ಬಿಜೆಪಿಯವರಿಗೆ ಕರ್ನಾಟಕದ ಜನರ ಅಭಿವೃದ್ಧಿ ಬೇಕಾಗಿಲ್ಲ. ಬಿಜೆಪಿಯ ಮನಸ್ಸು ಮತ್ತು ಮನಸ್ಥಿತಿ ಜನರಿಗೆ ಅರ್ಥವಾಗಿದೆ ಎಂದು ಉಡುಪಿಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (SIDDARAMAIAH)ಹೇಳಿದರು.
ಪ್ರಧಾನಿ ಮೋದಿ (NARENDRA MODI) ಯನ್ನು ಹಿಟ್ಲರ್ಗೆ ಹೋಲಿಸಿದ ಅವರು, ಹಿಟ್ಲರ್, ಮುಸಲೋನಿ ಸ್ವಲ್ಪ ದಿನ ಮೆರೆದರು ಆಮೇಲೆ ಏನಾಯ್ತು? ಇಂತಹವರು ಸ್ಪಲ್ಪ ದಿನ ಮೆರೆಯುತ್ತಾರೆ ಆಮೇಲೆ ಇಳಿಯಲೇಬೇಕು ಎಂದರು. ಪ್ರದಾನಿ ಮೋದಿ ಕರ್ನಾಟಕಕ್ಕೆ ಬಂದು ಹೋಗಬಹುದು ಆದರೆ ಮತ್ತೆ ಅಧಿಕಾರಕ್ಕೆ ತರುತ್ತೇನೆ ಎಂದು ಬಂದರೆ ಅಸಾಧ್ಯ, ರಾಜ್ಯಕ್ಕೆ 100 ಬಾರಿ ಮೋದಿ ಬಂದರೂ ಬಿಜೆಪಿ ಅಧಿಕಾರಕ್ಕೆ ಬರಲ್ಲ. ಬಿಜೆಪಿ ಸರ್ಕಾರದ ಬಗ್ಗೆ ರಾಜ್ಯದ ಜನತೆಗೆ ಭ್ರಮನಿರಸನವಾಗಿದೆ ಎಂದು ತಿಳಿಸಿದ್ರು. ಇದನ್ನು ಓದಿ :- ಚಾಮರಾಜಪೇಟೆ ಮೈದಾನದಲ್ಲಿ ಗಣರಾಜ್ಯೋತ್ಸವ ಆಚರಣೆ ಮಾಡಲು ಸರ್ಕಾರದಿಂದ ಗ್ರೀನ್ ಸಿಗ್ನಲ್
ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿದ್ದಾಗ ಅಮಿತ್ ಶಾ (AMITH SHASH)ಎಷ್ಟು ಸಲ ಅಲ್ಲಿಗೆ ಹೋಗಿದ್ದರು. ಇಲ್ಲಿಗೂ ಅಷ್ಟೇ, ಅವರು ಅದೆಷ್ಟು ಸಲ ಬಂದರೂ ಏನೂ ಪ್ರಯೋಜನವಿಲ್ಲ. ‘ಆಪರೇಷನ್ ಓಲ್ಡ್ ಮೈಸೂರ್’ ಎಂದು ಅಮಿತ್ ಶಾ ಹೇಳಿದ ತಕ್ಷಣ ಆಗಿಬಿಡುತ್ತದೆಯೇ? ಅಲ್ಲಿ ಮಮತಾ ಬ್ಯಾನರ್ಜಿಯನ್ನು ಅಧಿಕಾರದಿಂದ ಕೆಳಗಿಳಿಸಲು ಅವರಿಗೆ ಸಾಧ್ಯವಾಗಲಿಲ್ಲ. ಇಲ್ಲಿ ಬಿಜೆಪಿ ಅಧಿಕಾರದಲ್ಲಿ ಉಳಿಸಲು ಅಗುವುದಿಲ್ಲ ಎಂದು ವ್ಯಂಗ್ಯವಾಡಿದ್ರು.
ಕೋಲಾರ (KOLARA) ಕ್ಷೇತ್ರದಿಂದ ಈ ಬಾರಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಮುಂದಾಗಿರುವ ಸಿದ್ದರಾಮಯ್ಯ ಮನೆ ಹುಡುಕುವ ಬಗ್ಗೆ ಎದ್ದಿರುವ ಗೊಂದಲಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದರು. ‘ಕೋಲಾರದಲ್ಲಿ ನಾನು ಮನೆ ಹುಡುಕುತ್ತಿಲ್ಲ. ನಮ್ಮ ಪಕ್ಷದವರು ಹುಡುಕುತ್ತಿದ್ದಾರೆ. ಮನೆ ಹುಡುಕುವ ಬಗ್ಗೆ ನನಗೆ ಗೊತ್ತೇ ಇಲ್ಲ’ ಎಂದು ಹೇಳಿದರು. ‘ಡಿ ಪಾರ್ಟಿ, ಎಸ್ ಪಾರ್ಟಿ’ ಕುರಿತು ಆರ್.ಅಶೋಕ್ ಮಾಡಿರುವ ಆರೋಪ ಕುರಿತು ಪ್ರತಿಕ್ರಿಯಿಸಿದ ಅವರು, ಇದೆಲ್ಲ ಸುಳ್ಳು ಮಾತುಗಳು. ಇದೆಲ್ಲ ಸುಳ್ಳು.. ಬರಿ ಸುಳ್ಳು ಎಂದರು. ಯತ್ನಾಳ್ ಮೇಲೆ ಬಿಜೆಪಿ ಯಾಕೆ ಕ್ರಮ ಕೈಗೊಂಡಿಲ್ಲ? ಬಿಜೆಪಿಯಲ್ಲಿ ಗುಂಪುಗಾರಿಕೆ ಇದೆಯೋ ಇಲ್ಲವೋ? ನಡ್ಡಾ ಕಾರ್ಯಕ್ರಮಕ್ಕೆ ಹೋಗಿಲ್ಲ ಯಾಕೆ? ಅಶೋಕ ಹೇಳಿಬಿಟ್ಟ ಕೂಡಲೆ ಗುಂಪುಗಾರಿಕೆ ಆಗಲು ಸಾಧ್ಯವೇ ಎಂದು ಪ್ರಶ್ನೆಗಳನ್ನು ಹರಿಬಿಟ್ಟರು. ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಕನಿಷ್ಠ 130, ಗರಿಷ್ಠ 150 ಸ್ಥಾನ ಗೆಲ್ಲುತ್ತೇವೆ. ಉಡುಪಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹತ್ತಕ್ಕಿಂತ ಹೆಚ್ಚು ಸೀಟು ಗೆಲ್ಲುತ್ತೇವೆ ಎಂದು ಹೇಳಿದ್ರು.
ಇದನ್ನು ಓದಿ :- ಸುಧಾಕರ್ ಒಬ್ಬ ಬ್ರಹ್ಮ ರಾಕ್ಷಸ ಅಮಿತ್ ಶಾ ಇನ್ನು ದೊಡ್ಡ ರಾಕ್ಷಸ – ಎಲುವಳ್ಳಿ ರಮೇಶ್