ಬಿಜೆಪಿ ( BJP ) ಯವರೇ ನಿಮಗೆ ಒಂದೇ ಒಂದು ಮುಸ್ಲಿಂ ವೋಟ್ ಬರೋದಿಲ್ಲ. ನಿಮ್ಮ ಕ್ಷೇತ್ರದಲ್ಲಿ ಮುಸ್ಲಿಂ ವೋಟ್ ಇರಬಹುದು ಅದಕ್ಕಾಗಿ ಇಡಿ ರಾಜ್ಯ ಬಲಿಕೊಡಬೇಡಿ ಎಂದು ಪರೋಕ್ಷವಾಗಿ ಸಿಎಂ ಬೊಮ್ಮಾಯಿ ( basavaraj bommai ) ವಿರುದ್ದ ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ( pramod muthalik ) ವಾಗ್ದಾಳಿ ನಡೆಸಿದ್ದಾರೆ.
ಕೊಪ್ಪಳದ ಅಂಜನಾದ್ರಿ ಬೆಟ್ಟದಲ್ಲಿ ಮಾತನಾಡಿದ ಅವರು, ಶಾಲೆಗೆ ಹಿಜಾಬ್ ಹಾಕ್ಕೊಂಡೆ ಹೋಗ್ತೇವೆ ಅಂತ ಸೊಕ್ಕು ತೋರಿಸಿದ್ರು. ಅವಾಗ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಹಾಕ್ಕೊಂಡು ಕ್ರಿಯೆಗೆ ಪ್ರತಿಕ್ರಿಯೆ ತೋರಿಸಿದ್ರು. ಜಾತ್ಯತೀತ ಅಂದ ಮೇಲೆ ಎಲ್ಲರಿಗೂ ಅವಕಾಶ ಇರಬೇಕು ಎಂದು ಹೇಳಿದ್ರು. ಇದನ್ನೂ ಓದಿ : – ಚಪ್ಪಲಿ ಹಾಕಿಕೊಂಡು ದೈವದ ದೀವಟಿಗೆ ನಿಂತ ತೇಜಸ್ವಿ ಸೂರ್ಯ..!
ಮುಸ್ಲಿಂರ 10 ಶಾಲೆ ಚರ್ಚೆನೆ ಇಲ್ಲ ಅಂದೋರು ಆದೇಶ ಹೇಗೆ ಬಂತು ರೀ…? ಆದೇಶ ಪ್ರತಿಗೆ ಸಹಿ ಮಾಡಿದ್ಯಾಕೆ..? ನೀವು ಬೂಟಾಟಿಕೆ ಮಾಡೋಕೆ ಹೋಗಬೇಡಿ. ಬಿಜೆಪಿಯವರೇ ನಿಮಗೆ ಒಂದೇ ಒಂದು ಮುಸ್ಲಿಂ ವೋಟ್ ಬರೋದಿಲ್ಲ. ನಿಮ್ಮ ಕ್ಷೇತ್ರದಲ್ಲಿ ಮುಸ್ಲಿಂ ( muslim ) ವೋಟ್ ಇರಬಹುದು, ಅದಕ್ಕಾಗಿ ಇಡಿ ರಾಜ್ಯ ಬಲಿಕೊಡಬೇಡಿ. ಆದೇಶ ರದ್ದಾಗೊವರೆಗೂ ನಮ್ಮ ಹೋರಾಟ ಮುಂದುವರೆಯುತ್ತೆ. ಮದರಸಾ ಬ್ಯಾನ್ ಆಗಬೇಕು ಅಂತ ನಾವು 2 ವರ್ಷದಿಂದ ಹೇಳ್ತಿದ್ದೀವಿ.
ಇಸ್ಲಾಂ ರಾಷ್ಟ್ರ ಪಾಕಿಸ್ತಾನದಲ್ಲೆ ಮದರಸಾ ಬ್ಯಾನ್ ಇದೆ. ಮದರಸಾ ಟೆರಸ್ಟಿಟ್ ತಯಾರು ಮಾಡೊ ಕೇಂದ್ರಗಳು . ನೀವು ಯೋಗಿ ಅದಿತ್ಯನಾಥ ಮಾದರಿಯಲ್ಲಿ ಆಡಳಿತ ಮಾಡಿ. ಅದು ಬಿಟ್ಟು ಮುಸ್ಲಿಂರಿಗೆ ಪ್ರತ್ಯೇಕ ಕಾಲೇಜು ನಿರ್ಮಾಣ ಮಾಡೋಕೆ ಹೊರಟಿದ್ದೀರಿ. ಇದು ನಾಚಿಕೇಡಿನ ಸಂಗತಿ. ನೀವು ಕೂಡಾ ಕಾಂಗ್ರೆಸ್ ರೀತಿ ತುಷ್ಟೀಕರಣ ರಾಜಕಾರಣ ಮಾಡ್ತಿದ್ದೀರ ಎಂದು ರಾಜ್ಯ ಸರ್ಕಾರದ ವಿರುದ್ದ ಮುತಾಲಿಕ್ ವಾಗ್ದಾಳಿ ನಡೆಸಿದ್ರು.
ಇದನ್ನೂ ಓದಿ : – ಸಿದ್ರಾಮುಲ್ಲಾ ಖಾನ್ ಆಗದೇ ಕೇಶವ ಆಗಲು ಸಾಧ್ಯವೇ? ಟ್ವೀಟ್ ಮೂಲಕ ಬಿಜೆಪಿ ವ್ಯಂಗ್ಯ