ರುಚಿಕರವಾದ ಪೈನಾಪಲ್ ಹಲ್ವಾ ಮಾಡೋದು ಹೇಗೆ ಗೊತ್ತಾ..?

ಯಾವಾಗಲು ಮನೆಯಲ್ಲಿ ಕ್ಯಾರೆಟ್ ಹಲ್ವಾವನ್ನು ಬೇಜಾರಾಗಿದ್ದರೆ ಒಮ್ಮೆಯಾದರು ರುಚಿಕರವಾದ ಪೈನಾಪಲ್ ಹಲ್ವಾ (pineapple halwa) ವನ್ನು ಮಾಡಿ. ಪೈನಾಪಲ್ ಹಲ್ವಾವನ್ನು ಮಕ್ಕಳು ಕೂಡ ತುಂಬಾ ಇಷ್ಟ ಪಟ್ಟು ತಿನ್ನುತ್ತಾರೆ. ಹಾಗೂ ಇದನ್ನು ಮಾಡುವುದು ತುಂಬಾ ಸುಲಭವಾಗಿದೆ. ಹಾಗಾದರೆ ತುಂಬಾ ರುಚಿಕರವಾದ ಪೈನಾಪಲ್ ಹಲ್ವಾನ್ನು ಮಾಡುವುದು ಹೇಗೆ ನೊಡೋಣ..


ಬೇಕಾಗಿರುವ ಸಾಮಾಗ್ರಿಗಳು
ಪೈನಾಪಲ್- 1
ಕಾರ್ನ್ ಫ್ಲೋರ್ – 1 ಬಟ್ಟಲು
ಸಕ್ಕರೆ- 2 ಬಟ್ಟಲು
ದ್ರಾಕ್ಷಿ- ಸ್ವಲ್ಪ
ಗೋಡಂಬಿ- ಸ್ವಲ್ಪ
ಬಾದಾಮಿ- ಸ್ವಲ್ಪ
ಕೇಸರಿ ದಳ – ಸ್ವಲ್ಪ
ತುಪ್ಪ- 1 ಬಟ್ಟಲು
ಏಲಕ್ಕಿ ಪುಡಿ – ಸ್ವಲ್ಪ ಇದನ್ನೂ ಓದಿ :- ಮನೆಯಲ್ಲಿಯೇ ಫಟಾ ಫಟ್ ಎಂದು ಸಬ್ಬಕ್ಕಿ ಪಾಯಸ ಮಾಡಿ

ಮಾಡುವ ವಿಧಾನ :-
ಮೊದಲಿಗೆ ಪೈನಾಪಲ್ ತೆಗೆದುಕೊಂಡು ಸಿಪ್ಪೆ ತೆಗೆದು ಸಣ್ಣದಾಗಿ ಕತ್ತರಿಸಿಕೊಳ್ಳಿ. ನಂತರ ಮಿಕ್ಸಿ ಜಾರ್ ಗೆ ಹಾಕಿ ರುಬ್ಬಿಕೊಳ್ಳಿ. ರುಬ್ಬಿದ ಪೈನಾಪಲ್ ನ್ನು ಉಂಡೆಗಳಿಲ್ಲದಂತೆ ಸೋಸಿಕೊಳ್ಳಿ. ನಂತರ ಇದಕ್ಕೆ ಕಾರ್ನ್ ಫ್ಲೋರ್ ಹಾಕಿ ಉಂಡೆಗಳಿಲ್ಲದಂತೆ ಮಿಶ್ರಣ ಮಾಡಿಕೊಳ್ಳಿ. ಬಳಿಕ ಒಂದು ಬಟ್ಟಲು ನೀರು ಹಾಕಿ ಮಿಶ್ರಣ ಮಾಡಿ. ಒಲೆಯ ಮೇಲೆ ಬಾಣಲೆ ಇಟ್ಟು ಅದಕ್ಕೆ ಸಕ್ಕರೆ ಹಾಗೂ ಒಂದು ಸಣ್ಣಬಟ್ಟಲು ನೀರು ಹಾಕಿ ಸಕ್ಕರೆ ಕರಗಲು ಬಿಡಿ. ನಂತರ ಒಂದು ನಿಮಿಷ ಕುದಿಸಿಕೊಂಡು ಪೈನಾಪಲ್ ಕಾರ್ನ್ ಫ್ಲೋರ್ ಮಿಶ್ರಣವನ್ನು ಹಾಕಿ ಸಣ್ಣ ಉರಿಯಲ್ಲಿಟ್ಟು ಸ್ಫೂನ್ ನಲ್ಲಿ ಕೈಯಾಡಿಸುತ್ತಲೇ ಇರಿ.ಮಿಶ್ರಣ ಗಟ್ಟಿಯಾದ ಬಳಿಕ ಇದಕ್ಕೆ ಕೇಸರಿ ದಳ ಏಲಕ್ಕಿ ಪುಡಿ ಹಾಕಿ ಕಲಸಿಕೊಳ್ಳಿ. ನಿಧಾನಗತಿಯಲ್ಲಿ ತುಪ್ಪವನ್ನು ಸ್ವಲ್ಪ, ಸ್ವಲ್ಪವೇ ಹಾಕಿ ಮಿಶ್ರಣ ಮಾಡಿಕೊಳ್ಳಿ. ಕೊನೆಯಲ್ಲಿ ಸಣ್ಣಗೆ ಕತ್ತರಿಸಿಕೊಂಡ ದ್ರಾಕ್ಷಿ, ಗೋಡಂಬಿ ಹಾಗೂ ಬಾದಾಮಿ ಚೂರುಗಳನ್ನು ಹಾಕಿ ಮಿಶ್ರಣ ಮಾಡಿದರೆ ರುಚಿಕರವಾದ ಪೈನಾಪಲ್ ಹಲ್ವಾ ಸವಿಯಲು ಸಿದ್ಧವಾಗುತ್ತದೆ.

ಇದನ್ನೂ ಓದಿ :-  ಕೇವಲ 10 ನಿಮಿಷದಲ್ಲಿ ರುಚಿಕರವಾದ ಪಾಲಕ್ ರೈಸ್ ಮಾಡುವುದು ಹೇಗೆ ಗೊತ್ತಾ..?

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!