ಕೌಟುಂಬಿಕ ಕಲಹ ಹಿನ್ನೆಲೆ –ಇಬ್ಬರು ಮಕ್ಕಳೊಂದಿಗೆ ನೇಣು ಬಿಗಿದುಕೊಂಡು ಗೃಹಿಣಿ ಆತ್ಮಹತ್ಯೆ

ಇಬ್ಬರು ಮಕ್ಕಳ ಜೊತೆ ಮಹಿಳೆಯು ನೇಣಿಗೆ ಶರಣಾಗಿರುವ ಘಟನೆ ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲೂಕಿನ ರಾಮೇಗೌಡನಪುರ ಗ್ರಾಮದಲ್ಲಿ ನಡೆದಿದೆ.

ಸರೋಜ (32) ಆತ್ಮಹತ್ಯೆಗೆ ಶರಣಾಗಿರುವ ಗೃಹಿಣಿ. ಗೀತಾ (6), ಕುಸುಮ (4) ಮೃತ ಮಕ್ಕಳು. ಕುಟುಂಬ ಕಲಹದ ಹಿನ್ನೆಲೆಯಲ್ಲಿ ನೇಣು ಬಿಗಿದುಕೊಂಡು ಸರೋಜ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸರೋಜ ನರಸೀಪುರ ತಾಲೂಕಿನ ಮಾವಿನಹಳ್ಳಿ ಗ್ರಾಮದ ನಿಂಗರಾಜು ಜೊತೆ ವಿವಾಹವಾಗಿದ್ದರು. ಆದರೆ ಗಂಡ ನಿಂಗರಾಜುಗೆ ಅಕ್ರಮ ಸಂಬಂಧ ಇರುವ ವಿಷಯಕ್ಕೆ ಪದೇ ಪದೇ ಗಲಾಟೆ ಆಗುತ್ತಿತ್ತು. ಇದನ್ನೂ ಓದಿ : – COMED-K – ಕಾಮೆಡ್ – ಕೆ ರದ್ದು ಮಾಡಿದ್ರೆ ಕಾನೂನು ಹೋರಾಟ – ಸರ್ಕಾರಕ್ಕೆ ಎಚ್ಚರಿಕೆ ನೀಡಿದ ಶಿಕ್ಷಣ ಸಂಸ್ಥೆಗಳು

ಕೆಲ ದಿನಗಳ ಹಿಂದೆ ಸರೋಜ ಗಂಡನ ಮನೆಯಿಂದ ಸ್ವಗ್ರಾಮ ರಾಮೇಗೌಡನಪುರಕ್ಕೆ ಆಗಮಿಸಿದ್ದರು. ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣಿಗೆ ಶರಣಾಗಿದ್ದಾರೆ. ಮೃತ ದೇಹಗಳನ್ನು ತಿ.ನರಸೀಪುರ ಸಾರ್ವಜನಿಕ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದೆ. ಘಟನೆ ಸಂಬಂಧಿಸಿ ತಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : – ಗುತ್ತಿಗೆದಾರರ ಸಂಘದಿಂದ 40% ಕಮಿಷನ್ ಆರೋಪ- ದಾಖಲೆ ಸಲ್ಲಿಸುವಂತೆ ಕೆಂಪಣ್ಣಗೆ ಕೇಂದ್ರ ಗೃಹ ಕಚೇರಿಯಿಂದ ಕರೆ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!