ದೋಹಾ (Doha) ದಲ್ಲಿ ನಡೆದ ಪಂದ್ಯದಲ್ಲಿ ಯುರೋಪಿ (Europe) ಯನ್ ದೈತ್ಯ ತಂಡ ಜರ್ಮನಿಯನ್ನು ಅಂಡರ್ ಡಾಗ್ ಕುಖ್ಯಾತಿಯ ಜಪಾನ್ 2-1 ಗೋಲುಗಳಿಂದ ಸೋಲಿಸಿದೆ. ಕತಾರ್ (Qatar) ನಲ್ಲಿ ಚಾಲ್ತಿಯಲ್ಲಿರುವ FIFA ವಿಶ್ವಕಪ್ (Fifa world cup) ನಲ್ಲಿ ದೈತ್ಯ ತಂಡಗಳಿಗೆ ಉಳಿಗಾಲವಿಲ್ಲ ಎಂಬಂತಾಗಿದೆ. ಅರ್ಜೆಂಟೀನಾ, ಕೊವೇಷಿಯಾ ತಂಡಗಳು ಶಾಕ್ ಅನುಭವಿಸಿದ ಬೆನ್ನಲ್ಲೇ 4 ಬಾರಿಯ ವಿಶ್ವ ಚಾಂಪಿಯನ್ ಜರ್ಮನಿಗೆ ಏಷ್ಯಾ ಖಂಡದ ಫುಟ್ಬಾಲ್ ತಂಡ ಜಪಾನ್ ಬರೆ ಎಳೆದಿದೆ.
4 ಬಾರಿಯ ವಿಶ್ವಕಪ್ ಚಾಂಪಿಯನ್ ಜರ್ಮನಿ (Germany) ಮೊದಲಾರ್ಧದಲ್ಲಿ ಸಂಪೂರ್ಣ ಪ್ರಾಬಲ್ಯ ಸಾಧಿಸಿತು. 33ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಅವಕಾಶವನ್ನು ಇಲ್ಕೆ ಗುಂಡೋಗನ್ ಗೋಲಾಗಿ ಪರಿವರ್ತಿಸುವ ಮೂಲಕ ಜರ್ಮನಿಗೆ 1-0 ಮುನ್ನಡೆ ತಂದು ಕೊಟ್ಟರು. ಮೊದಲ ಅವಧಿಯಲ್ಲಿ ಜರ್ಮನಿ ಆಟಗಾರರ ಕಾಲ್ಗಳಕದ ಮುಂದೆ ಬಸವಳಿದ ಜಪಾನಿಯರು ದ್ವಿತೀಯಾರ್ಧದಲ್ಲಿ ಸೆಟೆದು ನಿಂತು ಚುರುಕಿನ ಆಟವಾಡಿದ್ದಾರೆ. 8 ನಿಮಿಷಗಳ ಅಂತರದಲ್ಲಿ 2 ಗೋಲು ಬಾರಿಸಿ ಪಂದ್ಯವನ್ನು ಗೆದ್ದರು. 2ನೇ ಅವಧಿಯ 75ನೇ ನಿಮಿಷದಲ್ಲಿ ಜಪಾನಿನ ರಿತ್ತು ದೋಸನ್ ಜರ್ಮನಿಯ ಭದ್ರಕೋಟೆಯಲ್ಲಿ ಭೇದಿಸಿ ಚೆಂಡನ್ನು ಗೋಲುಪೆಟ್ಟಿಗೆ ಸೇರಿಸಿ 11 ರ ಸಮಬಲ ಸಾಧಿಸುವಂತೆ ಮಾಡಿದರು. ಮ್ಯಾನುಯೆಲ್ ನ್ಯೂಯರ್ ನೀಡಿದ ಅದ್ಭುತ ಪಾಸ್ ನ್ನು ವ್ಯರ್ಥ ಮಾಡದ ರಿತ್ತು ದೋಸನ್ ಜರ್ಮನಿಯ ಗೋಲ್ ಕೀಪರ್ ಟಕುಮಿ ಮಿನಾಮಿನೊ ಅವರನ್ನು ಯಾಮಾರಿಸಿ ಗೋಲು ಗಳಿಸಿದರು. ಇದನ್ನೂ ಓದಿ : – ಮ್ಯಾಂಚೆ ಸ್ಟರ್ ಯುನೈಟೆಡ್ ತೊರೆದ ಕ್ರಿಸ್ಟಿಯಾನೊ ರೊನಾಲ್ಡೊ
ಬಳಿಕ 8 ನಿಮಿಷಗಳ ಅಂತರದಲ್ಲಿ ಅಂದರೆ 83ನೇ ನಿಮಿಷದಲ್ಲಿ ಜಪಾನಿನ ಟಕುಮಾ ಅನಾಮೊ ಗೋಲು ಗಳಿಸಿದರು. ಇದು ಜರ್ಮನಿಗೆ ಮರ್ಮಾಘಾತ ನೀಡಿತು. ಪಂದ್ಯವನ್ನು ಕನಿಷ್ಠ ಡ್ರಾ ಮಾಡಿಕೊಳ್ಳಲು ಯತ್ನಿಸಿ ಕೊನೆಗೆ ಗೋಲು ಗಳಿಸಲಾಗದೇ ಸೋಲು ಕಂಡಿತು. ವಿಶೇಷ ಅಂದರೆ ಇದೇ ಮೊದಲ ಬಾರಿಗೆ ಉಭಯ ತಂಡಗಳು ವಿಶ್ವಕಪ್ ನಲ್ಲಿ ಮುಖಾಮುಖಿಯಾಗಿವೆ. ಮೊದಲ ಸೆಣಸಾಟದಲ್ಲೇ ಜಪಾನ್ ಗೆಲುವು ಕಂಡಿದೆ.
ಇದನ್ನೂ ಓದಿ : – ಬ್ಯಾಟಿಂಗ್ ನಲ್ಲಿ ನಿರಂತರ ವೈಫಲ್ಯ ಹಿನ್ನೆಲೆ – ಕುಕ್ಕೆಗೆ ಮೊರೆ ಹೋದ K. L. ರಾಹುಲ್