ಮಾಜಿ ಸಚಿವ ಜನಾರ್ದನ ರೆಡ್ಡಿ ( JANRDHAN REDDY ) ಹಾಗೂ ಸೋಮಶೇಖರ ರೆಡ್ಡಿ ( SOMSHEKHAR REDDY ) ಗೆ ಸಂಕಷ್ಟ ಎದುರಾಗಿದೆ. ರೆಡ್ಡಿ ಸಹೋದರರ ವಿರುದ್ದ ಇರುವ ಕೊಲೆ ಪ್ರಕರಣವನ್ನ ಸಿಬಿಐಗೆ ವಹಿಸುವಂತೆ ಕೊಲೆಯಾದ ಪಾಲಿಕೆ ಸದಸ್ಯೆ ಪದ್ಮಾವತಿ ಯಾದವ್ ಸಹೋದರ ಸುಬ್ಬಾರಾಯುಡು ಸಿಎಂ ಬೊಮ್ಮಾಯಿ ( BASAVRAJ BOMMAI ) ಗೆ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ( NARENDRA MODI ) ಯವರಿಗೆ ಪತ್ರ ಬರೆದಿದ್ದಾರೆ.
೧೨ ವರ್ಷದಿಂದ ಕಾನೂನು ಹೋರಾಟ ಬಿಡದ ಪದ್ಮಾವತಿ ಸಹೋದರ ಪತ್ರದಲ್ಲಿ ಜನಾರ್ದನ ರೆಡ್ಡಿ , ಸೋಮಶೇಖರ ರೆಡ್ಡಿ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ಪ್ರಕರಣದ ತನಿಖೆಯಲ್ಲಿ ತಮ್ಮ ಹೇಳಿಕೆ ಪಡೆಯದೆ ಸಿಐಡಿಯಿಂದ ವರದಿ ಸಲ್ಲಿಕೆ ಆರೋಪವನ್ನು ಮಾಡಿದ್ದಾರೆ. ಸಿಐಡಿಯಿಂದ ಆರೋಪಿತರು ಪತ್ತೆ ಇಲ್ಲವೆಂದು ಸಿ ರಿಪೋರ್ಟ್ ಸಲ್ಲಿಕೆಯಾಗಿತ್ತು. ಇದನ್ನು ಓದಿ : – ದೀವಟಿಗೆ ಸಲಾಂ ಪೂಜೆ ನಿಲ್ಲಿಸುವಂತೆ ರಾಜ್ಯ ಧಾರ್ಮಿಕ ಪರಿಷತ್ ಸುತ್ತೋಲೆ – ಮುಜರಾಯಿ ಇಲಾಖೆಯ ಹೆಸರು ಬದಲಾವಣೆ
೨೦೧೫ ರಿಂದ ಬಳ್ಳಾರಿ ( BALLARI ) ನ್ಯಾಯಾಲಯಕ್ಕೆ ಸಿ ರಿಪೋರ್ಟ್ ಸಲ್ಲಿಕೆಯಾಗಿತ್ತು. ಸಿಬಿಐ ಗೆವಹಿಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುವಂತೆ ಹೇಳಿದ್ದಾರೆ. ತಮಗೆ ಪ್ರಾಣಹಾನಿಯಾದರೆ ಜನಾರ್ದನ ರೆಡ್ಡಿ, ಸೋಮಶೇಖರ ರೆಡ್ಡಿ ಕಾರಣ ಎಂದು ದೂರಿನಲ್ಲಿ ಹೇಳಿದ್ದಾರೆ. ಪ್ರಕರಣದಲ್ಲಿ ಎ 1 ಜನಾರ್ದನರೆಡ್ಡಿ, ಮಾಜಿ ಎ,ಎಸ್,ಪಿ ಆಶೋಕ್ ಕುರೆರಾ A2 ಆರೋಪಿ ಹಾಗೂ ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.
ಇದನ್ನು ಓದಿ : – ಉಡುಪಿ ಕೃಷ್ಣನ ದರ್ಶನ ಪಡೆದ “ಸಿಂಹಪ್ರಿಯ”