ಆನೇಕಲ್ ಪಟ್ಟಣದಲ್ಲಿ ಕಳೆದ ರಾತ್ರಿ ಶ್ರೀ ಧರ್ಮರಾಯಸ್ವಾಮಿ ದ್ರೌಪತಿ ದೇವಿ ಒಣ ಕರಗ ಮಹೋತ್ಸವ ಸಾವಿರಾರು ಜನರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.
ರಾಜಬೀದಿಗಳಲ್ಲಿ ಕರಗ ಸಂಚರಿಸುತ್ತಿದ್ದಂತೆ ಗೋವಿಂದ ಗೋವಿಂದ ನಾಮಸ್ಮರಣೆ ಮುಗಿಲುಮುಟ್ಟಿತ್ತು. ಡೋಲು, ನಾದಸ್ವರ ಹಾಗೂ ತಮಟೆ ವಾದ್ಯಕ್ಕೆ ತಕ್ಕಂತೆ ಕರಗದ ನೃತ್ಯ ನೆರೆದಿದ್ದ ಭಕ್ತಾದಿಗಳಿಗೆ ವಿಶೇಷ ಅನುಭವವನ್ನು ತಂದುಕೊಟ್ಟಿತ್ತು. ಇದನ್ನೂ ಓದಿ :- ‘ಕೆಜಿಎಫ್–2’ – ಚೇರ್ ನಿಂದ ಶುರವಾದ ಜಗಳ ಗುಂಡೇಟಿನಲ್ಲಿ ಅಂತ್ಯ
ಆನೇಕಲ್ ಮುಖ್ಯ ರಸ್ತೆಯ ಇಕ್ಕೆಲಗಳಲ್ಲಿ ಸಾವಿರಾರು ಜನ ಭಕ್ತಾದಿಗಳು ಒಣ ಕರಗದ ವೈಭವವನ್ನು ಕಣ್ತುಂಬಿಕೊಂಡರು. ದಾರಿಯುದ್ದಕ್ಕೂ ಒಣ ಕರಗಕ್ಕೆ ಮಡಿಲಕ್ಕಿ ಹಾಗೂ ಮಂಗಳಾರತಿ ಎತ್ತುವ ಮೂಲಕ ಕರಗವನ್ನ ಸ್ವಾಗತಿಸಿದರು.
ಇದನ್ನೂ ಓದಿ :- ಬಹುಭಾಷಾ ನಟಿ ಕಾಜಲ್ ಅಗರ್ವಾಲ್ ಗೆ ಗಂಡು ಮಗು