ಲಂಚ ಬೇಡಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಮಾಜಿ ಜಿಲ್ಲಾಧಿಕಾರಿ ಜೆ.ಮಂಜುನಾಥ್ (Manjunath) ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಹೈಕೋರ್ಟ್ (High Court) ವಜಾಗೊಳಿಸಿದೆ. ನ್ಯಾ.ಕೆ.ನಟರಾಜನ್ರ (k.Natrajan) ವರಿದ್ದ ಏಕಸದಸ್ಯ ಪೀಠ ಆದೇಶ ಹೊರಡಿಸಿದೆ. ಪ್ರಕರಣದಲ್ಲಿ ತನಿಖೆ ಇನ್ನೂ ಮುಕ್ತಾಯವಾಗಿಲ್ಲ. ಎಫ್ಎಸ್ಎಲ್ನಿಂದ ವರದಿ ಇನ್ನೂ ಬರಬೇಕಿದೆ. ಜಿಲ್ಲಾಧಿಕಾರಿ ಹುದ್ದೆ ದುರ್ಬಳಕೆಯ ಗಂಭೀರ ಆರೋಪವಿದೆ ಎಂದು ಎಸಿಬಿ ಪರ ವಕೀಲ ಪಿ.ಎನ್.ಮನಮೋಹನ್ (PN.Manmohan) ವಾದಿಸಿದ್ದಾರೆ.
ಬೆಂಗಳೂರು ನಗರ ಡಿಸಿ ಕಚೇರಿ ಮೇಲೆ ಎಸಿಬಿ ದಾಳಿ ಪ್ರಕರಣ ಸಂಬಂಧ ಭ್ರಷ್ಟಾಚಾರ ಆರೋಪದಲ್ಲಿ IAS ಅಧಿಕಾರಿ ಜೆ.ಮಂಜುನಾಥ್ ಅವರನ್ನು ಯಶವಂತಪುರ (Yehswanthpur) ದಲ್ಲಿರುವ ಅವರ ನಿವಾಸದಲ್ಲಿ ಜುಲೈ 4 ರಂದು ಎಸಿಬಿ ಅಧಿಕಾರಿಗಳು ಬಂಧಿಸಿದ್ದರು. ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿದ್ದಾಗ ಭ್ರಷ್ಟಾಚಾರ ಆರೋಪದ ಬಳಿಕ ಮಂಜುನಾಥ್ರನ್ನು ಸರ್ಕಾರ ವರ್ಗಾವಣೆಗೊಳಿಸಿತ್ತು. ಮಂಜುನಾಥ್ ವಿರುದ್ಧ ಭೂವ್ಯಾಜ್ಯ ಸಂಬಂಧ ಲಂಚ ಪಡೆದ ಆರೋಪ ಕೇಳಿಬಂದಿತ್ತು. ಕೆಳ ಹಂತದ ಅಧಿಕಾರಿಗಳ ಮೂಲಕ ಲಂಚ ಪಡೆದಿರುವ ಆರೋಪ ಅವರ ವಿರುದ್ಧ ಕೇಳಿಬಂದಿದ್ದು, ಪ್ರಕರಣದಲ್ಲಿ ಮೂರನೇ ಆರೋಪಿಯಾಗಿದ್ದಾರೆ.
ಇದನ್ನು ಓದಿ : – ಈ ರಾಜ್ಯದಲ್ಲಿ ಭ್ರಷ್ಟ ಬಿಜೆಪಿ ಸರ್ಕಾರವನ್ನ ಕಿತ್ತೊಗೆಯೋಣ – ಡಿ ಕೆ. ಶಿವಕುಮಾರ್