ಸಿದ್ದರಾಮಯ್ಯ ವಿರುದ್ಧ ಸ್ಫರ್ಧಿಸುವ ಭರದಲ್ಲಿ ಯಡವಟ್ಟು ಮಾಡಿಕೊಂಡ್ರಾ ವರ್ತೂರು ಪ್ರಕಾಶ್ ?

ವಿಧಾನಸಭೆ ಪ್ರವೇಶ ಮಾಡಬೇಕು ಅಂದ್ರೆ ಎಣ್ಣೆ ಹೊಡೆಯಬೇಕು, ನಾನ್ ವೆಜ್ ತಿನ್ನಬೇಕು, ಇಲ್ಲಾ ಅಂದ್ರೆ ಊಟ ಸಿಗಲ್ಲ – ವರ್ತೂರು ಪ್ರಕಾಶ್ ಅವರ ಈ ದೂರವಾಣಿ ಚರ್ಚೆ ಈಗ ಸಖತ್ ಚರ್ಚೆಗೆ ಗ್ರಾಸವಾಗಿದೆ.

ವಿಧಾನಸಭೆ ಪ್ರವೇಶ ಮಾಡಬೇಕು ಅಂದ್ರೆ ಎಣ್ಣೆ ಹೊಡೆಯಬೇಕು, ನಾನ್ ವೆಜ್ ತಿನ್ನಬೇಕು, ಇಲ್ಲಾ ಅಂದ್ರೆ ಊಟ ಸಿಗಲ್ಲ – ವರ್ತೂರು ಪ್ರಕಾಶ್ (Vartur prakash) ಅವರ ಈ ದೂರವಾಣಿ ಚರ್ಚೆ ಈಗ ಸಖತ್ ಚರ್ಚೆಗೆ ಗ್ರಾಸವಾಗಿದೆ. ಕೋಲಾರ (Kolar) ದ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಗೂ ಮೊದಲು ಬಿಜೆಪಿ (BJP)  ನಾಯಕರ ಜೊತೆಗೆ ಪೋನ್ನಲ್ಲಿ ವರ್ತೂರ್ ಪ್ರಕಾಶ್ ಗುಪ್ತ್ ಗುಪ್ತ್ ಮಾತುಕತೆ ನಡೆಸಿದ್ದಾರೆ.

ಸಿದ್ದರಾಮಯ್ಯ (Siddaramaiah) ಸ್ಪರ್ಧೆ ಬಗ್ಗೆ ಮಾತಾಡುವ ಭರದಲ್ಲಿ (Mobile) ಯಡವಟ್ಟು ಮಾಡಿಕೊಂಡ್ರಾ ವರ್ತೂರು? ಎಂಬ ಚರ್ಚೆ ರಾಜಕೀಯ ವಲಯದಲ್ಲಿ ನಡೆಯುತ್ತಿದೆ. ಉತ್ತರ ಕರ್ನಾಟಕ (Uttar karnataka) ಗದಗ ಹಾಗೂ ಹುಬ್ಬಳಿ ಜಿಲ್ಲೆಯಲ್ಲಿ 12 ಜನ ಲಿಂಗಾಯತ ಶಾಸಕರು ಇದ್ದಾರೆ, ಒಬ್ಬೊಬ್ಬರು ಒಂದು ಕೆ.ಜಿ. ಮಾಂಸ ತಿನ್ನುತ್ತಾರೆ, ಅವರೆಲ್ಲಾ ನನ್ನ ಫ್ರೆಂಡ್ಸ್ ಸರ್. ಅಲ್ಲದೆ ಅವರು ಒಬ್ರು ಲೇಬರ್ ಮಿನಿಸ್ಟರ್ ಆಗಿದ್ದಾರೆ. ನೋಡಿ ಒಬ್ಬ ಬ್ರಾಹ್ಮಣ ಅವರು ಒಂದೂವರೆ ಕೆಜಿ ತಿನ್ನುತ್ತಾರೆ. ನಾನೆ ಹಾಕಿ ಕೊಡ್ತೀನಿ ಎಂದು ದೂರವಾಣಿಯಲ್ಲಿ ಮಾತನಾಡುತ್ತಾರೆ. ಹಂಗ ನೋಡಿದ್ರೆ ನೀವೊಬ್ಬರೇ ಎಣ್ಣೆ ಹೊಡೆಯದೆ, ಮಾಂಸ ತಿನ್ನದೆ ರಾಜಕೀಯ (Politics) ದಲ್ಲಿ ಗೆಟಾನ್ ಆಗಿದ್ದು ಸರ್ ಎಂದ ವರ್ತೂರ್ ಬಗ್ಗೆ ಈಗ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಇದನ್ನು ಓದಿ :- ಕೋಲಾರದಲ್ಲಿ ಸಿದ್ದರಾಮಯ್ಯಗಾಗಿ ವಾಸ್ತು ಇರುವ ಮನೆ, ಕಚೇರಿ ಹುಡುಕಾಟ!

 

ಸರ್ ನಾನು ಸಿದ್ದರಾಮಯ್ಯ ವಿರುದ್ದ 50 ಸಾವಿರ ಲೀಡಲ್ಲಿ ಗೆಲ್ಲಲಿಲ್ಲ ಅಂದ್ರೆ ನಿಮಗೆ ಮುಖ ತೋರಿಸಲ್ಲ ಎಂಬ ಮಾತು ಸೇರಿಸಿ ವರ್ತೂರ್ ಪ್ರಕಾಶ್ ದೂರವಾಣಿ ಕರೆ ಕಟ್ ಮಾಡುತ್ತಾರೆ. ಅಷ್ಟೆಲ್ಲಾ ಆದ ಮೇಲೆ ಆ ಕಡೆ ಇವರ ಜೊತೆಗೆ ಮಾತನಾಡಿದ್ದು ಯಾರು? ಅನ್ನೋದು ಸದ್ಯದ ಕುತೂಹಲವಾಗಿದೆ. ಇನ್ನು ಅಸೆಂಬ್ಲಿ ಚುನಾವಣೆ ಎದುರಿಗೇ ಇರುವಾಗ ಬಿಜೆಪಿ ಘಟಾನುಘಟಿಗಳ ಬಗ್ಗೆಯೇ ಹೀಗೆ ಮಾತನಾಡಿರುವುದರಿಂದ ವರ್ತೂರು ಪ್ರಕಾಶ್ ಪಕ್ಷದ ನಾಯಕರ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಇದನ್ನು ಓದಿ :- ನೋ ಪಾರ್ಕಿಂಗ್ ಸ್ಥಳದಲ್ಲಿದ್ದ ಮೂಡಿಗೆರೆ ಶಾಸಕರ ಕಾರು ಲಾಕ್ ಮಾಡಿದ ಪೊಲೀಸರು

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!