ಜಿಲೇಬಿ. ಎಲ್ಲರ ಅಚ್ಚುಮೆಚ್ಚಿನ ತಿಂಡಿ. ಈ ಜಿಲೇಬಿ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ.. ಜಿಲೇಬಿ (Jalebhi) ಮಾಡಲು ಬೇಕಾಗುವ ಪದಾರ್ಥಗಳು .
ಸಕ್ಕರೆ- ನಾಲ್ಕು ಕಪ್ , ಮೈದಾ ಹಿಟ್ಟು- 2 ಕಪ್ , ಮೊಸರು-1 ಬಟ್ಟಲು, ಬೇಕಿಂಗ್ ಸೋಡಾ- ಸ್ವಲ್ಪ
ಕೇಸರಿ ದಳ-15-20 ಹಾಲು- ಒಂದು ಸಣ್ಣ ಬಟ್ಟಲು, ನಿಂಬೆ ರಸ- ಸ್ವಲ್ಪ, ಏಲಕ್ಕಿ ಪುಡಿ- ಸ್ವಲ್ಪ
ಎಣ್ಣೆ-ಅಗತ್ಯಕ್ಕೆ ತಕ್ಕಷ್ಟು. ಜಿಲೇಬಿ ಹಾಕಲು ಸಾಸ್ ಬಾಟಲಿ
ಮೊದಲಿಗೆ ಹಾಲನ್ನು ಕಾಯಿಸಿ ಅದಕ್ಕೆ ಕೇಸರಿ ದಳ ಹಾಕಿ ನೆನೆಯಲು ಬಿಡಿ. ನಂತರ ಒಂದು ಪಾತ್ರೆಗೆ ನಾಲ್ಕು ಕಪ್ ಸಕ್ಕರೆ ಹಾಗೂ 1 ಕಪ್ ನೀರು ಹಾಕಿ ಅಂಟಿನ ಹದಕ್ಕೆ ಪಾಕವಾಗುವಂತೆ ಕಾಯಿಸಿ. ನಂತರ ಇದಕ್ಕೆ ಏಲಕ್ಕಿ ಪುಡಿ, ಹಾಗೂ ಹಾಲಿನಲ್ಲಿ ನೆನೆಸಿದ ಕೇಸರಿಯನ್ನು ಅರ್ಧ ಹಾಕಿ, ಮತ್ತರ್ಧ ತೆಗೆದಿಡಿ.
ಬಳಿಕ ಒಂದು ಪಾತ್ರೆಗೆ ಮೈದಾ ಹಿಟ್ಟು, ಮೊಸರು ಸ್ವಲ್ಪ ನೀರು ಹಾಕಿಕೊಂಡು ಇಡ್ಲಿ ಹಿಟ್ಟಿನಂತೆ ಮಾಡಿಕೊಳ್ಳಿ. ನಂತರ ಉಳಿದರ್ಧ ಕೇಸರಿ ಹಾಗೂ ಬೇಕಿಂಗ್ ಸೋಡಾ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಒಲೆಯ ಮೇಲೆ ಬಾಣಲೆಯಿಟ್ಟು ಎಣ್ಣೆ ಕಾಯಿಸಿಕೊಳ್ಳಿ. ನಂತರ ಹಿಟ್ಟನ್ನು ಸಾಸ್ ಬಾಟಲಿಗೆ ಹಾಕಿ ಎಣ್ಣೆಗೆ ಸುರುಳಿಯಾಕಾರದಲ್ಲಿ ಬಿಡಿ.ಎರಡೂ ಬದಿಯಲ್ಲಿ ಚಿನ್ನದ ಬಣ್ಣ ಬರುವವರೆಗೆ ಕರಿಯಿರಿ. ನಂತರ ತೆಗೆದು ಸಕ್ಕರೆ ಪಾಕಕ್ಕೆ ಹಾಕಿ ಎರಡೂ ಬದಿಯಲ್ಲೂ ಎರಡೆರಡು ನಿಮಿಷ ನೆನೆಸಿ ತೆಗೆದರೆ ರುಚಿಕರವಾದ ಜಿಲೇಬಿ ಸವಿಯಲು ಸಿದ್ಧ. ಇದನ್ನೂ ಓದಿ :- ಸಿಂಪಲ್ ಆಗಿ ಮಾಡಿ ಚಿಕನ್ ಕರಿ – ಮನೆ ಮಂದಿಯೆಲ್ಲ ಟೇಸ್ಟ್ ಸವಿಯಿರಿ