ಅಂಗನವಾಡಿ ಕೇಂದ್ರದಲ್ಲಿ ಅನ್ನದ ಗಂಜಿ ಬಿದ್ದು, ಐವರು ಮಕ್ಕಳಿಗೆ ಗಂಭೀರ ಗಾಯಗೊಂಡ ಘಟನೆ ರಾಯಚೂರು ನಗರದಲ್ಲಿ ನಡೆದಿದೆ.
ನಗರದ ಮಂಗಳವಾರ ಪೇಟೆಯ ಅಂಗನವಾಡಿ ಕೇಂದ್ರದಲ್ಲಿ ಅಡುಗೆ ಸಹಾಯಕಿ ಲಕ್ಷ್ಮಿ ಅನ್ನದ ಗಂಜಿ ಬಸಿಯುತ್ತಿರುವಾಗ ಆಟವಾಡುತ್ತಿದ್ದ ಮಕ್ಕಳು ಡಿಕ್ಕಿ ಹೊಡೆದದ್ದರಿಂದ, ಅನ್ನದ ಗಂಜಿ ಚೆಲ್ಲಿದೆ ಎಂದು ಹೇಳಲಾಗುತ್ತಿದೆ. ಬಿಸಿ-ಬಿಸಿಯಾಗಿದ್ದ ಅನ್ನದ ಗಂಜಿ ಮಕ್ಕಳ ಮೇಲೆ ಬಿದ್ದಿದ್ದರಿಂದ ಗಂಭೀರ ಗಾಯಗೊಂಡಿದ್ದಾರೆ. ಅದರಲ್ಲಿ, ಹಿಬಾ (3), ಅರ್ಹನ್ (3), ಮೊಹಮ್ಮದ್ ಜಾಹಿದ್ ( 3), ಶೇಕ್ ಅದ್ನನ್ (3) ಮತ್ತು ಬಿಬಿ ಮರಿಯಮ್ (3) ಗಾಯಗೊಂಡ ಮಕ್ಕಳಾಗಿದ್ದಾರೆ. ಗಾಯಗೊಂಡ ಮಕ್ಕಳಿಗೆ ಸಮೀಪದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಅಡುಗೆ ಸಹಾಯಕಿ ಲಕ್ಷ್ಮಿ ಮೇಲೆಯು ಗಂಜಿ ಬಿದ್ದಿದ್ದರಿಂದ ಆಕೆಯೂ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ : – ಸುಳ್ಳು ಪ್ರಕರಣಗಳಿಂದ ನಮ್ಮ ಧ್ವನಿ ಅಡಗಿಸಲು ಸಾಧ್ಯವಿಲ್ಲ – ಡಿ.ಕೆ ಶಿವಕುಮಾರ್