ರೆಡ್ಡಿ ಪಾಳಯದಿಂದ ಬಳ್ಳಾರಿ( bellari ) ಯಲ್ಲಿ ಬಿಜೆಪಿಗೆ ಮೊದಲ ಶಾಕ್ ಎದುರಾಗಿದೆ. ಬಳ್ಳಾರಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಗಾಲಿ ಜನಾರ್ದನ ರೆಡ್ಡಿ ( janaradhan reddy ) ಕಟ್ಟಾ ಬೆಂಬಲಿಗ ದಮ್ಮೂರು ಶೇಖರ್ ( dammuru shekhar ) ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಜನಾರ್ದನ ರೆಡ್ಡಿ ಹೊಸ ಪಕ್ಷ ಘೋಷಣೆ ಬೆನ್ನಲ್ಲೇ ಬಿಜೆಪಿಯ ಮೊದಲ ವಿಕೆಟ್ ಪತನವಾಗಿದೆ.
ಬಿಜೆಪಿ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ಆಪ್ತ ದಮ್ಮೂರು ಶೇಖರ್ ರಾಜೀನಾಮೆ ನೀಡಿದ್ದಾರೆ. ಬಳ್ಳಾರಿ ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷನಾಗಿದ್ದ ದಮ್ಮೂರು ಶೇಖರ್, ಮಾಜಿ ಬುಡಾ ಅಧ್ಯಕ್ಷ.ದಕ್ಷಿಣ ಭಾರತದಲ್ಲಿ ಬಿಜೆಪಿ ( bjp ) ಅಧಿಕಾರಕ್ಕೆ ತರುವಲ್ಲಿ ಜನಾರ್ದನ ಪಾತ್ರ ಅಮ್ಯೂಲವಾಗಿತು.
ಆದ್ರೆ ಜನಾರ್ದನ ರೆಡ್ಡಿ ಅವರನ್ನ ಪಕ್ಷ ನಡೆಸಿಕೊಂಡ ರೀತಿ ಸರಿಯಿಲ್ಲ ಎಂದು ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿ ದಮ್ಮೂರು ಶೇಖರ್ ಬಿಜೆಪಿಯಿಂದ ಹೊರ ಬಂದಿದ್ದಾರೆ. ಬಳ್ಳಾರಿ ಜಿಲ್ಲಾಧ್ಯಕ್ಷರಿಗೆ ರಾಜಿನಾಮೆ ಪತ್ರ ಸಲ್ಲಿಸಿದ್ದಾರೆ.
ಇದನ್ನು ಓದಿ : – ಭಾರತದ ಒಡಿಶಾದಲ್ಲಿ ರಷ್ಯಾದ ಶ್ರೀಮಂತ ಸಂಸದ ಆಂಟೊನೊವ್ ನಿಗೂಢ ಸಾವು..!