ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲಾ ಯೋಜನೆಯ ಪರಿಹಾರ, ಸವಲತ್ತನ್ನು ಸ್ತ್ರೀಯರ ಹೆಸರಿಗೇ ಕೊಡುವ ಚಿಂತನೆ ನಮಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (Dk.Shivkumar) ಹೇಳಿದ್ದಾರೆ.
ಬಳ್ಳಾರಿಯ (Ballari) ಮೋಕಾ ರಸ್ತೆಯಲ್ಲಿರುವ ಖಾಸಗಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ “ನಾ ನಾಯಕಿ” ಅಭಿಯಾನದ ಪ್ರಾಯೋಗಿಕ ಉದ್ಘಾಟನಾ ಕಾರ್ಯಕ್ರಮಕ್ಕೆ ವರ್ಚುವಲ್ ಮಾಧ್ಯಮದ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು ನನಗೆ ನನ್ನ ಜೀವನದಲ್ಲಿ ಅತಿ ಸಂತೋಷದ ದಿನ ಇಂದಿನ ದಿನ ಎಂದು ಹೇಳಿದರು. ಯಾವುದೇ ಒಂದು ಕಾರ್ಯಕ್ರಮ ಮಾಡಬೇಕಾದರೆ ಅದರ ಹಿಂದೆ ಬಹಳ ಜನರ ಶ್ರಮ ಇರುತ್ತದೆ. ಈ ಕಾರ್ಯಕ್ರಮದ ಹಿಂದೆಯೂ ಕೂಡ ಬಹಳ ಜನರ ಶ್ರಮ ಇದೆ, ಇದೊಂದು ಪ್ರಾಯೋಗಿಕ ಕಾರ್ಯಕ್ರಮ, ಬಳ್ಳಾರಿಯಲ್ಲಿ ಮೊದಲ ಬಾರಿಗೆ ಆಯೋಜಿಸಲಾಗಿದೆ. ಇದು ನನ್ನ ಕನಸಲ್ಲ, ಇಂದಿರಾ ಗಾಂಧಿ ಕನಸು (Indira gandhi) .
ದೇವರು ವರವನ್ನೂ ಕೊಡಲ್ಲ, ಶಾಪವನ್ನೂ ಕೊಡಲ್ಲ ಆದರೆ ಅವಕಾಶ ಕೊಡುತ್ತಾನೆ ಅದನ್ನು ಬಳಸಿಕೊಳ್ಳಬೇಕು. ಈಗ ನಿಮಗೆ ಅವಕಾಶ ಬಂದಿದೆ, ಅವಕಾಶ ಬಳಸಿಕೊಂಡು ಮೇಲೆ ಬನ್ನಿ ಎಂದರು. ಸೋನಿಯಾ ಗಾಂಧಿ (Soniya gandhi) ಈ ಹಿಂದೆ ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಗೆದ್ದಿದ್ದರು, ಅಂತಹ ಪವಿತ್ರ ಜಾಗ ಬಳ್ಳಾರಿ, ಹೀಗಾಗಿ ಅಲ್ಲಿಂದ ಈ ಕಾರ್ಯಕ್ರಮ ಪ್ರಾಯೋಗಿಕವಾಗಿ ಉದ್ಘಾಟಿಸಲಾಗಿದೆ ಎಂದರು. ಇದನ್ನೂ ಓದಿ :- ರಾಹುಲ್ ಗಾಂಧಿ ವಯನಾಡ್ ಕಚೇರಿ ಧ್ವಂಸಗೊಳಿಸಿದ ಕಿಡಿಗೇಡಿಗಳು ..!