ಕೋವಿಡ್ ( covied )ವಿಚಾರದಲ್ಲಿ ಸರ್ಕಾರ ಜನರಿಗೆ ಗೊಂದಲ ಹುಟ್ಟಿಸಬಾರದು ಎಂದು ಮಾಜಿ ಸಚಿವ ಯು ಟಿ ಖಾದರ್ ( u.t khadar ) ಸ್ಪಷ್ಟಪಡಿಸಿದ್ದಾರೆ. ಚೈನಾದಲ್ಲಿ ಏನಾಗಿದೆ ಅನ್ನೋ ಸತ್ಯ ತಿಳಿದುಕೊಳ್ಳಬೇಕು. ಸಾಮಾಜಿಕ ಜಾಲತಾಣದಲ್ಲಿ ಬಂದಿದ್ದನ್ನೆ ನಂಬಬಾರದು. ಭಯದ ವಾತಾವರಣದಲ್ಲಿ ಜನರನ್ನ ಗೊಂದಲಕ್ಕೆ ದೂಡಬಾರದು ಎಂದು ಖಾದರ್ ಹೇಳಿದ್ದಾರೆ. ಜನರು ತಮ್ಮ ಕಾರ್ಯಕ್ರಮದಲ್ಲಿ ಮುಂಜಾಗ್ರತೆ ವಹಿಸಬೇಕು.
ಚಳಿಗಾಲದಲ್ಲಿ ಕೋವಿಡ್ ಸೇರಿ ವೈರಸ್ ರೋಗ ಹೆಚ್ಚಾಗುತ್ತದೆ. ಸರ್ಕಾರ ಗೊಂದಲ ಹೆಚ್ಚಿಸದೇ ಸತ್ಯಾಸತ್ಯಾತೆ ತಿಳಿಸಿ ಅರಿವು ಮೂಡಿಸಬೇಕು. ಹಿಂದೆ ಮಾಡಿದ ಆಕ್ಸಿಜನ್ ಪ್ಲ್ಯಾಂಟ್ ಗುಣಮಟ್ಟ ಪರೀಕ್ಷೆ ಆಗಿಲ್ಲ ಎಂದು ಕಳವಳವ್ಯಕ್ತಪಡಿಸಿದ್ರು. ಇದನ್ನು ಓದಿ : – 40 ದಿನದಲ್ಲಿ 223 ಕೋಟಿ ರೂಪಾಯಿ ಆದಾಯ ಗಳಿಸಿದ ಶಬರಿಮಲೆ ದೇವಾಲಯ
ಕಾಂಗ್ರೆಸ್ ಗೆ ಕೋವಿಡ್ ನಿಯಮ ಪಾಲಿಸುವಂತೆ ಸುಧಾಕರ್ ( sudhakar ) ಸಲಹೆ ವಿಚಾರ ಕುರಿತಂತೆ ಪ್ರತಿಕ್ರಿಯಿಸಿ ಕೋವಿಡ್ ನ್ನು ರಾಜಕೀಯ ದೃಷ್ಟಿಯಲ್ಲಿ ನೋಡಬೇಡಿ. ನಮ್ಮ ಬಗ್ಗೆ ಕಾಳಜಿ ವಹಿಸಿದ್ದು ಖುಷಿ ನೀಡಿದೆ. ಹಾಗೇ ಎಲ್ಲರ ಬಗ್ಗೆ ಕಾಳಜಿ ವಹಿಸಿ ಎಂದು ಖಾದರ್ ಸಲಹೆ ನೀಡಿದ್ದಾರೆ. ಸರ್ಕಾರ ಈ ಹಿಂದಿನಂತೆ ಎಡವಟ್ಟು ಮಾಡೋದು ಬೇಡ ಎಂದು ಹೇಳಿದ್ದಾರೆ.
ಇದನ್ನು ಓದಿ : – ಅಮೆರಿಕದಲ್ಲಿ ಶತಮಾನದ ಭೀಕರ ಹಿಮಪಾತ- 50 ಮಂದಿ ಸಾವು