ವಿಜಯನಗರ (Vijayanagara) ದಲ್ಲಿ ಆಜಾದಿ ಕಾ ಅಮೃತ ಮಹೋತ್ಸವ (Azadi ka amrutha mohotsava) ಹಿನ್ನೆಲೆಯಲ್ಲಿ , ಐತಿಹಾಸಿಕ ಹಂಪಿ ಸ್ಮಾರಕಗಳಿಗೆ ವಿದ್ಯುತ್ ದೀಪಾಲಂಕಾರ ಮಾಡಿದ್ದಾರೆ.
ವಿಜಯ ವಿಠ್ಠಲ ದೇಗುಲ (Vijayavittala temple) ದ ಬಳಿ ಇರೋ ಕಲ್ಲಿನ ತೇರು, ಸಪ್ತ ಸ್ವರ ಮಂಟಪ ಸೇರಿದಂತೆ ನಾನಾ ಸ್ಮಾರಕಗಳಿಗೆ ವಿದ್ಯುತ್ ದೀಪಾಲಂಕಾರ ಮಾಡಿದ್ದಾರೆ. ದಕ್ಷಿಣ ಕಾಶಿ ಹಂಪಿಯ ನಾನಾ ಸ್ಮಾರಕಗಳು ತ್ರಿವರ್ಣ ಬಣ್ಣಗಳ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿವೆ.
ಇದೇ ವೇಳೆ ವಿಜಯನಗರದ ಹೊಸಪೇಟೆಯಲ್ಲಿ 405 ಅಡಿ ಎತ್ತರದ ಧ್ವಜ ಸ್ಥಂಬ (Flag pole) ಸ್ಥಾಪನೆ ಮಾಡಲಾಗಿದೆ. ಹೊಸಪೇಟೆಯ ಪುನೀತ್ ರಾಜ್ ಕುಮಾರ್ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ನಡಿದಿದೆ. ಪೂಜೆ ಸಲ್ಲಿಸಿ, ಧ್ವಜ ಸ್ಥಂಬ ಪ್ರತಿಷ್ಠಾಪನೆಗೆ ಚಾಲನೆ ನೀಡಿದ್ದಾರೆ. ನಾನಾ ಇಲಾಖೆಯ ಅಧಿಕಾರಿಗಳು ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. 405 ಅಡಿ ಎತ್ತರದ ಮೊದಲ 40 ಅಡಿಯ ಒಂದು ಫೇಸ್ ಸದ್ಯ ಪ್ರತಿಷ್ಠಾಪನೆ ಮಾಡಲಾಗಿದೆ.
ಇದನ್ನು ಓದಿ : – ರಾಜ್ಯಾದ್ಯಂತ ಬಾರಿ ಮಳೆಗೆ ಜನ ಜೀವನ ಅಸ್ತ ವ್ಯಸ್ತ- ಅಪಾಯ ಮಟ್ಟ ಮೀರಿದ ತುಂಗಭದ್ರಾ ಜಲಾಶಯ