ರಾಜ್ಯದಲ್ಲಿ 2000ಕ್ಕಿಂತ ಕಡಿಮೆ ಪ್ರಮಾಣದಲ್ಲಿ ಕೊರೊನಾ ಸೋಂಕು ಪ್ರಕರಣಗಳು ಬಂದಾಗ ಮಾತ್ರ ಲಾಕ್ ಡೌನ್ ರದ್ದು ಮಾಡಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ಸುಳಿವು ನೀಡಿದ್ದಾರೆ.
ಬೆಂಗಳೂರಿನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ 500ಕ್ಕಿಂತ ಕಡಿಮೆ ಹಾಗೂ ರಾಜ್ಯದಲ್ಲಿ 2 ಸಾವಿರ ಮೂರು ಸಾವಿರ ಕಡಿಮೆ ಸೋಂಕು ಪ್ರಕರಣಗಳು ಬರಬೇಕು. ಆಗ ಮಾತ್ರ ಲಾಕ್ ಡೌನ್ ಕೈ ಬಿಡುವ ಬಗ್ಗೆ ತೀರ್ಮಾನ ಎಂದರು.
ಕೋವಿಡ್ ಸಂಬಂಧಿತ ಸಚಿವರ ಸಭೆ ನಾಳೆ ಇದೆ, ಎರಡು ದಿನಕ್ಕೊಮ್ಮೆ ಚರ್ಚೆ ಮಾಡುತ್ತೇವೆ. ಜೂನ್ 5 ಅಥವಾ 6ರೊಳಗೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಅವರು ಭರವಸೆ ನೀಡಿದರು.