ಉಕ್ರೇನ್ ಮತ್ತು ರಷ್ಯಾ ನಡುವಿನ ಸಂಬಂಧ ದಿನದಿಂದ ದಿನಕ್ಕೆ ಉದ್ವಿಗ್ನ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ವಿದ್ಯಾರ್ಥಿಗಳು ಯಾವುದಕ್ಕೂ ಕಾಯದೇ ತಕ್ಷಣವೇ ಸ್ವದೇಶಕ್ಕೆ ಮರಳುವಂತೆ ಕೇಂದ್ರ ಸರಕಾರ ಸೂಚನೆ ನೀಡಿದೆ.
ಉಕ್ರೇನ್ ಸಿಡಿಸಿದ ಶೆಲ್ ಗಳಿಂದ ಗಡಿಯಲ್ಲಿನ ತಮ್ಮ ಶಿಬಿರ ಧ್ವಂಸವಾಗಿದೆ ಎಂದು ಆರೋಪಿಸಿದ್ದ ರಷ್ಯಾ ನಂತರ ಉಕ್ರೇನ್ ನಲ್ಲಿರುವ ಪ್ರತ್ಯೇಕವಾದಿಗಳಿಗೆ ಪ್ರತ್ಯೇಕ ರಾಷ್ಟ್ರ ಘೋಷಿಸುವಂತೆ ಒತ್ತಡ ಹೇರಿದೆ.
ಈ ಹಿನ್ನೆಲೆಯಲ್ಲಿ ಮೂರನೇ ಬಾರಿ ಉಕ್ರೇನ್ ನಲ್ಲಿರುವ ಭಾರತೀಯ ವಿದ್ಯಾರ್ಥಿಗಳಿಗೆ ಸೂಚನೆ ನೀಡಿರುವ ಕೇಂದ್ರ ವಿದೇಶಾಂಗ ಸಚಿವಾಲಯ ಕಾಯದೇ ಕೂಡಲೇ ಸ್ವದೇಶಕ್ಕೆ ಮರಳುವಂತೆ ಸೂಚಿಸಿದೆ.