ಮುಂಬೈ: ಕಾಂಗ್ರೆಸ್ ರಾಜ್ಯಸಭಾ ಸದಸ್ಯ ರಾಜೀವ್ ಸಾತಾವ್ ಕೊರೊನಾನಿಂದ ಸಾವನ್ನಪ್ಪಿದ್ದಾರೆ. ಒಂದು ವಾರದ ಹಿಂದೆ ಸಾತಾವ್ ಅವರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಆದರೆ, ಚಿಕಿತ್ಸೆ ಫಲಿಸದೆ ಸಾವಿಗೀಡಾಗಿದ್ದಾರೆ.
46 ವರ್ಷದ ಕಾಂಗ್ರೆಸ್ ರಾಜ್ಯಸಭಾ ಸದಸ್ಯ ರಾಜೀವ್ ಸತಾವ್ ಅವರಿಗೆ ಕಳೆದ ಏಪ್ರಿಲ್ 22ರಂದು ಕೊರೊನಾ ಸೋಂಕು ಬಂದು ತೀವ್ರ ಉಸಿರಾಟದ ಸಮಸ್ಯೆಯುಂಟಾಗಿ ವೆಂಟಿಲೇಟರ್ ನೆರವಿನಲ್ಲಿದ್ದರು.
ಆಸ್ಪತ್ರೆಗೆ ದಾಖಲಾಗಿ ಕೆಲ ದಿನಗಳು ಕಳೆದ ನಂತರ ಹೊಸ ವೈರಾಣು ಸೋಂಕು ಅವರ ದೇಹದಲ್ಲಿ ಕಾಣಿಸಿಕೊಂಡು ಆರೋಗ್ಯ ತೀವ್ರ ಹದಗೆಟ್ಟು ಹೋಗಿತ್ತು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ನಿಕಟವರ್ತಿಯಾಗಿದ್ದ ರಾಜೀವ್ ಸತಾವ್, ರಾಷ್ಟ್ರೀಯ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷರೂ ಆಗಿದ್ದರು.