ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ ಸರ್ಕಾರಿ ಅಂತ್ಯಕ್ರಿಯೆ – ಪ್ರಧಾನಿ ಮೋದಿ ಭಾಗಿ

ಆಗಂತುಕನ ಗುಂಡಿನ ದಾಳಿಗೆ ಹತ್ಯೆಯಾಗಿದ್ದ ಜಪಾನ್ನ ಮಾಜಿ ಪ್ರಧಾನಿ ಶಿಂಜೋ ಅಬೆ ಸರ್ಕಾರಿ ಅಂತ್ಯಕ್ರಿಯೆ ಮಂಗಳವಾರ ನೆರವೇರಿದೆ.

ಆಗಂತುಕನ ಗುಂಡಿನ ದಾಳಿಗೆ ಹತ್ಯೆಯಾಗಿದ್ದ ಜಪಾನ್ನ ಮಾಜಿ ಪ್ರಧಾನಿ ಶಿಂಜೋ ಅಬೆ ಸರ್ಕಾರಿ ಅಂತ್ಯಕ್ರಿಯೆ ಮಂಗಳವಾರ ನೆರವೇರಿದೆ. ಪ್ರಧಾನಿ ನರೇಂದ್ರ ಮೋದಿ ( narendra modi ) ಸೇರಿದಂತೆ ಅನೇಕ ಜಾಗತಿಕ ನಾಯಕರು ಅಬೆ ಅವರ ಅಂತ್ಯಸಂಸ್ಕಾರದಲ್ಲಿ ಅಂತಿಮ ನಮನ ಸಲ್ಲಿಸಿದರು.


20ಕ್ಕೂ ಹೆಚ್ಚು ದೇಶಗಳು ಮತ್ತು ಸರ್ಕಾರಗಳ ಮುಖ್ಯಸ್ಥರು ಸೇರಿದಂತೆ 100ಕ್ಕೂ ಅಧಿಕ ದೇಶಗಳ ಪ್ರತಿನಿಧಿಗಳು ಈ ವೇಳೆ ಉಪಸ್ಥಿತರಿದ್ದರು. ಶೋಕದ ಸಂಕೇತವಾಗಿ ಕಪ್ಪು ಉಡುಗೆ ಧರಿಸಿದ್ದ ಗಣ್ಯರು, ಟೋಕಿಯೋದ ಬುಡೋಖ್ ಹಾಲ್ನಲ್ಲಿ ನೆರೆದಿದ್ದರು. ಶಿಂಜೋ ಅಬೆ ಅವರ ಪತ್ನಿ ಅಕೀ ಅವರು ಅಬೆ ಅವರ ಬೂದಿಯನ್ನು ಸಭಾಂಗಣಕ್ಕೆ ತಂದಾಗ 19 ಸುತ್ತಿನ ಗುಂಡು ಹಾರಿಸಿ ಗೌರವ ಸಲ್ಲಿಸಲಾಯಿತು. ಇದನ್ನೂ ಓದಿ : –  ಬಂಧಿತ PFI ಕಾರ್ಯಕರ್ತರ ಮೇಲೆ FIR ಇಲ್ಲ – PAR ಏನಿದು…?

ಶಿಂಜೋ ಅಬೆ ಅವರ ಪಾರ್ಥಿವ ಶರೀರದ ಅಂತ್ಯಸಂಸ್ಕಾರವನ್ನು ಜುಲೈ 11ರಂದು ನಡೆಸಲಾಗಿತ್ತು. ಬೌದ್ಧ ಧರ್ಮದ ವಿಧಿ ವಿಧಾನಗಳಿಗೆ ಅನುಗುಣವಾಗಿ ಅಂತ್ಯಕ್ರಿಯೆ ನಡೆಸಲಾಗಿತ್ತು. ಶಿಂಜೋ ಅಬೆ ಅವರು ಜುಲೈ 8ರಂದು ಲಿಬರಲ್ ಡೆಮಾಕ್ರಟಿಕ್ ಪಾರ್ಟಿ ಅಭ್ಯರ್ಥಿಯೊಬ್ಬರ ಪರ ಪ್ರಚಾರ ನಡೆಸುತ್ತಿದ್ದ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಅವರ ಮೇಲೆ ಗುಂಡು ಹಾರಿಸಿದ್ದ. ಸಾರ್ವಜನಿಕ ಸ್ಥಳದಲ್ಲಿಯೇ ಈ ಘಟನೆ ನಡೆದಿತ್ತು. ಆಸ್ಪತ್ರೆಗೆ ಸಾಗಿಸಿದರೂ, ಅಬೆ ಬದುಕುಳಿದಿರಲಿಲ್ಲ.

ಇದನ್ನೂ ಓದಿ : – ಸಂವಿಧಾನ ವಿರುದ್ಧವಾಗಿ ಆಪರೇಷನ್ ಕಮಲ ಮಾಡಿ ಅಸಂವಿಧಾನಿಕ ಸರ್ಕಾರ ರಚಿಸಿದ್ದು -ಇದು Bjp DirtyPolitics ಅಲ್ವೇ..?

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!