ಸಿದ್ದರಾಮೋತ್ಸವ ಕಾರ್ಯಕ್ರಮಕ್ಕೂ ಮೊದಲೇ ಡಿ. ಕೆ. ಶಿವಕುಮಾರ್ ಭಾಷಣ ಲೀಕ್..!

ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅವರ 75 ನೇ ಜನ್ಮ ದಿನೋತ್ಸವದ (Birthday) ಹಿನ್ನೆಲೆಯಲ್ಲಿ ಆಗಸ್ಟ್ 3 ರಂದು ನಡೆಯಲಿರುವ ಸಿದ್ದರಾಮೋತ್ಸವ (Siddaramotsava) ಕಾರ್ಯಕ್ರಮಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ (DK.Shivkumar) ಮಾಡಬೇಕಿದ್ದ ಭಾಷಣದ ಪ್ರಮುಖ ಅಂಶಗಳು ಕಾರ್ಯಕ್ರಮಕ್ಕೆ ಎರಡು ದಿನ ಇರುವಾಗಲೇ ಲೀಕ್ ಆಗಿದೆ.

ಕಾಂಗ್ರೆಸ್ (congress) ಅಧಿಕೃತ ಮಾಧ್ಯಮ ಗ್ರೂಪ್ಗೆ ಭಾಷಣದ ಪ್ರತಿಯನ್ನು ಹಾಕಲಾಗಿತ್ತು. ಬಳಿಕ ಎಚ್ಚೆತ್ತುಕೊಂಡು ಡಿಲೀಟ್ ಮಾಡಲಾಗಿದೆ. ಭಾಷಣದ ಪ್ರತಿಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ನಾವು ಏನು ಕೆಲಸ ಮಾಡಬೇಕೋ ಅದನ್ನು ಮಾಡೋಣ, ನಾವು ಯಾವ ಸ್ಥಾನಮಾನಕ್ಕೆ ಅರ್ಹರೋ ಅದನ್ನು ಪಕ್ಷ ನೀಡುತ್ತದೆ ಎಂದು ಉಲ್ಲೇಖ ಮಾಡಿರುವುದು ಪರೋಕ್ಷವಾಗಿ ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡಿದಂತಿದೆ.
ಸಿದ್ದರಾಮಯ್ಯ ಅವರು ಇಂದು ಸಾರ್ಥಕ 75 ವರ್ಷ ಪೂರ್ಣಗೊಳಿಸಿದ್ದಾರೆ. ಅವರಿಗೆ ಜನ್ಮ ದಿನದ ಶುಭಾಶಯಗಳು.

75 ವರ್ಷ ಪ್ರತಿಯೊಬ್ಬ ವ್ಯಕ್ತಿಗೂ ಒಂದು ಮಹತ್ತರ ಘಟ್ಟ. ಇದುವರೆಗೂ ಸಿದ್ದರಾಮಯ್ಯ ಅವರು ಜನ್ಮ ದಿನ ಆಚರಣೆ ಮಾಡಿಕೊಂಡಿರಲಿಲ್ಲ. ಆದರೆ 75 ವಸಂತಗಳನ್ನು ಪೂರೈಸಿರುವ ಈ ಸಂದರ್ಭದಲ್ಲಿ ಆಚರಿಸಿಕೊಳ್ಳಲೇಬೇಕಾದ ವಿಶೇಷ ಸಂದರ್ಭ ಹೀಗಾಗಿ ಈ ವಿಶೇಷ ಘಟ್ಟವನ್ನು ಸಂಭ್ರಮಿಸಲು ಅವರ ಅಭಿಮಾನಿಗಳು ಕಾರ್ಯಕ್ರಮ ಆಯೋಜಿಸಿ ಉತ್ತಮ ಕೆಲಸ ಮಾಡಿದ್ದಾರೆ. ಈ ಕಾರ್ಯಕ್ರಮ ಕಂಡು ಬಿಜೆಪಿ ಮತ್ತಿತರ ರಾಜಕೀಯ ವಿರೋಧಿಗಳ ಎದೆಯಲ್ಲಿ ನಡುಕ ಶುರುವಾಗಿದೆ. ಯಾಕೆಂದರೆ ಅವರಿಗೆ ಹೇಳಿಕೊಳ್ಳಲು ಸಾಧನೆಗಳಿಲ್ಲ. ಈ ಕಾರಣಕ್ಕೆ ಈ ಕಾರ್ಯಕ್ರಮ ಕುರಿತು ಅಪಪ್ರಚಾರ ಮಾಡಿದವು. ಜನರ ಗಮನವನ್ನು ಬೇರೆಡೆ ಸೆಳೆಯಲು ವಿಫಲ ಪ್ರಯತ್ನ ಮಾಡಿದವು.  ಇದನ್ನು ಓದಿ :-  ಕೊಪ್ಪಳದ ಅಂಜನಾದ್ರಿಯೇ ಹನುಮನ ಜನ್ಮಸ್ಥಳ- ಸಿಎಂ ಬೊಮ್ಮಾಯಿ

ಅವರ ಎಲ್ಲ ವಾದಗಳು ಸುಳ್ಳು ಎಂಬುದನ್ನು ಈ ವೇದಿಕೆ ಸಾಬೀತುಪಡಿಸುತ್ತದೆ.

ಈ ವೇದಿಕೆ ಮೇಲಿರುವ ಕಾಂಗ್ರೆಸ್ ಮುಖಂಡರು ಜನ ವಿರೋಧಿ ಬಿಜೆಪಿ ಸರಕಾರದ ಪಾಲಿಗೆ ಬ್ರಹ್ಮಾಸ್ತ್ರಗಳು
ಈಗ ದೇಶ ಹಾಗೂ ರಾಜ್ಯ ಸಂಕಷ್ಟ ಸಮಯದಲ್ಲಿದೆ.
ಈ ಸಮಯದಲ್ಲಿ ನಾವು ತ್ಯಾಗಕ್ಕೆ ಸಿದ್ಧವಾಗಿ ಪಕ್ಷ ಸಂಘಟಿಸಬೇಕು.
ಇಂದಿರಾ ಗಾಂಧಿ ಅವರು ಮತ್ತೊಂದು ಮಾತು ಹೇಳಿದ್ದಾರೆ.
There are two kinds of people. Those who do the work and those who take the credit. Try to be in the first group.

ಅಂದರೆ, ಸಾಮಾನ್ಯವಾಗಿ ಎರಡು ರೀತಿ ಜನ ಇರುತ್ತಾರೆ. ಒಂದು ಕೆಲಸ ಮಾಡುವವರು, ಮತ್ತೊಂದು ಕೆಲಸಕ್ಕೆ ಕ್ರೆಡಿಟ್ ತೆಗೆದುಕೊಳ್ಳುವವರು. ನೀವು ಮೊದಲ ಗುಂಪಿಗೆ ಸೇರಿ. ಪಕ್ಷವನ್ನು ಅಧಿಕಾರಕ್ಕೆ ತರಲು ನಾವು ಏನು ಕೆಲಸ ಮಾಡಬೇಕೋ ಅದನ್ನು ಮಾಡೋಣ. ನಾವು ಯಾವ ಸ್ಥಾನಮಾನಕ್ಕೆ ಅರ್ಹರೋ ಅದನ್ನು ಪಕ್ಷ ನೀಡುತ್ತದೆ. ನಾವೆಲ್ಲರೂ ಮೊದಲು ಪಕ್ಷವನ್ನು ಅಧಿಕಾರಕ್ಕೆ ತರೋಣ. ಆ ಮೂಲಕ ಪಕ್ಷ ಹಾಗೂ ರಾಜ್ಯದ ಜನರ ಋಣ ತೀರಿಸೋಣ ಎಂಬುದು ಭಾಷಣದ ಪ್ರತಿಯಲ್ಲಿದೆ.

 ಇದನ್ನು ಓದಿ :- ಜೆಡಿಎಸ್ ಕಣ್ಣೀರಧಾರೆ ಯಶಸ್ವಿಯಾಗಲಿ ! – ಜೆಡಿಎಸ್ ದೋಣಿಯಲ್ಲಿ ಅಪ್ಪ, ಮಕ್ಕಳು, ಮೊಮ್ಮಕ್ಕಳಷ್ಟೇ ದಡ ಸೇರಬಹುದು – ಟ್ವೀಟ್ ಮೂಲಕ ಬಿಜೆಪಿ ವ್ಯಂಗ್ಯ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!