ಹಿಂದೂಗಳ ಪವಿತ್ರ ಹಬ್ಬಗಳಲ್ಲಿ ಒಂದು ಜನ್ಮಾಷ್ಠಮಿ. ಇದನ್ನು ಕೃಷ್ಣ ಜನ್ಮಾಷ್ಟಮಿ ( krishna janumastami ) ಗೋಕುಲಾಷ್ಟಮಿ ( gokulastami ) ಕೃಷ್ಣಾಷ್ಟಮಿ ಎಂದೂ ಕರೆಯಲಾಗುತ್ತದೆ, ಇದು ಕೃಷ್ಣನ ಜನ್ಮದಿನವನ್ನು ಸೂಚಿಸುತ್ತದೆ, ವಿಷ್ಣುವಿನ ಎಂಟನೇ ಅವತಾರ ಶ್ರೀ ಕೃಷ್ಣ.
ಈ ಹಬ್ಬವನ್ನು ಅದ್ಧೂರಿಯಾಗಿ ಎಲ್ಲಾ ಕಡೆ ಆಚರಣೆ ಮಾಡುತ್ತಾರೆ ಕೃಷ್ಣ ಹುಟ್ಟಿದ ಮಥುರಾ ಮತ್ತು ವೃಂದಾವನ ನಗರಗಳಲ್ಲಿ ಇದನ್ನು ಇನ್ನೂ ಅದ್ಧೂರಿಯಾಗಿ ಆಚರಣೆ ಮಾಡುತ್ತಾರೆ. ಈ ವರ್ಷ, ಜನ್ಮಾಷ್ಟಮಿಯನ್ನು ಆಗಸ್ಟ್ 18 ಮತ್ತು 19ರಂದು ಎರಡು ದಿನಗಳ ಕಾಲ ಆಚರಿಸಲಾಗುತ್ತದೆ.
ಈ ಹಬ್ಬದಂದು ನೀವು ಈ ವಸ್ತುಗಳನ್ನು ಖರೀದಿಸಿ ಮನೆಗೆ ತಂದರೆ ಅದು ಶ್ರೀಕೃಷ್ಣನನ್ನು ಸಂತೋಷಪಡಿಸುತ್ತದೆ. ಆತನ ಅನುಗ್ರಹದಿಂದ ನೀವು ಬಯಸಿದ ಭಾಗ್ಯ ಪಡೆಯಬಹುದಾಗಿದೆ.
ಬೆಣ್ಣೆ ಎಂದರೆ ಕೃಷ್ಣನಿಗೆ ಅಚ್ಚುಮೆಚ್ಚು
ಶ್ರೀ ಕೃಷ್ಣನಿಗೆ ಬೆಣ್ಣೆ ಕಳ್ಳ ಎಂದೇ ಮುದ್ದಿನಿಂದ ಕರೆಯುತ್ತಾರೆ. ಶ್ರೀಕೃಷ್ಣನಿಗೆ ಬೆಣ್ಣೆ ಎಂದರೆ ಅಚ್ಚುಮೆಚ್ಚು. ಗೋಪಿ( gopi ) ಯರಿಂದ ಬೆಣ್ಣೆ ಕದಿಯುತ್ತಿದ್ದುದರಿಂದ ತುಂಟ ಕೃಷ್ಣನಿಗೆ ಅದೇ ಹೆಸರು ಬಂದಿದೆ. ಅದಕ್ಕೇ ಜನ್ಮಾಷ್ಟಮಿ ಆಚರಣೆಗೆ ಬೆಣ್ಣೆ ಇರಲೇಬೇಕು. ಬೆಣ್ಣೆಯನ್ನು ಮನೆಯಲ್ಲೇ ತಯಾರಿಸಿ ಇಲ್ಲವೇ ಖರೀದಿಸಿ ಶ್ರೀಕೃಷ್ಣನಿಗೆ ಅರ್ಪಿಸಬೇಕು. ಇದನ್ನೂ ಓದಿ :- ನಾಳೆ ನಾಗರಪಂಚಮಿ ಹಬ್ಬ – ಈ ಹಬ್ಬದ ವಿಶೇಷತೆಯೇನು ಗೊತ್ತಾ…?
