ಸ್ನೇಹಿತನ ಜನ್ಮದಿನದ ಪಾರ್ಟಿಯಲ್ಲಿ ಕುಡಿದ ಮತ್ತಿನಲ್ಲಿ ವಿದ್ಯಾರ್ಥಿಗಳು ಕ್ರಿಕೆಟ್ ಬ್ಯಾಟ್ ನಿಂದ ಸುಮಾರು 13 ಕಾರುಗಳ ಗಾಜು ಪುಡಿಮಾಡಿ ಪುಂಡಾಟ ಪ್ರದರ್ಶಿಸಿದ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.
ಎರಡು ದಿನಗಳ ಹಿಂದೆ ಇಂದಿರಾನಗರದಲ್ಲಿ ಮಧ್ಯಾರಾತ್ರಿ 2 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಎರಡು ಬೈಕ್ ಗಳಲ್ಲಿ ಬಂದಿದ್ದ ಐವರು ಯುವಕರು ರಸ್ತೆ ಅಕ್ಕಪಕ್ಕ ನಿಲ್ಲಿಸಿದ್ದ ಕಾರುಗಳ ಗಾಂಜು ಹೊಡೆದು ವಿಕೃತಿ ಮೆರೆದಿದ್ದಾರೆ.
ರಾಜರಾಜೇಶ್ವರಿ ನಗರದ ಕೃಷ್ಣ ಗಾರ್ಡನ್, ಕೆಂಗೇರಿಯ ಭಾಗೇಗೌಡ ಲೇಔಟ್ ನಲ್ಲಿ ನಡೆದಿದ್ದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ರಾಜಸ್ಥಾನ ಮೂಲದ ರೋಹಿನ್ ಸೈನಿ ಬರ್ತಡೆ ಆಚರಿಸಿದ್ದು, ಯುಪಿ ಮೂಲದ ಸಕ್ಕಂ ಭಾರದ್ವಾಜ್, ಬಿಹಾರ ಮೂಲದ ಮಾಯಾಂ ವೈಆರ್, ಅದ್ನಾನ್ ಪಹಾದ್, ಜಯಸ್ ಬಂಧಿತರು.
ಕಾರುಗಳಿಗೆ ಹಾನಿ ಮಾಡಿದ ಎಲ್ಲರೂ ಇಂಜಿನಿಯರಿಂಗ್ 7ನೇ ಸೆಮ್ ವಿದ್ಯಾರ್ಥಿಗಳಾಗಿದ್ದಾರೆ. ಆರೋಪಿಗಳೆಲ್ಲರೂ ಹೊರರಾಜ್ಯದ ವಿದ್ಯಾರ್ಥಿಗಳಾಗಿದ್ದು, ಕೆಂಗೇರಿ ಬಳಿಯ ಅಪಾರ್ಟ್ ಮೆಂಟ್ ನಲ್ಲಿ ಪಾರ್ಟಿ ಮಾಡುತ್ತಿದ್ದರು. ಪಾರ್ಟಿ ಮಧ್ಯೆ ಕೂಲ್ ಡ್ರಿಂಕ್ ತರಲು ಶೆಲ್ ಪೆಟ್ರೋಲ್ ಬಂಕ್ ಗೆ ಹೋಗುತ್ತಿದ್ದರು. ಈ ವೇಳೆ ಕೈನಲ್ಲಿದ್ದ ಬ್ಯಾಟ್ ನಿಂದ ಕಾರ್ ಗ್ಲಾಸ್ ಹೊಡೆದು ಹಾಕಿದ್ದರು.
ಆರ್ ಆರ್ ನಗರದಲ್ಲಿ 7 ಮತ್ತು ಕೆಂಗೇರಿಯಲ್ಲಿ 8 ಕಾರು ಗ್ಲಾಸ್ ಹೊಡೆದು ಹಾಕಿದ್ದ ಆರೋಪಿಗಳು. ಸಿಸಿಟಿವಿ ದೃಶ್ಯಾವಳಿ ಆಧರಿಸಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.