ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (DK Shivakumar) ವಿರುದ್ಧ ದಾಖಲಾಗಿರುವ ಅಕ್ರಮ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ದೆಹಲಿಯ ಜಾರಿ ನಿರ್ದೇಶನಾಲಯ ( ED) ಕೋರ್ಟ್ ವಿಚಾರಣೆಯನ್ನು ಸೆಪ್ಟೆಂಬರ್ 27ಕ್ಕೆ ಮುಂದೂಡಿದೆ.
ಪ್ರಕರಣ ಸಂಬಂಧ ದಾಖಲೆ ನೀಡುವಂತೆ ಆರೋಪಿಗಳಾದ ಸಚಿನ್ ನಾರಾಯಣ್, ಸುನಿಲ್ ಶರ್ಮಾ, ರಾಜೇಂದ್ರ ಕೋರಿದ್ದರು. ಜಾರ್ಜ್ಶೀಟ್ ಜೊತೆಗೆ ಇಡಿ ಕೋರ್ಟ್ಗೆ ಸಲ್ಲಿಸಿರುವ ಎಲ್ಲ ದಾಖಲೆಗಳ ಒದಗಿಸಬೇಕೆಂದು ಮನವಿ ಸಲ್ಲಿಸಿದ್ದರು. ದಾಖಲೆ ನೀಡಲು ಇಡಿ ಪರ ವಕೀಲರು ನಾಲ್ಕೈದು ವಾರ ಸಮಯ ಬೇಕು ಎಂದು ಕೋರಿದ್ದರು. ಇದಕ್ಕೆ ನ್ಯಾಯಾಲಯವು ಸಮ್ಮತಿ ಸೂಚಿಸಿದೆ. ವಿಚಾರಣೆ ಬಳಿಕ ಮಾತನಾಡಿದ ಡಿ.ಕೆ.ಶಿವಕುಮಾರ್ ( d.k shivkumar ) ‘ಇಡಿ ಅಧಿಕಾರಿಗಳು ಮುಂದಿನ ತಿಂಗಳು ದಾಖಲೆ ನೀಡುವುದಾಗಿ ಹೇಳಿದ್ದಾರೆ. ದಾಖಲೆ ನೀಡಿದ ಬಳಿಕ ನಾನು ಮಾತನಾಡುತ್ತೇನೆ. ಸಮಯ ಸಿಕ್ಕರೆ ಪಕ್ಷದ ವರಿಷ್ಠರನ್ನು ಭೇಟಿಯಾಗುತ್ತೇನೆ. ನಮ್ಮ ಕೆಲ ವಕೀಲರನ್ನೂ ಭೇಟಿಯಾಗಬೇಕಿದೆ’ ಎಂದು ಹೇಳಿದ್ರು.
ಇದನ್ನೂ ಓದಿ : – ಮಹಾರಾಷ್ಟ್ರದಲ್ಲಿ ಗೂಡ್ಸ್ ರೈಲು- ಪ್ಯಾಸೆಂಜರ್ ರೈಲಿನ ನಡುವೆ ಡಿಕ್ಕಿ – 50 ಪ್ರಯಾಣಿಕರಿಗೆ ಗಾಯ