ದಾಳಿಂಬೆ ಹಣ್ಣು (Pomegranate) ನಿತ್ಯ ಸೇವಿಸುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ದಾಳಿಂಬೆ ತಿಂದರೆ ರಕ್ತದೊತ್ತಡ ಕಡಿಮೆಯಾಗುತ್ತದೆ . ದಾಳಿಂಬೆ ಅನೇಕ ರೋಗಗಳಿಂದ ನಮ್ಮನ್ನು ರಕ್ಷಿಸಲು ಸಹಾಯ ಮಾಡುತ್ತದೆ .
ದಾಳಿಂಬೆಯಲ್ಲಿ ವಿಟಮಿನ್ (Vitamin) , ಕಬ್ಬಿಣ (Iron), ಪೊಟ್ಯಾಸಿಯಮ್ (Pottasium) ಪೋಷಕಾಂಶಗಳಿವೆ. ದಾಳಿಂಬೆ ನಮ್ಮ ದೇಹವನ್ನು ಸದೃಢವಾಗಿ ಇಡುವುದರ ಜೊತೆಗೆ ಅನೇಕ ಆರೋಗ್ಯ ಸಮಸ್ಯೆಗಳಿಂದ ಪರಿಹಾರ ಕಂಡುಕೊಳ್ಳಲು ಸಹಾಯಕವಾಗಿದೆ. ಪ್ರತಿನಿತ್ಯ ಒಂದು ದಾಳಿಂಬೆ ಹಣ್ಣನ್ನು ಸೇವಿಸುವ ಮೂಲಕ ಆರೋಗ್ಯ ಪ್ರಯೋಜನ ಪಡೆದುಕೊಳ್ಳಬಹುದು . ದಾಳಿಂಬೆ ಹಣ್ಣನ್ನು ಸೇವಿಸುವುದರಿಂದ ದೇಹದಲ್ಲಿ ರಕ್ತ ಹೀನತೆ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳಬಹುದು . ಇದನ್ನೂ ಓದಿ : – ಬೆಟ್ಟದ ನೆಲ್ಲಿಕಾಯಿಯನ್ನು ದಿನನಿತ್ಯ ಸೇವಿಸುವುದರಿಂದ ಏನೆಲ್ಲ ಪ್ರಯೋಜನೆ ಇದೆ ನಿಮಗೆ ತಿಳಿದಿದೆಯೇ..?
ಜೊತೆಗೆ ದೇಹದಲ್ಲಿನ ಹೆಚ್ಚುವರಿ ನಿವಾರಣೆಗೆ ಇದು ಸಹಾಯ ಮಾಡುತ್ತದೆ . ದಾಳಿಂಬೆಯಲ್ಲಿ ನಾರಿನಂಶ ಹೆಚ್ಚಿರುವ ಜೊತೆಗೆ ಕಡಿಮೆ ಪ್ರಮಾಣದ ಕ್ಯಾಲರಿ ಹೊಂದಿರುತ್ತದೆ. ಇದು ದೇಹದ ತೂಕ ಇಳಿಸಲು ಸಹಾಯ ಮಾಡುತ್ತದೆ . ದಾಳಿಂಬೆ ಸೇವನೆಯಿಂದ ಮಖದ ಕಾಂತಿಯನ್ನು ಹೆಚ್ಚಿಸಿಕೊಳ್ಳಬಹುದು . ಮಹಿಳೆಯರ ಡಯೆಟ್ ಲಿಸ್ಟ್ ನಲ್ಲಿ ದಾಳಿಂಬೆ ಹಣ್ಣು ಪ್ರಮುಖ ಪಾತ್ರ ಹೊಂದಿದೆ .ಇದು ಕೋಶಗಳ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.ಇದು ಮುಖಕ್ಕೆ ಹೊಳಪು ನೀಡುತ್ತದೆ.
ದಾಳಿಂಬೆಯಲ್ಲಿ ಫೈಬರ್ ಪ್ರಮಾಣವು ಕಂಡುಬರುತ್ತದೆ, ಇದರೊಂದಿಗೆ, ಇದು ದೇಹದಲ್ಲಿ ನೀರಿನ ಕೊರತೆಯನ್ನು ಪೂರೈಸಲು ಸಹ ಕೆಲಸ ಮಾಡುತ್ತದೆ. ಸಾಮಾನ್ಯವಾಗಿ ಯಾವುದೇ ಹಣ್ಣನ್ನು ಬೆಳಿಗ್ಗೆ ಸೇವಿಸುವುದು ಉತ್ತಮ. ಬೆಳಿಗ್ಗೆ ಎದ್ದ ನಂತರ, ಬೆಳಗಿನ ಉಪಾಹಾರಕ್ಕೆ ಅರ್ಧ ಗಂಟೆ ಮೊದಲು ಅಥವಾ ಬೆಳಗಿನ ಉಪಾಹಾರದೊಂದಿಗೆ ಈ ಹಣ್ಣನ್ನು ಸೇವಿಸುವುದು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಇದನ್ನೂ ಓದಿ : – ದಿನ ನಿತ್ಯ ಒಂದು ಚಮಚ ಜೇನುತುಪ್ಪ ಸೇವಿಸುವುದರಿಂದ ನಿಮ್ಮ ಆರೋಗ್ಯದಲ್ಲಿ ಆಗುವ ಪ್ರಯೋಜನಗಳೆನು..?