ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಜೀವನವನ್ನು ಜನರು ಬಯಸುತ್ತಿದ್ದಾರೆ. 99 % ರಷ್ಟು ಜನ ಶಾಂತಿ, ಸೌಹಾರ್ದತೆ ಬಯಸುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ಯು.ಟಿ ಖಾದರ್(U.T. KHADER ) ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು ಸಿಎಂ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದೇವೆ.
ಕೆಲವೊಂದು ಸಂಘಟನೆಗಳು ದ್ವೇಷದ ಸಮಾಜ ಸೃಷ್ಟಿಸಲು ಮುಂದಾಗಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು, ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಬೇಕು. ಕೋರ್ಟ್ ಆದೇಶವನ್ನು ಪಾಲಿಸುವಂತೆ ನೋಡಿಕೊಳ್ಳಬೇಕು. ವಿವಾದದ ಬಗ್ಗೆ ಕಾಂಗ್ರೆಸ್ ಮುಸ್ಲಿಂ ಶಾಸಕರನ್ನು ಹೊರತು ಪಡಿಸಿ,ಉಳಿದವರು ಮಾತನಾಡಲು ಯಾಕೆ ಹಿಂದೇಟು ಎಂಬ ಪ್ರಶ್ನೆಗೆ ಯುಟಿ ಗರಂ ಆದರು. ಇದರಲ್ಲಿ ಜಾತಿ,ಧರ್ಮವಿಲ್ಲ. ಎಲ್ಲ ಜಾತಿ, ಧರ್ಮದವರು ಶಾಂತಿ ಸುವ್ಯವಸ್ಥೆ ಬಯಸುತ್ತಿದ್ದಾರೆ. ಬೇರೆ ದೇಶದ ಮುಂದೆ ನಮ್ಮ ದೇಶವನ್ನು ಸ್ವಾಭಿಮಾನದಿಂದ ನೋಡುವುದು ನಮ್ಮ ಉದ್ದೇಶ.
ಯಾರು ಕೂಡ ಜಾತಿ ತರಬಾರದು, ಅದನ್ನ ಯಾರು ನೋಡುತ್ತಿಲ್ಲ.ಸುಪ್ರೀಂ ಕೋರ್ಟ್ ಆದೇಶವನ್ನು ಎಲ್ಲಾ ಕಡೆ ಪಾಲಿಸುತ್ತಾರೆ. ಪ್ರತಿಯೊಂದಕ್ಕೂ ಜಾತಿ,ಧರ್ಮ,ಪಕ್ಷ ತರಬೇಡಿ. ನಮ್ಮ ಮಕ್ಕಳಾದ್ರೂ ನೆಮ್ಮದಿಯಿಂದ ಬದುಕಲಿ. ಅದಕ್ಕೆ ನೀವೆಲ್ಲರೂ ಸಹಕಾರ ಕೊಡಿ ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ : – 2A ಮೀಸಲಾತಿಗಾಗಿ ಮುಖ್ಯಮಂತ್ರಿಗಳ ಮನೆಯ ಮುಂದೆ ಧರಣಿ ಸತ್ಯಾಗ್ರಹ ಮಾಡುತ್ತೇವೆ – ಜಯಮೃತ್ಯುಂಜಯ ಸ್ವಾಮೀಜಿ
ದೇಗುಲಗಳ ಮೇಲೆ ಅಟ್ಯಾಕ್ ವಿಚಾರವಾಗಿ ಮಾತನಾಡಿದ ಅವರು ನೀವು ಸರ್ಕಾರವನ್ನ ಕೇಳಬೇಕು. ನಮ್ಮನ್ನ ಕೇಳಿದರೆ ಹೇಗೆ. ನಾವು ಸಮಾಜವನ್ನ ಒಗ್ಗೂಡಿಸಬೇಕು. ಸಮಾಜದಲ್ಲಿ ಎಲ್ಲರೂ ಸೋದರ ಪ್ರೀತಿಯಿಂದ ಇದ್ದಾರೆ. ಕೆಲವು ತಿಂಗಳಿಂದ ಸಾಮರಸ್ಯ ಕೆಡಿಸುವ ಕೆಲಸ ಆಗ್ತಿದೆ. ಇದನ್ನ ಸರಿಪಡಿಸಿ ಅಂತ ಸರ್ಕಾರ ಕೇಳ್ತಿದ್ದೇವೆ ಎಂದು ತಿಳಿಸಿದ್ರು. .ಇದನ್ನೂ ಓದಿ : – ಬೆಂಗಳೂರಿನಲ್ಲಿ ಹಿಂದೂ ಕಾರ್ಯಕರ್ತರನ್ನು ವಶಕ್ಕೆ ಪಡೆದ ಪೊಲೀಸರು