2017ನೇ ಸಾಲಿನ ಕರ್ನಾಟಕ ಚಲನಚಿತ್ರ ರಾಜ್ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ದಿನಾಂಕ ಪ್ರಕಟಗೊಂಡಿದೆ. ಡಾ.ರಾಜ್ ಕುಮಾರ್ ಹುಟ್ಟು ಹಬ್ಬದ ದಿನದಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ 2017ನೇ ಸಾಲಿನ ಚಲನಚಿತ್ರ ಪ್ರಶಸ್ತಿಗಳನ್ನು ನೀಡಿ ಗೌರವಿಸಲಿದ್ದಾರೆ.
ಏಪ್ರಿಲ್ 24 ರಂದು ಸಂಜೆ 6 ಗಂಟೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಕಾರ್ಯಕ್ರಮ ನಡೆಯಲಿದೆ. ಶುದ್ಧಿ, ಮಾ.ರ್ಚ್ 22, ಪಡ್ಡಾಯಿ (ತುಳು) ಚಿತ್ರಗಳು ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಅತ್ಯುತ್ತಮ ಚಿತ್ರಗಳಾಗಿವೆ. ಇದನ್ನೂ ಓದಿ :- KGF ಆರ್ಭಟಕ್ಕೆ ಹಿಂದಿಯ ಹಳೆಯ ದಾಖಲೆಗಳೆಲ್ಲ ಧೂಳಿಪಟ- ಒಟ್ಟು 720 ಕೋಟಿ ರೂ. ಕಲೆಕ್ಷನ್!
ವಿಶೇಷ ಸಾಮಾಜಿಕ ಕಾಳಜಿಯ ಚಿತ್ರವಾಗಿ ಹೆಬ್ಬಟ್ ರಾಮಕ್ಕ, ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರವಾಗಿ ರಾಜಕುಮಾರ, ಅತ್ಯುತ್ತಮ ಮಕ್ಕಳ ಚಿತ್ರ ಎಳೆಯರು ನಾವು ಗೆಳೆಯರು, ಅತ್ಯುತ್ತಮ ನಟಿ ತಾರಾ ಅನುರಾಧ, ಅತ್ಯುತ್ತಮ ಪೋಷಕ ನಟಿ ರೇಖಾ, ಅತ್ಯುತ್ತಮ ಸಂಗೀತ ನಿರ್ದೇಶನ ಪ್ರಶಸ್ತಿಗೆ ವಿ.ಹರಿಕೃಷ್ಣ ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ :- ಕೆಜಿಎಫ್ -2 ನಟಿ ಅರ್ಚನಾ ಜೋಯಿಸ್ ಜೊತೆಗೆ ಸೆಲ್ಪಿಗೆ ಮುಗಿಬಿದ್ದ ಅಭಿಮಾನಿಗಳು