ನ್ಯಾಷನಲ್ ಹೆರಾಲ್ಡ್ (NATIONAL HEARALD) ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ರಾಹುಲ್ ಗಾಂಧಿ (RAHUL GANDHI) ಯನ್ನ 5 ದಿನಗಳ ಕಾಲ ವಿಚಾರಣೆ ನಡೆಸಿದೆ.
ಈ ಕುರಿತು ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ ಇಡಿ ಅಂತಹ ಸಂಸ್ಥೆಗಳು ನನ್ನ ಮೇಲೆ ಪರಿಣಾಮ ಬೀರುವುದಿಲ್ಲ, ನನ್ನನ್ನು ವಿಚಾರಣೆ ನಡೆಸಿದ ಅಧಿಕಾರಿಗಳು ಸಹ ಕಾಂಗ್ರೆಸ್ (Congress) ಪಕ್ಷದ ನಾಯಕನನ್ನು ಹೆದರಿಸಲು ಮತ್ತು ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಅರ್ಥಮಾಡಿಕೊಂಡಿದ್ದಾರೆ ಎಂದು ಪಕ್ಷದ ಕಾರ್ಯಕರ್ತರೊಂದಿಗೆ ಸಂವಾದದಲ್ಲಿ ಹೇಳಿದರು.
“ನನ್ನನ್ನು ವಿಚಾರಣೆಗೆ ಒಳಪಡಿಸಿದ ಅಧಿಕಾರಿಗಳು, ಯಾವುದೇ ಕಾಂಗ್ರೆಸ್ ನಾಯಕರನ್ನು ಬೆದರಿಸಲು ಅಥವಾ ದಬ್ಬಾಳಿಕೆ ಮಾಡಲು ಸಾಧ್ಯವಿಲ್ಲ ಎಂಬುದನ್ನು ಕೂಡ ಅರ್ಥ ಮಾಡಿಕೊಂಡಿದ್ದಾರೆ. ಏಕೆಂದರೆ ನಾವು ಸತ್ಯದ ಪರ ನಿಂತಿರುತ್ತೇವೆ” ಎಂದು ಹೇಳಿದ್ದಾರೆ. ಐದು ದಿನಗಳ ವಿಚಾರಣೆ ಅಂತ್ಯದಲ್ಲಿ ಇಡಿ ಅಧಿಕಾರಿಗಳು ತಮ್ಮ ಸಂಯಮವನ್ನು ಪ್ರಶಂಸಿಸಿದ್ದಾರೆ ಎಂದು ರಾಹುಲ್ ಹೇಳಿಕೊಂಡಿದ್ದಾರೆ. ಜಾರಿ ನಿರ್ದೇಶನಾಲಯದ ಸುದೀರ್ಘ ವಿಚಾರಣೆಯನ್ನು ಎದುರಿಸಲು ನನಗೆ ಬಹಳ ಕಷ್ಟವಾಗಿರಬಹುದು ಎಂದು ನೀವೆಲ್ಲರೂ ಆಲೋಚನೆ ಮಾಡುತ್ತಿರಬಹುದು. ಇದನ್ನೂ ಓದಿ : – ED ವಿಚಾರಣೆಗೆ ಹೆಚ್ಚಿನ ಸಮಯಾವಕಾಶ ಕೇಳಿದ ಸೋನಿಯಾ ಗಾಂಧಿ
ಆದರೆ ಅದು ಸ್ವಲ್ಪವೂ ಕಷ್ಟವಾಗಿರಲಿಲ್ಲ. ಏಕೆಂದರೆ ನಾನು ಒಬ್ಬನೇ ಕುರ್ಚಿಯಲ್ಲಿ ಕುಳಿತಿರಲಿಲ್ಲ. ನನ್ನ ಜತೆ ಆ ಕೊಠಡಿಯಲ್ಲಿ ಕಾಂಗ್ರೆಸ್ನ ಪ್ರತಿ ನಾಯಕ, ಪ್ರತಿ ಕಾರ್ಯಕರ್ತ, ಈ ಸರ್ಕಾರದ ವಿರುದ್ಧ ಭಯವಿಲ್ಲದೆ ಹೋರಾಡಿದ ಪ್ರತಿ ವ್ಯಕ್ತಿ, ಪ್ರಜಾಪ್ರಭುತ್ವಕ್ಕಾಗಿ ಹೋರಾಡುವ ಪ್ರತಿಯೊಬ್ಬರೂ ಇದ್ದರು” ಎಂದು ಹೇಳಿದ್ದಾರೆ. ಇದನ್ನೂ ಓದಿ : – ಚಿಕ್ಕಬಳ್ಳಾಪುರದಲ್ಲಿ ಸಚಿವ ಸುಧಾಕರ್ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