ದಯವಿಟ್ಟು ಭಾವೋದ್ವೇಗದಿಂದ ಮಾತನಾಡಬೇಡಿ. ನೀವು ದೊಡ್ಡವರು, ಮಂತ್ರಿಯಾಗಿದ್ದವರು. ಶಾಸಕರಾಗಿ ಬಹಳ ವರ್ಷ ಕೆಲಸ ಮಾಡಿದವರು. ಇಂತಹ ದುಃಖದ ಮನೆಗಳಿಗೆ ಹೋಗಿ ಸಾಕಷ್ಟು ಬಾರಿ ಸಾಂತ್ವನ ಹೇಳಿದ್ದೀರಿ.
ಭಾವೋದ್ವೇಗ ಬೇಡ ಎಂದು ಚಂದ್ರು ಅನುಮಾನಾಸ್ಪದ ಸಾವು ಪ್ರಕರಣ (Chandru Case) ತನಿಖೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದ ಹೊನ್ನಾಳಿ ಶಾಸಕ ರೇಣುಕಾಚಾರ್ಯ (Renukacharya) ಗೆ ಆರಗ ಜ್ಞಾನೇಂದ್ರ (Araga Jnanendra) ಮನವಿ ಮಾಡಿದ್ದಾರೆ. ಮಗ ತೀರಿಕೊಂಡಾಗ ರೇಣುಕಾಚಾರ್ಯ ಸಹಜವಾಗಿಯೇ ಭಾವಕರಾಗಿದ್ದಾರೆ. ನಾನು ಅವರ ಮನೆಗೆ ಭೇಟಿ ಕೊಟ್ಟಿದ್ದೆ. ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದೇನೆ. ಪೊಲೀಸರು ಪ್ರಾಮಾಣಿಕವಾಗಿ ತನಿಖೆ ಮಾಡುತ್ತಿದ್ದಾರೆ. ಪೋಸ್ಟ್ ಮಾರ್ಟಂ ರಿಪೋರ್ಟ್ ಬರಬೇಕು. ತನಿಖೆ ನಿಷ್ಪಕ್ಷಪಾತವಾಗಿ, ಪ್ರಾಮಾಣಿಕವಾಗಿ ಆಗುತ್ತದೆ. ರಿಪೋರ್ಟ್ ಬಂದ ಮೇಲೆ ಎಲ್ಲಾ ತಿಳಿಯಲಿದೆ ಎಂದು ಹೇಳಿದ್ದಾರೆ. ತನಿಖೆ ವಿಚಾರದಲ್ಲಿ ಯಾವುದೇ ಸಂದೇಹ ಬೇಡ ಎಂದು ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ : – ಬೆಳಗಾವಿ ,ಬಾಗಲಕೋಟೆ ಜಿಲ್ಲೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರವಾಸ