ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿರುವ ರಮೇಶ್ ಜಾರಕಿಹೊಳಿ (Ramesh jarakiholi) ಸಚಿವ ಸ್ಥಾನದ ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ. ‘ಚುನಾವಣೆ (Election) ಸಂದರ್ಭದಲ್ಲಿ ಸಚಿವ ಸ್ಥಾನ ಬೇಡ ಎಂದು ನಾನೇ ಹೇಳಿದ್ದೇನೆ. ಮುಂದೆ 2023ಕ್ಕೆ ಮತ್ತೆ ಆಗೋಣ, ಇನ್ನೆಷ್ಟು ಮೂರು ತಿಂಗಳು ಮಾತ್ರ ಇದೆ. ಮೂರು ತಿಂಗಳಲ್ಲಿ ಸಚಿವ ಸ್ಥಾನ ನೀಡೋದರಲ್ಲಿ ಅರ್ಥ ಇಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಯಡಿಯೂರಪ್ಪ (Yediyurappa) ನೇತೃತ್ವದಲ್ಲಿ ಟಿಕೆಟ್ ನೀಡಬೇಕು ಎಂದು ಶಾಸಕರು ಪತ್ರ ಬರೆದ ವಿಚಾರ ನನಗೆ ಗೊತ್ತಿಲ್ಲ. ನಮ್ಮಲ್ಲಿ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಮಾಡ್ತೇವೆ ಎಂದರು. ‘ನೂರು ಸಿಡಿ ಬಂದ್ರೂ ಹೆದರೊಲ್ಲ, ನಾನೊಬ್ಬನೇ ಅವನನ್ನು ಎದುರಿಸೋನು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆಶಿಗೆ ತಿರುಗೇಟು ನೀಡಿದ್ರು. ನೂರು ಸಿಡಿ ಬಂದ್ರೂ ನಾನು ಹೆದರೊಲ್ಲ.. ನಾನೊಬ್ಬನೇ ಅವನನ್ನು ಎದುರಿಸೋನು.. ಮಹಾ ನಾಯಕನ ಎಲ್ಲ ಕುತಂತ್ರ ಬಗ್ಗೆ ಸಿಬಿಐ (CBI) ತನಿಖೆಗೆ ನೀಡಬೇಕು ಎಂದು ಆಗ್ರಹಿಸಿದರು. ಇದನ್ನು ಓದಿ :- ರಾಜ್ಯದ 20 ಪೊಲೀಸ್ ಸಿಬ್ಬಂದಿಗೆ ರಾಷ್ಟ್ರಪತಿ ಗೌರವ – ಎಡಿಜಿಪಿ ಸಿಐಡಿ ಕೆ ವಿ ಶರತ್ ಚಂದ್ರಗೆ ವಿಶಿಷ್ಟ ಸೇವಾ ಪದಕ
ಈ ಬಗ್ಗೆ ಸಿಎಂಗೆ ಮನವಿ ಮಾಡಿದ್ದು ಕೇಂದ್ರ ಗೃಹಸಚಿವರಿಗೂ ಮನವಿ ಮಾಡ್ತೇನೆ.. ಡಿಕೆಶಿ (DK.Shivakumar) ಗೆ ನನ್ನ ಹೆದರಿಕೆ ಇದೆ. ನಾನು ಒಬ್ಬನೇ ಅವನನ್ನು ಎದುರಿಸೋನು. ಇಂತಹ ನೂರು ಸಿಡಿ ಬಂದ್ರೂ ನಾನು ಹೆದರಲ್ಲ ಎಂದು ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದರು. ನನ್ನ ಹಾಗೆ ಬೇರೆಯವರು ಸಫರ್ ಆಗಬಾರದು ಎಂದು ಹೇಳಿದ್ರು.
ಇದನ್ನು ಓದಿ :- ಸಿದ್ದರಾಮಯ್ಯಗೆ ವಿರೋಧ ಪಕ್ಷದ ಸ್ಥಾನ ಸಿಕ್ಕಿದ್ದೇ ನಮ್ಮಿಂದ – ಬಿಸಿ ಪಾಟೀಲ್