕಿತ್ಸೆ ಫಲಕಾರಿಯಾಗದೆ ಸಾವು…!
नगर निगम में एक ईमानदार सरकार बनाने के लिए आज पूरे परिवार साथ जाकर मतदान किया। आज छुट्टी का दिन है, आप भी अपने पूरे परिवार के साथ जाकर मतदान ज़रूर करें। अपने पड़ोसियों और जानकारों को भी वोट डालने के लिए कहें।
हम सब मिलकर दिल्ली को साफ़-स्वच्छ और सुंदर बनाएँगे। pic.twitter.com/v5yPd9tdat
— Arvind Kejriwal (@ArvindKejriwal) December 4, 2022
ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ( ARVIND KERGIWAL ) ಅವರು ಮತ ಚಲಾಯಿಸುವಂತೆ ದೆಹಲಿಯ ಜನತೆಗೆ ಮನವಿ ಮಾಡಿದರು. ಈ ಕುರಿತು ಟ್ವೀಟ್ ಮಾಡಿರುವ ಕೇಜ್ರಿವಾಲ್, “ಇಂದು ದೆಹಲಿಯನ್ನು ಸ್ವಚ್ಛ ಮತ್ತು ಸುಂದರವಾಗಿಸಲು ಮತದಾನ ನಡೆಯುತ್ತಿದೆ, ಮುನ್ಸಿಪಲ್ ಕಾರ್ಪೊರೇಷನ್ನಲ್ಲಿ ಭ್ರಷ್ಟಾಚಾರ ಮುಕ್ತ ಸರ್ಕಾರ ಮಾಡಲು ಮತದಾನ ನಡೆಯುತ್ತಿದೆ. ಇಂದು ನಿಮ್ಮ ಮತವನ್ನು ಚಲಾಯಿಸಲು ಹೋಗಿ ಎಂದು ಎಲ್ಲಾ ದೆಹಲಿಯ ಜನತೆಗೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ : – ಆರೋಗ್ಯ ಸಚಿವರ ತವರು ಜಿಲ್ಲೆಯಲ್ಲೇ ವೈದ್ಯರ ನಿರ್ಲಕ್ಷ್ಯ – ವೈದ್ಯರ ನಿರ್ಲಕ್ಷ್ಯಕ್ಕೆ ಮತ್ತೊಂದು ಹಸುಗೂಸು ಬಲಿ