ಪುರುಷರಂತೆ ಮಹಿಳಾ ಆಟಗಾರ್ತಿಯರಿಗೂ ಸಮಾನ ವೇತನ, ಮಹತ್ವದ ನಿರ್ಧಾರ ಪ್ರಕಟಿಸಿದ ಬಿಸಿಸಿಐ!

ಭಾರತ ಪುರುಷರ ಕ್ರಿಕೆಟ್ ತಂಡ (Indina men's cricket team) ಪಡೆಯುವ ಪಂದ್ಯದ ಸಂಭಾವನೆಯಷ್ಟೆ ಇನ್ನು ಮುಂದೆ ಮಹಿಳಾ ಆಟಗಾರ್ತಿ (Women criketer's ) ಯರು ಕೂಡ ವೇತನವನ್ನು ಪಡೆದುಕೊಳ್ಳಲಿದ್ದಾರೆಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಐತಿಹಾಸಿಕ ನಿರ್ಧಾರವನ್ನು ಪ್ರಕಟಿಸಿದೆ.

ಭಾರತ ಪುರುಷರ ಕ್ರಿಕೆಟ್ ತಂಡ (Indina men’s cricket team) ಪಡೆಯುವ ಪಂದ್ಯದ ಸಂಭಾವನೆಯಷ್ಟೆ ಇನ್ನು ಮುಂದೆ ಮಹಿಳಾ ಆಟಗಾರ್ತಿ (Women criketer’s ) ಯರು ಕೂಡ ವೇತನವನ್ನು ಪಡೆದುಕೊಳ್ಳಲಿದ್ದಾರೆಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಐತಿಹಾಸಿಕ ನಿರ್ಧಾರವನ್ನು ಪ್ರಕಟಿಸಿದೆ. ಆ ಮೂಲಕ ಮಂಡಳಿಯಲ್ಲಿದ್ದ ಲಿಂಗಾಧಾರಿತ ವೇತನ ತಾರತಮ್ಯವನ್ನು ಅಂತ್ಯಗೊಳಿಸಲಾಗಿದೆ.

ಟ್ವಿಟರ್ ಸೇರಿದಂತೆ ತಮ್ಮ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಬಿಸಿಸಿಐ ಕಾರ್ಯದರ್ಶಿ ಜಯ ಶಾ ( Jay shah) ಅವರು ಈ ಮಹತ್ವದ ನಿರ್ಧಾರವನ್ನು ಪ್ರಕಟಿಸಿದ್ದಾರೆ. “ತಾರತಮ್ಯವನ್ನು ಹೊಗಲಾಡಿಸಲು ಬಿಸಿಸಿಐ ಮುಂದಾಗಿದೆ ಎಂದು ಪ್ರಕಟಿಸಲು ನನಗೆ ತುಂಬಾ ಸಂತೋಷವಾಗುತ್ತಿದೆ.

ಬಿಸಿಸಿಐ ಮಹಿಳಾ ಆಟಗಾರ್ತಿಯರಿಗೆ ಸಮಾನ ವೇತನ ನೀತಿಯನ್ನು ನಾವು ಜಾರಿಗೆ ತಂದಿದ್ದೇವೆ. ಲಿಂಗಾಧಾರಿತ ವೇತನ ಅಸಮಾನತೆಯನ್ನು ನಿವಾರಿಸುವ ನಿಟ್ಟಿನಲ್ಲಿ ಪುರುಷರಿಗೆ ನೀಡುವಷ್ಟೇ ಪಂದ್ಯದ ಸಂಭಾವನೆಯನ್ನು ಮಹಿಳಾ ಆಟಗಾರ್ತಿಯರಿಗೆ ನೀಡುತ್ತೇವೆ,” ಎಂದು ಬಿಸಿಸಿಐ ಕಾರ್ಯದರ್ಶಿ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ : – ಪಾಕ್ ವಿರುದ್ಧ ಗೆಲುವಿನ ಬಳಿಕ ಅನುಷ್ಕಾಗೆ ಕೃತಜ್ಞತೆ ಸಲ್ಲಿಸಿದ ವಿರಾಟ್ ಕೊಹ್ಲಿ

ಟೆಸ್ಟ್ ಪಂದ್ಯಕ್ಕೆ 15 ಲಕ್ಷ ರೂ. , ಏಕದಿನ ಪಂದ್ಯಕ್ಕೆ 6 ಲಕ್ಷ ರೂ ಹಾಗೂ ಟಿ20ಐ ಪಂದ್ಯಕ್ಕೆ 3 ಲಕ್ಷ ರೂ. ಸಮಾನ ವೇತನವನ್ನು ಭಾರತ ಮಹಿಳಾ ತಂಡದ ಆಟಗಾರ್ತಿಯರು ಪಡೆದುಕೊಳ್ಳಲಿದ್ದಾರೆ.

ಇದನ್ನೂ ಓದಿ : – ವಿಶ್ವಕಪ್ ನಲ್ಲಿರೋ ಆಟಗಾರರಿಗೆ ಸರಿಯಾಗಿ ಊಟ ಸಿಗ್ತಿಲ್ಲ – ಟೀಂ ಇಂಡಿಯಾ ಬೇಸರ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!