ಪಾಕಿಸ್ತಾನದ ವಿರುದ್ಧ ಭಾರತಕ್ಕೆ 5 ವಿಕೆಟ್‌ ಗಳ ರೋಚಕ ಜಯ

ಆಲ್‌ ರೌಂಡರ್‌ ರವೀಂದ್ರ ಜಡೇಜಾ ಜವಾಬ್ದಾರಿಯುತ ಬ್ಯಾಟಿಂಗ್‌ ಹಾಗೂ ಪಾಂಡ್ಯ ಆಲ್‌ ರೌಂಡರ್‌ ಆಟದಿಂದ ಟೀಂ ಇಂಡಿಯಾ ಪಾಕಿಸ್ತಾನದ ವಿರುದ್ಧ 5 ವಿಕೆಟ್‌ಗಳ ರೋಚಕ ಜಯಗಳಿಸಿದೆ.

ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಲ್ಲಿ ನಡೆದಂತ ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿಯ ಮೊದಲ ಪಂದ್ಯದಲ್ಲೇ ಭಾರತದ ಬೌಲರ್‌ ಗಳಿಂದ ಒತ್ತಡಕ್ಕೆ ಸಿಲುಕಿದ ಪಾಕಿಸ್ತಾನ 19.5 ಓವರ್‌ ಗಳಲ್ಲಿ 10 ವಿಕೆಟ್ ನಷ್ಟಕ್ಕೆ 147 ರನ್ ಗಳಿಸಿತು. ಈ ಮೂಲಕ ಭಾರತದ ಗೆಲುವಿಗೆ 148 ರನ್‌ ಗಳ ಗುರಿ ನೀಡಿತು. ಅಲ್ಪಮೊತ್ತದ ಗುರಿ ಬೆನ್ನತ್ತಿದ ಭಾರತ ನಿಗದಿತ 19.4 ಓವರ್‌ ಗಳಲ್ಲಿ 148 ರನ್‌ ಗಳನ್ನು ಪೇರಿಸುವ ಮೂಲಕ ಎದುರಾಳಿ ಪಾಕಿಸ್ತಾನ ಆಟಗಾರರಿಗೆ ಮಣ್ಣುಮುಕ್ಕಿಸಿತು.

ಟಾಸ್‌ ಸೋತು ನಂತರ ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾಕ್ಕೆ ಅರಂಭದಲ್ಲೇ ಆಘಾತ ಎದುರಾಗಿತ್ತು. ಮೊದಲ ಎರಡು ಎಸೆತಗಳಲ್ಲೇ ಆರಂಭಿಕ ಆಟಗಾರ ಕೆ.ಎಲ್‌.ರಾಹುಲ್‌ ಡಕೌಟ್‌ ಆದರು. 2ನೇ ಕ್ರಮಾಂಕದಲ್ಲಿ ಕ್ರೀಸ್‌ ಗಿಳಿದು ಅಬ್ಬರಿಸಿದ ವಿರಾಟ್‌ ಕೊಹ್ಲಿ ಪಾಕ್‌ ಬೌಲರ್‌ ಗಳನ್ನು ಬೆಂಡೆತ್ತಿದರು. ಇದನ್ನೂ ಓದಿ : – ಕೋವಿಡ್-19 ನೆಗೆಟಿವ್- ಟೀಂ ಇಂಡಿಯಾ ಸೇರಿದ ಕೋಚ್ ರಾಹುಲ್ ದ್ರಾವಿಡ್

ಟಾಸ್‌ ಸೋತು ಮೊದಲು ಕ್ರೀಸ್‌ ಗಿಳಿದ ಪಾಕ್‌ ತಂಡಕ್ಕೇ ಆರಂಭದಲ್ಲಿ ಆಘಾತ ಎದುರಾಯಿತು. ಟೀಂ ಇಂಡಿಯಾ ಬೌಲರ್‌ ಗಳ ಮಾರಕ ದಾಳಿಗೆ ತುತ್ತಾಗಿ 15 ರನ್‌ ಗಳಿಗೆ ಮೊದಲ ವಿಕೆಟ್‌ ಕಳೆದುಕೊಂಡಿತು. ಭುನೇಶ್ವರ್‌ ಅವರ 3ನೇ ಓವರ್‌ ನಲ್ಲೇ ಆರಂಭಿಕ ಬ್ಯಾಟರ್‌ ಬಾಬರ್ ಆಜಂ 10 ರನ್ ಗಳಿಸಿ ಪೆವಿಲಿಯನ್‌ ಸೇರಿದರು. ಈ ವೇಳೆ ಮತ್ತೊಬ್ಬ ಆರಂಭಿಕನಾಗಿದ್ದ ಮೊಹಮ್ಮದ್‌ ರಿಝ್ವಾನ್‌ ಸ್ಥಿರವಾಗಿ ನಿಂತರು. 42 ಎಸೆತಗಳನ್ನು ಎದುರಿದ ರಿಝ್ವಾನ್‌ 4 ಬೌಂಡರಿ, 1 ಸಿಕ್ಸರ್‌ ಸಿಡಿಸುವ ಮೂಲಕ 43 ರ ನ್‌ಗಳಿಸಿದರು.

ಈ ವೇಳೆ ಮಧ್ಯಮ ಕ್ರಮಾಂಕದಲ್ಲಿ ಬಂದ ಇಫ್ತಿಕರ್ ಅಹಮದ್ ರಿಝ್ವಾನ್‌ ಗೆ ಜೊತೆಯಾಗಿ ಉತ್ತಮ ಸಾಥ್‌ ನೀಡಿದರು. ಇಫ್ತಿಕರ್‌ 22 ಎಸೆತಗಳಲ್ಲಿ 28 ರನ್‌ (2 ಬೌಂಡರಿ, 1 ಸಿಕ್ಸರ್‌) ಸಿಡಿಸಿದರು. ಇವರಿಬ್ಬರ ಜವಾಬ್ದಾರಿಯುತ ಆಟದಿಂದ ಪಾಕಿಸ್ತಾನ ತಂಡ 140 ರನ್‌ಗಳ ಗಡಿ ದಾಟುವಲ್ಲಿ ಯಶಸ್ವಿಯಾಯಿತು. ಆಟಗಾರರು ಸ್ಥಿರವಾಗಿ ನಿಲ್ಲದೇ ಇದ್ದುದರಿಂದ ಪಾಕ್‌ ಭಾರತದ ಎದುರು ಮಂಡಿಯೂರಿತು.

ಇದನ್ನೂ ಓದಿ : –  ನಾಳೆಯಿಂದ ಏಷ್ಯಾಕಪ್ 2022 ಕ್ರಿಕೆಟ್ ಟೂರ್ನಿ- ಭಾನುವಾರ ಭಾರತ ಪಾಕಿಸ್ತಾನ ಹಣಾಹಣಿ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!