ಕಾಂಗ್ರೆಸ್ (Congress) ಐಕ್ಯತಾ ನಡಿಗೆ ಯಾತ್ರೆಗೆ ಪರ್ಯಾಯವಾಗಿ ಬಿಜೆಪಿ (BJP) 140 ಕ್ಷೇತ್ರಗಳಲ್ಲಿ ಏಳು ಬೃಹತ್ ಸಮಾವೇಶ ಆಯೋಜಿಸಿದೆ. ಎರಡು ತಂಡಗಳಾಗಿ ರಾಜ್ಯ ಪ್ರವಾಸಕ್ಕೆ ಬಿಜೆಪಿ ತಯಾರಿ ನಡೆಸಿದೆ. ಒಂದು ತಂಡದಲ್ಲಿ ಸಿಎಂ ಬೊಮ್ಮಾಯಿ (Bommai) ಹಾಗೂ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ (BS.Yediyurappa) ಇರಲಿದ್ದು 90 ಕ್ಷೇತ್ರಗಳಲ್ಲಿ ಈ ತಂಡ ಪ್ರವಾಸ ಮಾಡಲಿದೆ.
ಅಕ್ಟೊಬರ್ 11 ರಿಂದ ಮಾಜಿ,ಹಾಲಿ ಸಿಎಂ ರಾಜ್ಯ ಪ್ರವಾಸಕೈಗೊಳ್ಳಲಿದ್ದಾರೆ. ವಾರಕ್ಕೆ ಮೂರು ದಿನಗಳ ಕಾಲ ಮಾಜಿ, ಹಾಲಿ ಸಿಎಂ ರಾಜ್ಯ ಪ್ರವಾಸ ಕೈಗೊಳ್ಳಲಿದ್ದು ಮಠ ಹಾಗೂ ಮಂದಿರಗಳಿಗೆ ಭೇಟಿ ನೀಡಲಿದ್ದಾರೆ. ಕೇಂದ್ರ, ರಾಜ್ಯ ಸರ್ಕಾರ ಯೋಜನೆಗಳ ಫಲಾನುಭವಿಗಳ ಸಮಾವೇಶವೂ ನಡೆಯಲಿದೆ. ಎರಡನೇ ತಂಡದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin kumar kateel) ಹಾಗೂ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಇರಲಿದ್ದಾರೆ. ಇವರಿಬ್ಬರ ತಂಡವೂ 50 ಕ್ಷೇತ್ರಗಳಲ್ಲಿ ಪ್ರವಾಸ ಕೈಗೊಳ್ಳಲಿದೆ. ಡಿಸೆಂಬರ್ 30 ರೊಳಗೆ ಕ್ಷೇತ್ರ ಪ್ರವಾಸ ಮುಕ್ತಾಯಗೊಳಿಸಲು ಬಿಜೆಪಿ ನಿರ್ಧರಿಸಿದೆ. ಚುನಾವಣಾ ದೃಷ್ಟಿಯಿಂದ ರಾಜ್ಯದಲ್ಲಿ ಏಳು ಕಡೆ ಬೃಹತ್ ಸಮಾವೇಶ ನಡೆಯಲಿದೆ. ಇದನ್ನೂ ಓದಿ :- ಭಾರತ್ ಜೋಡೋ ಯಾತ್ರೆ- ಸೋನಿಯಾ ಶೂ ಲೇಸ್ ಕಟ್ಟಿದ ರಾಹುಲ್ ಗಾಂಧಿ
ಮೈಸೂರಿನಲ್ಲಿ ಎಸ್ ಸಿ ಸಮಾವೇಶ ಕಲಬುರಗಿಯಲ್ಲಿ ಒಬಿಸಿ ಸಮಾವೇಶ, ಹುಬ್ಬಳ್ಳಿಯಲ್ಲಿ ರೈತ ಸಮಾವೇಶ, ಬಳ್ಳಾರಿಯಲ್ಲಿ ಎಸ್. ಟಿ ಸಮಾವೇಶ, ಮಂಗಳೂರಿನಲ್ಲಿ ಯುವ ಸಮಾವೇಶ, ಬೆಂಗಳೂರಿನಲ್ಲಿ ಮಹಿಳಾ ಸಮಾವೇಶ ನಡೆಯಲಿದೆ.
ಇದನ್ನೂ ಓದಿ :- THAILAND- ಮಕ್ಕಳ ಡೇ-ಕೇರ್ ಸೆಂಟರ್‌ನಲ್ಲಿ ಗುಂಡಿನ ದಾಳಿ- 30 ಮಂದಿ ದಾರುಣ ಸಾವು