ಪತ್ರಚಾಲ್ (PATHRACHAL) ಭೂ ಹಗರಣಕ್ಕೆ ಸಂಬಂಧಿಸಿದಂತೆ ಶಿವಸೇನೆ ನಾಯಕ ಸಂಜಯ್ ರಾವತ್ (SANJAY RAWAT) ಗೆ ಸಂಕಷ್ಟ ಎದುರಾಗಿದೆ. ಜಾರಿ ನಿರ್ದೇಶನಾಲಯ (ED) ಸಂಜಯ್ ರಾವತ್ ಗೆ ಸಮನ್ಸ್ ನೀಡಿದೆ.
ಒಂದೆಡೆ ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು ತಲೆದೋರಿದೆ. ಬಂಡಾಯ ಶಾಸಕರ ವಿರುದ್ಧ ಸಂಜಯ್ ರಾವತ್ ಸೆಟೆದು ನಿಂತಿದ್ದಾರೆ. ಈ ನಡುವೆ ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿದೆ.
ಇದು ಕೇಂದ್ರದ ರಾಜಕೀಯ ಸೇಡು ಎಂದೇ ವಿಶ್ಲೇಷಿಸಲಾಗುತ್ತಿದೆ.
ಮುಂಬೈನ ಕೋರೇಂಗಾವ್ ನಲ್ಲಿ ಪತ್ರಾ ಬಡಾವಣೆ ಅಭಿವೃದ್ಧಿಯಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ರಾವತ್ಗೆ ಸಮನ್ಸ್ ಜಾರಿ ಮಾಡಿರುವ ಇಡಿ, ನಾಳೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. 47 ಎಕರೆ ಜಾಗಕ್ಕೆ ಸಂಬಂಧಿಸಿದಂತೆ ಉದ್ಯಮಿ ಪ್ರವೀಣ್ ಜತೆ ಅಕ್ರಮದಲ್ಲಿ ಭಾಗಿಯಾಗಿರುವ ಆರೋಪ ಸಂಜಯ್ ರಾವತ್ ಮೇಲಿದ್ದು, 1,034 ಕೋಟಿ ರೂ. ಅವ್ಯವಹಾರ ನಡೆದಿರುವ ಶಂಕೆ ವ್ಯಕ್ತವಾಗಿದೆ. ED ಸಮನ್ಸ್ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ರಾವತ್ , ಕೇಂದ್ರೀಯ ಸಂಸ್ಥೆ ಸಮನ್ಸ್ ಜಾರಿ ಮಾಡಿರುವುದಕ್ಕೆ ನನಗೇನು ಭಯವಿಲ್ಲ. ನಾನೊಬ್ಬ ನಿಜವಾದ ಶಿವ ಸೈನಿಕ, ಯಾವುದೇ ಸಂಕಷ್ಟ ಬರಲಿ ನನ್ನ ಹೋರಾಟವನ್ನು ಮುಂದುವರೆಸುತ್ತೇನೆಂದು ಹೇಳಿದ್ದಾರೆ.
ಇದನ್ನೂ ಓದಿ : – ಮಹಾರಾಷ್ಟ್ರ ಬಿಕ್ಕಟ್ಟು- ಏಕನಾಥ್ ಶಿಂಧೆ ಟೀಂನ ಅನರ್ಹತೆ ನೊಟೀಸ್- ಇಂದು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ವಿಚಾರಣೆ