ಕೊಡಗಿ(KODAGU ) ನಲ್ಲಿ ಪದೇ ಪದೇ ಭೂಮಿ ಕಂಪಿಸುತ್ತಿರುವುದು ಬೆಳಕಿಗೆ ಬಂದಿದೆ. ಕೊಡಗಿನ ಗಡಿಯಲ್ಲಿ ಗುರುವಾರ ಮಧ್ಯರಾತ್ರಿ ಮತ್ತೆ 2 ಬಾರಿ ಭೂಮಿ ಕಂಪಿಸಿದೆ.
ಕಳೆದ ರಾತ್ರಿ 1 ಗಂಟೆಯಿಂದ 1.40 ಗಂಟೆ ಅವಧಿಯಲ್ಲಿ ಸಂಪಾಜೆ, ಪೆರಾಜೆ, ಗೂನಡ್ಕ, ಕರಿಕೆ ವ್ಯಾಪ್ತಿಯಲ್ಲಿ ಎರಡು ಬಾರಿ ಭೂಕಂಪನವಾಗಿದೆ. ಗ್ರಾಮದಲ್ಲಿ ದೊಡ್ಡ ಶಬ್ಧ ಎರಡು ಬಾರಿಯೂ ಕೇಳಿ ಬಂದಿದ್ದು ಜನ ಆತಂಕಕ್ಕೆ ಒಳಗಾಗಿದ್ದಾರೆ. ಗುರುವಾರ ಸಂಪಾಜೆಯಲ್ಲಿ ರಿಕ್ಟರ್ ಮಾಪನ ಅಳವಡಿಸಲಾಗಿದ್ದು ಭೂಕಂಪನದ ಪ್ರಮಾಣ ಸ್ಪಷ್ಟವಾಗಿ ಇನ್ನಷ್ಟೇ ತಿಳಿಯಬೇಕಾಗಿದೆ.
ಇದನ್ನೂ ಓದಿ :- ಡಿ.ಕೆ.ಶಿವಕುಮಾರ್ ಗೆ ಮತ್ತೆ ED ಕಂಟಕ