ಸಿಂಪಲ್ ಆಗಿ ಅತೀ ಕಡಿಮೆ ಸಮಯದಲ್ಲಿ ಬ್ರೆಡ್ ಹಲ್ವಾ ಮಾಡೋದು ಹೇಗೆ ಗೊತ್ತಾ…?

ಮನೆಗೆ ಅನಿರೀಕ್ಷಿತವಾಗಿ ಅತಿಥಿಗಳು ಬಂದಾಗ ತ್ವರಿತವಾಗಿ ಏನಾದರೂ ಸಿಹಿ ಮಾಡಬೇಕಾಗುತ್ತದೆ. ಮನೆಯಲ್ಲಿ ಉಳಿದ ಬ್ರೆಡ್ ಸ್ಲೈಸ್ ಬಳಸಿ, ಸಿಂಪಲ್ ಆಗಿ ಮಾಡಬಹುದಾದ ಬ್ರೆಡ್ ಹಲ್ವಾ ನಿಮ್ಮ ಕ್ವಿಕ್ ರೆಸಿಪಿ ಲಿಸ್ಟ್ ಗೆ ಖಂಡಿತವಾಗಿಯೂ ಸೇರಿಸಿಕೊಳ್ಳಿ.

ಮನೆಗೆ ಅನಿರೀಕ್ಷಿತವಾಗಿ ಅತಿಥಿಗಳು ಬಂದಾಗ ತ್ವರಿತವಾಗಿ ಏನಾದರೂ ಸಿಹಿ ಮಾಡಬೇಕಾಗುತ್ತದೆ. ಮನೆಯಲ್ಲಿ ಉಳಿದ ಬ್ರೆಡ್ ಸ್ಲೈಸ್ ಬಳಸಿ, ಸಿಂಪಲ್ ಆಗಿ ಮಾಡಬಹುದಾದ ಬ್ರೆಡ್ ಹಲ್ವಾ  ( bread halva ) ನಿಮ್ಮ ಕ್ವಿಕ್ ರೆಸಿಪಿ ಲಿಸ್ಟ್ ಗೆ ಖಂಡಿತವಾಗಿಯೂ ಸೇರಿಸಿಕೊಳ್ಳಿ.

Bread Halwa Recipe by sumaiya shafi - Cookpad

ಬೇಕಾಗುವ ಪದಾರ್ಥಗಳು :-

ಬ್ರೆಡ್ ಸ್ಲೈಸ್ – 5
ತುಪ್ಪ – 4 ಟೀ ಸ್ಪೂನ್
ಕೇಸರಿ ಎಳೆಗಳು – ಅರ್ಧ ಟೀಸ್ಪೂನ್
ಏಲಕ್ಕಿ ಪುಡಿ – 1 ಟೀ ಸ್ಪೂನ್
ಬಿಸಿ ಹಾಲು – 1 ಕಪ್
ಸಕ್ಕರೆ – ಮುಕ್ಕಾಲು ಕಪ್
ಒಣ ಹಣ್ಣುಗಳು (ಗೋಡಂಬಿ, ಬಾದಾಮಿ, ಒಣದ್ರಾಕ್ಷಿ)  ಇದನ್ನೂ ಓದಿ :- ಆಲೂಗಡ್ಡೆಯಿಂದ ರುಚಿಕರವಾದ ಮಂಚೂರಿಯನ್ ಹೇಗೆ ಮಾಡುವುದು ಗೊತ್ತಾ..?

