ಪಾನಿಪುರಿ ಕಿಟ್ಟಿ ( PANIPURI KITTY ) ಮೇಲೆ FIR ದಾಖಲಾಗಿದ್ದು, ನಟ ದುನಿಯಾ ವಿಜಯ್ ದೂರು ನೀಡಿದ್ದಾರೆ. 2018ರ ಪ್ರಕರಣ ಮತ್ತೆ ರೀ ಓಪನ್ ಆಗಿದ್ದು, ಹೈ ಕೋರ್ಟ್ ಸೂಚನೆ ಮೇರೆಗೆ ಪಾನಿಪುರಿ ಕಿಟ್ಟಿ ಮತ್ತು ಮಾರುತಿ ಗೌಡ ಮೇಲೆ FIR ದಾಖಲಾಗಿದೆ.
2018ರಲ್ಲಿ ದುನಿಯಾ ವಿಜಿ ವಿರುದ್ಧ ಕೊಲೆಯತ್ನ ಕೇಸ್ ದಾಖಲಾಗಿತ್ತು, ದುನಿಯಾ ವಿಜಯ್ ಕೊಟ್ಟಿದ್ದ ದೂರನ್ನ ಪೊಲೀಸರು NCR ಮಾಡಿದ್ದರು, ಈ ಸಂಬಂಧ ವಿಜಿ ಕೋರ್ಟ್ ಗೆ ಖಾಸಗಿ ದೂರು ನೀಡಿದ್ದರು, ನಟ ದುನಿಯಾ ವಿಜಯ್ ಕೋರ್ಟ್ ಮೂಲಕ FIR ಮಾಡಿಸಿದ್ದು, ವಿಜಯ್ ನೀಡಿದ ದೂರಿನ ಮೇರೆಗೆ IPC-427, 506, 34ರಡಿ FIR ಹಾಕಲಾಗಿದೆ. ಇದನ್ನು ಓದಿ : – ರಶ್ಮಿಕಾ ಮಂದಣ್ಣ ಇನ್ ಸ್ಟಾ ಗ್ರಾಮ್ ಖಾತೆ ಹ್ಯಾಕ್ ಆಯ್ತಾ…?
ಘಟನೆ ಹಿನ್ನೆಲೆ ಏನು..?
ವಸಂತನಗರ ( VASANTHA NAGARA ) ಅಂಬೇಡ್ಕರ್ ಭವನದಲ್ಲಿ ದೇಹದಾರ್ಢ್ಯ ಸ್ಪರ್ಧೆ ಆಯೋಜಿಸಲಾಗಿತ್ತು. ಈ ವೇಳೆ ಪಾನಿಪುರಿ ಕಿಟ್ಟಿ ಟೀಂ ಮತ್ತು ದುನಿಯಾ ವಿಜಯ್ ಟೀಂ ನಡುವೆ ಗಲಾಟೆ ನಡೆದಿತ್ತು. ಕಿಟ್ಟಿ ಸೋದರ ಮಾರುತಿ ಗೌಡ ಮೇಲೆ ಹಲ್ಲೆ ನಡೆಸಿದ್ದ ಆರೋಪವಿದ್ದು, ನನ್ನ ಮಗನಿಗೆ ಬೆದರಿಕೆ ಹಾಕಿದ್ದಾರೆಂದು ದುನಿಯಾ ವಿಜಿ ದೂರಿದ್ದರು. ಎರಡೂ ಕಡೆ ಕೌಂಟರ್ ಕಂಪ್ಲೆಂಟ್ ದಾಖಲಾಗಿತ್ತು. ಸದ್ಯ ವಿಜಯ್ ಮೇಲಿರುವ ಕೇಸ್ ಕೋರ್ಟ್ ನಲ್ಲಿ ನಡೀತಾ ಇದೆ. ಪಾನಿಪುರಿ ಕಿಟ್ಟಿ ಮೇಲೆ ನೀಡಿದ್ದ ದೂರು ಕ್ಲೋಸ್ ಮಾಡಲಾಗಿತ್ತು, ಇನ್ನೊಮ್ಮೆ ಕೇಸ್ ಮಾಡಿ,ತನಿಖೆ ನಡೆಸಲು ಕೋರ್ಟ್ ಸೂಚನೆ ಕೊಟ್ಟಿದ್ದು, ಕೋರ್ಟ್ ಸೂಚನೆ ಮೇಲೆ ಪಾನಿಪುರಿ ಕಿಟ್ಟಿ, ಮಾರುತಿ ಗೌಡ ಮೇಲೆ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.
ಇದನ್ನು ಓದಿ : – ಅರುಣಾಚಲ ಪ್ರದೇಶದಲ್ಲಿ ಯುದ್ಧ ವಿಮಾನ ಗಸ್ತು ನಡೆಸುತ್ತಿರುವ ಭಾರತೀಯ ವಾಯುಪಡೆ