ಕೊಳಲು
ಕೊಳಲಿಲ್ಲದೆ ಶ್ರೀ ಕೃಷ್ಣನನ್ನು ಕಲ್ಪಿಸಿಕೊಳ್ಳುವುದೂ ಸಾಧ್ಯವಿಲ್ಲ. ಆತನ ಕೊಳಲು ಪ್ರೀತಿಯಿಂದಲೇ ಅವನನ್ನು ಮುರಳೀಧರ, ಬನ್ಸಿವಾಲೆ, ಬನ್ಶಿಧರ್, ಬಸುರಿ ವಾಲೆ ಮತ್ತು ಬನ್ಸಿ ಬಾಜಯ್ಯ ಎಂದೆಲ್ಲ ಕರೆಯಲಾಗುತ್ತದೆ. ಆದುದರಿಂದ ಜನ್ಮಾಷ್ಟಮಿಯ ದಿನ ಖಂಡಿತವಾಗಿ ಕೊಳಲನ್ನು ಮನೆಗೆ ತರಬೇಕು. ದೇವರಿಗೆ ಸಣ್ಣ ಮರದ ಅಥವಾ ಬೆಳ್ಳಿಯ ಕೊಳಲನ್ನು ಅರ್ಪಿಸಿ. ನೀವೂ ನೆನೆದ ಕಾರ್ಯಗಳೆಲ್ಲವೂ ಈಡೇರುತ್ತದೆ.
ನವಿಲು ಗರಿ
ಶ್ರೀಕೃಷ್ಣನು ನವಿಲು ಗರಿಯನ್ನು ತುಂಬಾ ಪ್ರೀತಿಸುತ್ತಿದ್ದನು, ತನ್ನ ಕಿರೀಟದ ಮೇಲೆ ಅಲಂಕರಿಸಿಕೊಳ್ಳುತ್ತಿದ್ದನು. ವಾಸ್ತು ಶಾಸ್ತ್ರದಲ್ಲಿಯೂ ನವಿಲು ಧನಾತ್ಮಕ ಶಕ್ತಿಯನ್ನು ತರುವುದೆಂದು ಹೇಳಲಾಗಿದೆ. ಜನ್ಮಾಷ್ಟಮಿಯ ದಿನದಂದು ಮನೆಯಲ್ಲಿ ನವಿಲು ಗರಿಗಳನ್ನು ತಂದಿಟ್ಟುಕೊಂಡರೆ ಸಮಸ್ಯೆಗಳು ಉಂಟಾಗುವುದಿಲ್ಲ ಎನ್ನಲಾಗುತ್ತೆ.
ಕರುವಿನ ಜೊತೆ ಹಸು ವಿಗ್ರಹವಿಡಿ
ಶ್ರೀಕೃಷ್ಣನ ಭಕ್ತರಿಗೆ ಅವನ ಗೋಪ್ರೇಮ ಗೊತ್ತೇ ಇದೆ. ಗೋವಿಂದ ಎಂದೇ ಹೆಸರಾದ ಶ್ರೀಕೃಷ್ಣ ಬಾಲ್ಯದಲ್ಲಿ ಹಸುಗಳನ್ನು ಮೇಯಿಸಲು ಹೋಗುತ್ತಿದ್ದ. ಇದರೊಂದಿಗೆ ಹಸುವಿನ ಹಾಲಿನಿಂದ ಮಾಡಿದ ಬೆಣ್ಣೆಯೂ ಶ್ರೀಕೃಷ್ಣನಿಗೆ ತುಂಬಾ ಇಷ್ಟ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗುರು ಗ್ರಹವು ಹಸುಗಳಲ್ಲಿ ನೆಲೆಸಿದೆ. ಆದ್ದರಿಂದ, ಜನ್ಮಾಷ್ಟಮಿ ಹಬ್ಬದಂದು, ನೀವು ಹಸು ಮತ್ತು ಕರುವಿನ ಸಣ್ಣ ಪ್ರತಿಮೆಯನ್ನು ಖರೀದಿಸಬೇಕು. ಇದನ್ನು ನಿಮ್ಮ ಮನೆ ಅಥವಾ ಕಛೇರಿಯಲ್ಲಿ ಈಶಾನ್ಯ ದಿಕ್ಕಿನಲ್ಲಿ ಇಡಬೇಕು. ಇದರೊಂದಿಗೆ ವಾಸ್ತು ದೋಷಗಳು ನಿವಾರಣೆಯಾಗಿ ಅದೃಷ್ಟ ಮತ್ತು ಸಮೃದ್ಧಿ ದೊರೆಯುತ್ತದೆ.
ಇದನ್ನೂ ಓದಿ :- ಬೆಂಗಳೂರಿನಲ್ಲಿ ಕಾವಡಿ ಹಬ್ಬ ಪ್ರಯುಕ್ತ ವಿಜಿನಪುರ ಶ್ರೀ ವಿನಾಯಕ ಸುಬ್ರಹ್ಮಣ್ಯ ದೇವಾಲಯದಲ್ಲಿ ವಿಶೇಷ ಪೂಜೆ