ಮೊಟ್ಟೆಯಿಲ್ಲದೆ ಮಾಡಿ ರುಚಿಯಾದ ವೆಜ್ ಬ್ರೆಡ್ ಆಮ್ಲೆಟ್

ನಾವಿಂದು ಹೇಳಿಕೊಡುತ್ತಿರುವ ಬ್ರೆಡ್ ಆಮ್ಲೆಟ್‌ ಗೆ ಮೊಟ್ಟೆಯ ಅಗತ್ಯವೇ ಇಲ್ಲ. ನೀವು ಆಮ್ಲೆಟ್‌ ನ ಸ್ವಾದವನ್ನು ವೆಜ್‌ ನಲ್ಲಿ ಹುಡುಕುತ್ತಿದ್ದೀರಿ ಎಂದಾದರೆ ನೀವು ಇದನ್ನು ಒಮ್ಮೆ ಟ್ರೈ ಮಾಡಲೇ ಬೇಕು.

ನಾವಿಂದು ಹೇಳಿಕೊಡುತ್ತಿರುವ ಬ್ರೆಡ್ ಆಮ್ಲೆಟ್‌ ಗೆ ಮೊಟ್ಟೆಯ ಅಗತ್ಯವೇ ಇಲ್ಲ. ನೀವು ಆಮ್ಲೆಟ್‌ ನ ಸ್ವಾದವನ್ನು ವೆಜ್‌ ನಲ್ಲಿ ಹುಡುಕುತ್ತಿದ್ದೀರಿ ಎಂದಾದರೆ ನೀವು ಇದನ್ನು ಒಮ್ಮೆ ಟ್ರೈ ಮಾಡಲೇ ಬೇಕು. ಮೊಟ್ಟೆಯಿಲ್ಲದೇ ರುಚಿಯಾದ ವೆಜ್ ಬ್ರೆಡ್ ಆಮ್ಲೆಟ್ ಮಾಡುವ ವಿಧಾನ ಇಲ್ಲಿದೆ.

Eggless Bread Omelette / Indian Street Style No Egg Veg Bread Omelets /  Street Food Recipe Video by Cooking.Shooking | ifood.tv

ಬೇಕಾಗುವ ಪದಾರ್ಥಗಳು:
ಹಿಟ್ಟು ತಯಾರಿಸಲು:
ಕಡಲೆ ಹಿಟ್ಟು – 1 ಕಪ್
ಮೈದಾ – ಕಾಲು ಕಪ್
ಬೇಕಿಂಗ್ ಪೌಡರ್ – ಮುಕ್ಕಾಲು ಟೀಸ್ಪೂನ್
ಅರಿಶಿನ – ಕಾಲು ಟೀಸ್ಪೂನ್
ಉಪ್ಪು – ಅರ್ಧ ಟೀಸ್ಪೂನ್
ನೀರು – ಒಂದು ಕಾಲು ಕಪ್  ಇದನ್ನೂ ಓದಿ : – ಮನೆಯಲ್ಲಿಯೇ ಚಾಕೊಲೇಟ್ ಬಾಳೆಹಣ್ಣಿನ ಕೇಕ್ ಮಾಡೋದು ಹೇಗೆ ಗೊತ್ತ…?

Bread Omelette – Chaya's Flavoursome

ಸಣ್ಣಗೆ ಹೆಚ್ಚಿದ ಈರುಳ್ಳಿ – 2 ಟೀಸ್ಪೂನ್
ಸಣ್ಣಗೆ ಹೆಚ್ಚಿದ ಮೆಣಸಿನಕಾಯಿ – 1
ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್
ಕಾಶ್ಮೀರಿ ಕೆಂಪು ಮೆಣಸಿನ ಪುಡಿ – ಕಾಲು ಟೀಸ್ಪೂನ್
ಕರಿಮೆಣಸಿನ ಪುಡಿ – ಕಾಲು ಟೀಸ್ಪೂನ್
ಹುರಿಯಲು:
ಬೆಣ್ಣೆ
ಕೊತ್ತಂಬರಿ
ಬ್ರೆಡ್ ಸ್ಲೈಸ್ – 5

Bread Omelette : బ్రెడ్ ఆమ్లెట్ ఎంతో రుచిగా రావాలంటే.. ఇలా త‌యారు చేయండి..

ಮಾಡುವ ವಿಧಾನ :-
ಮೊದಲಿಗೆ ಒಂದು ದೊಡ್ಡ ಬಟ್ಟಲಿನಲ್ಲಿ ಕಡಲೆ ಹಿಟ್ಟು, ಮೈದಾ, ಬೇಕಿಂಗ್ ಪೌಡರ್, ಅರಿಶಿನ ಮತ್ತು ಉಪ್ಪು ಹಾಕಿ, ಅದಕ್ಕೆ ಒಂದು ಕಾಲು ಕಪ್ ನೀರು ಹಾಕಿ ಮಿಶ್ರಣ ಮಾಡಿ. ಹಿಟ್ಟು ರೂಪುಗೊಂಡ ಬಳಿಕ ಅದಕ್ಕೆ ಈರುಳ್ಳಿ, ಮೆಣಸಿನಕಾಯಿ, ಕೊತ್ತಂಬರಿ, ಕೆಂಪು ಮೆಣಸಿನ ಪುಡಿ ಮತ್ತು ಕರಿಮೆಣಸಿನ ಪುಡಿ ಸೇರಿಸಿ ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿ. ಈಗ ಪ್ಯಾನ್ ಅನ್ನು ಬಿಸಿ ಮಾಡಿ, ಒಂದು ಟೀಸ್ಪೂನ್ ಬೆಣ್ಣೆ ಮತ್ತು 1 ಟೀಸ್ಪೂನ್ ಕೊತ್ತಂಬರಿ ಹಾಕಿ ಏಕರೂಪದಲ್ಲಿ ಹರಡಿ. ಈಗ ಅದರ ಮೇಲೆ 1 ಸೌಟು ತಯಾರಿಸಿಟ್ಟ ಹಿಟ್ಟನ್ನು ಸುರಿದು, ಏಕರೂಪವಾಗಿ ಹರಡಿ. ಒಂದು ನಿಮಿಷ ಆಮ್ಲೆಟ್ ಕಾದ ಬಳಿಕ ಅದರ ಮೇಲೆ ಬ್ರೆಡ್ ಸ್ಲೈಸ್ ಇರಿಸಿ ಬೇಯಿಸುವುದನ್ನು ಮುಂದುವರಿಸಿ. ಈಗ ಆಮ್ಲೆಟ್ ಅನ್ನು ಮಗುಚಿ ಹಾಕಿ, ಬ್ರೆಡ್ ಗರಿಗರಿಯಾಗುವವರೆಗೆ ಹುರಿಯಿರಿ. ಈಗ ವೆಜ್ ಬ್ರೆಡ್ ಆಮ್ಲೆಟ್ ಅನ್ನು ನಿಮಗೆ ಬೇಕಾದ ರೀತಿಯಲ್ಲಿ ಮಡಚಿ, ಕತ್ತರಿಸಿಕೊಳ್ಳಿ. ವೆಜ್ ಬ್ರೆಡ್ ಆಮ್ಲೆಟ್ ಇದೀಗ ತಯಾರಾಗಿದ್ದು, ಟೊಮೆಟೊ ಸಾಸ್‌ ನೊಂದಿಗೆ ಸವಿಯಿರಿ.

ಇದನ್ನೂ ಓದಿ : – ಮನೆಯಲ್ಲಿಯೇ ಸುಲಭವಾಗಿ ಪಂಜಾಬಿ ಸ್ಟೈಲ್ ನ ಆಲೂ ಕುಲ್ಚಾ ಮಾಡೋದು ಹೇಗೆ ಗೊತ್ತಾ..?

 

 

 

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!