Bread Halwa Recipe//పది నిమిషాల్లో ఇలా బ్రెడ్డుతో స్వీట్ చేయండి //Yummy double ka meetha - YouTube
ಮಾಡುವ ವಿಧಾನ :-

ಮೊದಲಿಗೆ ಕೇಸರಿ ಎಳೆಗಗಳನ್ನು 2-3 ಟೀ ಸ್ಪೂನ್ ಬಿಸಿ ಹಾಲಿನಲ್ಲಿ ನೆನೆಸಿ ಪಕ್ಕಕ್ಕಿಡಿ. ಮಿಕ್ಸರ್ ಜಾರ್ ಗೆ ಬ್ರೆಡ್ ಗಳನ್ನು ಹಾಕಿ, ಕ್ರಂಬ್ಸ್ ತಯಾರಿಸಿ. ಈಗ ಕಡಾಯಿಯಲ್ಲಿ 1 ಟೀ ಸ್ಪೂನ್ ತುಪ್ಪ ಬಿಸಿ ಮಾಡಿ, ಅದರಲ್ಲಿ ಒಣ ಹಣ್ಣುಗಳನ್ನು ಹಾಕಿ, ಹುರಿದುಕೊಳ್ಳಿ. ತಿಳಿ ಗೋಲ್ಡನ್ ಬ್ರೌನ್ ಬಣ್ಣ ಬಂದ ಬಳಿಕ ಅದನ್ನು ತುಪ್ಪದಿಂದ ತೆಗೆದು ಪಕ್ಕಕ್ಕಿಡಿ. ಈಗ ಅದೇ ಕಡಾಯಿಗೆ 2 ಟೀ ಸ್ಪೂನ್ ತುಪ್ಪ ಹಾಕಿ, ಬ್ರೆಡ್ ಕ್ರಂಬ್ಸ್ ಸೇರಿಸಿ 5-6 ನಿಮಿಷ ಹುರಿಯಿರಿ.

మీకు స్వీట్ తినాలనిపిస్తే ఇలా10ని||ల్లో చేసుకొని తినేయండి-Bread Halwa In Telugu-Instant Sweet Recipe - YouTube

ಬ್ರೆಡ್ ಕ್ರಂಬ್ಸ್ ಗೋಲ್ಡನ್ ಬ್ರೌನ್ ಬಣ್ಣ ಬಂದ ಬಳಿಕ ಅದಕ್ಕೆ 1 ಕಪ್ ಬಿಸಿ ಹಾಲನ್ನು ಹಾಕಿ, ಗಂಟಿಲ್ಲದಂತೆ ಮಿಶ್ರಣ ಮಾಡಿ. ಬ್ರೆಡ್ ಕ್ರಂಬ್ಸ್ ಹಾಲನ್ನು ಸಂಪೂರ್ಣವಾಗಿ ಹೀರಿಕೊಂಡ ಬಳಿಕ ಸಕ್ಕರೆಯನ್ನು ಸೇರಿಸಿ, ಮಿಶ್ರಣ ಮಾಡಿ. ಸಕ್ಕರೆ ಸಂಪೂರ್ಣವಾಗಿ ಕರಗಿದ ಬಳಿಕ ಹುರಿದ ಒಣ ಹಣ್ಣುಗಳು, ಏಲಕ್ಕಿ ಪುಡಿ, ಹಾಗೂ ನೆನೆಸಿಟ್ಟ ಕೇಸರಿಯನ್ನು ಸೇರಿಸಿ, ಮಿಶ್ರಣ ಮಾಡಿ. ಈಗ ಉಳಿದ ತುಪ್ಪವನ್ನು ಸೇರಿಸಿ, ಎಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಿ. ತುಪ್ಪ ಹಲ್ವಾದಿಂದ ಬೇರ್ಪಡಲು ಪ್ರಾರಂಭಿಸಿದಾಗ ಉರಿಯನ್ನು ಆಫ್ ಮಾಡಿದರೆ ಬಿಸಿಬಿಸಿಯಾದ ಬ್ರೆಡ್ ಹಲ್ವಾ ತಯಾರಾಗುತ್ತದೆ.

ಇದನ್ನೂ ಓದಿ :- ಮನೆಯಲ್ಲಿಯೇ ಆರೋಗ್ಯಕರ ಟೊಮೆಟೊ ಸೂಪ್ ಮಾಡೋದು ಹೇಗೆ ಗೊತ್ತಾ..?

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!