ರಾಜ್ಯದ ರೈತರ ಸಾಲ ನೀತಿ ಬದಲಾಯಿಸಬೇಕು, ಕೃಷಿ ಸಾಲಕ್ಕೆ ಸಿಬಿಲ್ ಸ್ಕೋರ್ ರದ್ದುಗೊಳಿಸಲು ಒತ್ತಾಯಿಸಿ ನೃಪತುಂಗ ರೋಡ್ ನಲ್ಲಿರುವ ರಿಸರ್ವ್ ಬ್ಯಾಂಕ್ ಮುಂದೆ ರೈತರು ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತ ಕುಮಾರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ರಾಜ್ಯದ ಮೂಲೆ ಮೂಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ರೈತರು ಆಗಮಿಸಿದ್ದಾರೆ. ಈ ವೇಳೆ ಆರ್ ಬಿ ಐ (RBI ) ಮುಂದೆ ಪ್ರತಿಭಟನೆ ಮಾಡದಂತೆ ಪೊಲೀಸರು ಮನವಿ ಮಾಡಿದ್ದಾರೆ.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಕುರುಬೂರು ಶಾಂತ ಕುಮಾರ್ 20 ದಿನಗಳ ಹಿಂದೆಯೇ ನಾವು ಬೆಂಗಳೂರು ಆರ್ ಬಿ ಐ ಮುಖ್ಯಸ್ಥರಿಗೆ ಪತ್ರ ಬರೆದಿದ್ವಿ. ಆದರೆ ಇಲ್ಲಿಯವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಈಗ ನಮ್ಮ ಜೊತೆಗೆ ಮಾತುಕತೆ ಮಾಡ್ತೀವಿ ಅಂತಿದ್ದಾರೆ. ಇದು ಆರ್ ಬಿ ಐ ಅಧಿಕಾರಿಗಳ ಕರ್ತವ್ಯ ಲೋಪ. ರೈತರಿಗೆ ಸಾಲ ನೀಡುವ ಸಂದರ್ಭದಲ್ಲಿ ಸಿಬಿಲ್ ಸ್ಕೋರ್ ನೋಡಿ ಸಾಲ ನೀಡಬಾರದು ಎನ್ನುತ್ತಾರೆ. ಬರಗಾಲ, ಅತಿವೃಷ್ಠಿ, ಅನಾವೃಷ್ಠಿಯಿಂದ ರೈತರು ಸಂಕಷ್ಟಕ್ಕೊಳಗಾಗುತ್ತಾರೆ. ಇದನ್ನೂ ಓದಿ : – ಗುತ್ತಿಗೆದಾರರ ಸಂಘದಿಂದ 40% ಕಮಿಷನ್ ಆರೋಪ- ದಾಖಲೆ ಸಲ್ಲಿಸುವಂತೆ ಕೆಂಪಣ್ಣಗೆ ಕೇಂದ್ರ ಗೃಹ ಕಚೇರಿಯಿಂದ ಕರೆ
ಇದರಿಂದ ಸರಿಯಾದ ಸಮಯಕ್ಕೆ ಸಾಲ ಪಾವತಿಸಲು ಆಗೋದಿಲ್ಲ. ಇಂತಹ ಸಂದರ್ಭಗಳಲ್ಲಿ ಸ್ಕೋರ್ ನೋಡಿ ಸಾಲ ನೀಡುವುದು ಎಷ್ಟು ಸರಿ. ಕೊರೋನಾ ಸಮಯದಲ್ಲಿ ರೈತರು ಬೆಳೆಗಳನ್ನು ರೋಡ್ ಗೆ ಚೆಲ್ಲಿದ್ರು ಇದರಿಂದ ನಷ್ಟವಾಗಿದೆ. ಆರ್ ಬಿ ಐ ಅಧಿಕಾರಿಗಳು 7-8 ರೈತರು ಬನ್ನಿ ಅಂತ ಹೇಳಿದ್ದಾರೆ. ನಾವು ಎಷ್ಟು ರೈತರು ಮಾತುಕತೆಗೆ ಹೋಗಬೇಕು ಎಂದು ತೀರ್ಮಾನ ಮಾಡಿಲ್ಲ. ಕೂಡಲೇ ಆರ್ ಬಿ ಐ ನೀತಿಯನ್ನು ವಾಪಸ್ ಪಡೆಯಬೇಕು. ಇಲ್ಲಾಂದ್ರೆ ನಮ್ಮ ಹೋರಾಟ ಮುಂದುವರಿಯುತ್ತದೆ. ಕೋಟಿ ರೂಪಾಯಿ ಬೆಲೆಬಾಳುವ ಜಮೀನಿಗೆ 1 ಲಕ್ಷ ರೂಪಾಯಿ ಸಾಲ ಕೊಡ್ತಿಲ್ಲ. ಮನೆ ಕಟ್ಟಲು ಮಾತ್ರ ಲಕ್ಷ ಲಕ್ಷ ಸಾಲ ಕೊಡ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ರು.
ಇದನ್ನೂ ಓದಿ : – ಪ್ರಧಾನಿ ಮೋದಿ ಇದ್ದಲ್ಲಿಗೆ ಬಂದು ಕೈ ಕುಲುಕಿ ಮಾತನಾಡಿಸಿದ ಅಮೆರಿಕ ಅಧ್ಯಕ್ಷ – ವಿಡಿಯೋ ವೈರಲ್