ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ 66 ನೇ ಪುಣ್ಯಸ್ಮರಣೆ ಹಿನ್ನೆಲೆ ವಿಧಾನಸೌಧದ ಮುಂಬಾಗದಲ್ಲಿರುವ ಡಾ. ಬಿ.ಆರ್ ಅಂಬೇಡ್ಕರ್ ಪ್ರತಿಮೆಗೆ ಮಾಜಿ ಸಿಎಂ ಸಿದ್ದರಾಮಯ್ಯ ( SIDDARAMAIAH ) ಪುಷ್ಪ ನಮನ ಸಲ್ಲಿಸಿದ್ದಾರೆ.
ಶಿಕ್ಷಣ, ಸಂಘಟನೆ ಮತ್ತು ಹೋರಾಟದ ಹಾದಿಯನ್ನು ಮರೆಯದೆ, ನಮ್ಮೆಲ್ಲರ ವಿಚಾರ ಮತ್ತು ಆಚಾರದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ನಮ್ಮೊಳಗೆ ಸದಾ ಜೀವಂತವಾಗಿರಿಸಿಕೊಂಡು, ನಮಗಾಗಿ ಅವರು ಕಂಡ ಕನಸುಗಳನ್ನು ನನಸು ಮಾಡೋಣ.#BRAmbedkar #MahaparinirvanDiwas2022 pic.twitter.com/thnWSAamec
— Siddaramaiah (@siddaramaiah) December 6, 2022
ನಂತರ ಮಾತನಾಡಿದ ಅವರು, ಡಾ. ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವುದು. ಮತ್ತೊಂದೆಡೆ ದಲಿತ ವಿರೋಧಿ ನೀತಿ ಅನುಸರಿಸುವುದನ್ನು ಖಂಡಿಸುತ್ತೇನೆ ಎಂದು ಸಿಎಂ ಬೊಮ್ಮಾಯಿ ಹೆಸರೇಳದೆ ಕಿಡಿಕಾರಿದ್ದಾರೆ. ಬಾಬಾ ಸಾಹೇಬ್ ಅಂಬೇಡ್ಕರ್ ನಮಗೆ ಇಂತಹ ಸಂವಿಧಾನ ಕೊಡದಿದ್ದರೆ ಮೋದಿ ಪ್ರಧಾನಿ ಆಗ್ತಿರಲಿಲ್ಲ. ನಾನು ಮುಖ್ಯಮಂತ್ರಿ ಆಗುತ್ತಿರಲಿಲ್ಲ ಎಂದು ಹೇಳಿದ್ರು. ಇದನ್ನೂ ಓದಿ : – ಕಾಫಿನಾಡಲ್ಲಿ ದತ್ತಜಯಂತಿ ಸಂಭ್ರಮ – ಅನುಸೂಯ ದೇವಿ ದರ್ಶನಕ್ಕೆ ತೆರಳಿದ ಸಾವಿರಾರು ಮಹಿಳೆಯರು
ಸಿದ್ದರಾಮಯ್ಯ ಚಾಮರಾಜಪೇಟೆ ( CHAMARAJPETE )ಅಳಿಯ ಎಂಬ ಜಮೀರ್ ( ZAMEER KHAN ) ಹೇಳಿಕೆಗೆ ಪ್ರತಿಕ್ರಿಯಿಸಿ ನಮ್ಮ ಮಾವ ಚಾಮರಾಜಪೇಟೆಯವರು. ಅದಕ್ಕಾಗಿ ಜಮೀರ್ ಈ ರೀತಿ ಹೇಳಿರಬೇಕು ಎಂದು ನಗೆ ಚಟಾಕಿ ಹಾರಿಸಿದ್ದಾರೆ.
ನಾನು ಎಲ್ಲಿ ಸ್ಪರ್ಧೆ ಮಾಡಬೇಕು ಎಂಬ ತೀರ್ಮಾನ ತೆಗೆದುಕೊಳ್ಳುವುದನ್ನು ಹೈಕಮಾಂಡ್ ಗೆ ಬಿಟ್ಟಿದ್ದೇನೆ. ನಾನು ಸ್ಪರ್ಧೆ ಮಾಡುವ ಕ್ಷೇತ್ರವನ್ನು ಹೈಕಮಾಂಡ್ ನಿರ್ಧಾರ ಮಾಡುತ್ತೆ ಎಂದು ತಿಳಿಸಿದ್ರು.
ಗುಜರಾತ್ ಹಾಗೂ ಹಿಮಾಚಲ ಪ್ರದೇಶ ( HIMACHAL PRADESSH ) ದಲ್ಲಿ ಚುನಾವಣೋತ್ತರ ಸಮೀಕ್ಷೆಯಲ್ಲಿ ಬಿಜೆಪಿಗೆ ಮುನ್ನಡೆ ಆಗುತ್ತದೆ ಎಂಬ ವಿಚಾರವಾಗಿ ಮಾತನಾಡಿದ ಅವರು, ಡಿ. 8ರ ವರೆಗೆ ಕಾಯೋಣ ಇರಿ. ಒಂದೊಂದು ಚಾನಲ್ ಒಂದೊಂದು ಸಮೀಕ್ಷೆ ಕೊಡುತ್ತಿದೆ. ಆದರೆ ಡಿ. 8 ರಂದು ಫಲಿತಾಂಶ ಬರಲಿದೆ. ಜೊತೆಗೆ ಅಲ್ಲಿನ ಫಲಿತಾಂಶ ರಾಜ್ಯದ ಚುನಾವಣೆ ಫಲಿತಾಂಶದ ಮೇಲೆ ಪರಿಣಾಮ ಬೀರಲ್ಲ ಎಂದು ಹೇಳಿದ್ರು.
ಇದನ್ನೂ ಓದಿ : – ಕರವೇ ನಡೆ ಬೆಳಗಾವಿ ಕಡೆ ಚಳುವಳಿ – ಹಿರೇಬಾಗೇವಾಡಿ ಟೋಲ್ ಬಳಿ ಬಿಗಿ ಭದ್ರತೆ